344 total views
ಕಾಳಗಿ: ಬರುವ ಏಪ್ರೀಲ್ ತಿಂಗಳಲ್ಲಿ ಆಚರಿಸಲಾಗುವ ಹಸಿರುಕ್ರಾಂತಿ ಹರಿಕಾರ ದೇಶ ಕಂಡ ಅಪ್ರತೀಮ
ರಾಜಕಾರಣಿಯಾಗಿರುವ ಡಾ.ಬಾಬುಜಗಜೀವನರಾಮ್ ಜೀ.. ಅವರ 116ನೇ ಕಾಳಗಿ ತಾಲೂಕು ಜಯಂತೋತ್ಸವ
ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಹರೀಶ್ ಸಿಂಗೆ ಅವರನ್ನು ಆಯ್ಕೆ ಮಾಡಲಾಯಿತು.ತಾಲೂಕಿನ ಮಾದಿಗ ಸಮಾಜದವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೇವಣಸಿದ್ದ ಕಟ್ಟಿಮನಿ ನೇತೃತ್ವದಲ್ಲಿ ನಡೆಸಲಾಗಿರುವ ಪ್ರಮುಖರ ಸಭೆಯಲ್ಲಿ ಸಮಾಜದ ಎಲ್ಲಾ ವ್ಯಕ್ತಿಗಳ ಸಮ್ಮತದಿಂದ ಜಯಂತೋತ್ಸವ ಸಮಿತಿ ರಚನೆಯನ್ನು ಮಾಡಲಾಯಿತು. ಕಳೆದ ವರ್ಷದಂತೆ ಈ ಬಾರಿಯೂ ಕೂಡ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡುವ ಮೂಲಕ ಮಹಾನಾಯಕರಾದ ಬಾಬೂಜೀ ಅವರ ದೇಶ ಪ್ರೇಮ, ಸಾಮಾಜಿಕ ಕಳಕಳಿ,ಹೋರಾಟದಮನೋಭಾವ, ಸ್ವಾಭಿಮಾನದ ಬದುಕು,ಪರಿಶುದ್ಧವಾದ ರಾಜಕೀಯ ಸೇರಿದಂತೆ ಅವರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತುವ ನಿಟ್ಟಿನಲ್ಲಿ ನೂತನ ಸಮಿತಿಯವರು, ಜಯಂತೋತ್ಸವ ಆಚರಣೆ ಮಾಡುವಂತೆ ಹಿರಿಯರು ಸಲಹೆ ಸೂಚನೆಗಳನ್ನು ನೀಡಿದರು.
ಸಮಿತಿ ರಚನೆಯ ವಿವರ:
ಸುಂದರ ಡಿ.ಸಾಗರ(ಗೌರವ ಅಧ್ಯಕ್ಷ), ಹರೀಶ ಸಿಂಗೆ(ಅಧ್ಯಕ್ಷ), ಹಣಮಂತ
ಮೆಲಕೇರಿ(ಕಾರ್ಯಾಧ್ಯಕ್ಷ), ಶಿವಶಂಕರ ವಾಲಿಕಾರ(ಪ್ರಚಾರ ಸಮಿತಿ ಅಧ್ಯಕ್ಷ), ಚಂದ್ರಕಾಂತ
ತಾಡಪಳ್ಳಿ(ಕೋಶಾಧ್ಯಕ್ಷ), ಅಜೀತ್ ರಟಕಲ್ ಮತ್ತು ಸಾಯಿಬಣ್ಣ ಕ್ರಾಂತಿ(ಉಪಾಧ್ಯಕ್ಷ), ಅಶೋಕ ಸಿಂಗೆ(ಪ್ರಧಾನ ಕಾರ್ಯದರ್ಶಿ), ಸತೀಷ ಸಕ್ರಿ(ಕಾರ್ಯದರ್ಶಿ), ಭೀಮರಾಯ
ಕೋರೆ(ಸಂಘಟನಾ ಕಾರ್ಯದರ್ಶಿ), ಮಹೇಶಬ ಭರತನೂರ(ಖಜಾಂಚಿ), ಕಾನೂನು ಸಲಹೆಗಾರರಾಗಿ
ರಾಣಪ್ಪ ಭೇಡಸೂರ, ಯುವ ಘಟಕದ ಅಧ್ಯಕ್ಷರನ್ನಾಗಿ ಶರಣು ರಾಜಾಪೂರ, ಮಾರ್ಶಲ್ ಮಂಗಲಗಿ, ಸುರೇಶ ಕೋಡ್ಲಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಭೇಯಲ್ಲಿ ಕಾಳಗಿ ತಾಲೂಕಿನ ಮಾದಿಗ ಸಮಾಜದ ಪ್ರಮುಖ ಮುಖಂಡರು, ಯುವಕರು ಸೇರಿದಂತೆ ಅನೇಕರು ಹಾಜರಿದ್ದರು.