492 total views
ಶಿಡ್ಲಘಟ್ಟ : ಜಂಗಮಕೋಟೆ ರಸ್ತೆಯಲ್ಲಿನ ಹಿತ್ತಲಹಳ್ಳಿ ಗೇಟ್ ಬಳಿಯಿರುವ ಶ್ರೀ ಸಾಯಿ ಪ್ಯಾಲೆಸ್ ಗ್ರೌಂಡ್ ನಲ್ಲಿ ಹಮ್ಮಿಕೊಂಡಿದ್ದ ಸಾವಿರಾರು ಜನ ಭಾಗವಹಿಸಿದ್ದ ಯುವ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಪುಟ್ಟು ಅಂಜನಪ್ಪ ಮಾತನಾಡಿ ಆಂಜಿನಪ್ಪನಿಗೆ ಮತವನ್ನು ನೀಡಿ ಶಾಸಕರಾಗಲು ಜನತೆ ಆಶಿರ್ವಾದ ನೀಡಬೇಕೆಂದು ಮನವಿ ಮಾಡಿಕೊಂಡರು.ಯುವಕರ ಶಕ್ತಿ ನಿಮ್ಮನ್ನ ನಾನು ನಂಬಿದ್ದೇನೆ ಅದೇ ನಂಬಿಕೆಯನ್ನ 2023ಕ್ಕೆ ಮತದಾನ ಮಾಡುವುದರ ಮೂಲಕ ನನ್ನನ್ನ ಆಯ್ಕೆ ಮಾಡಿ ನಿಮ್ಮಗಳ ಬೆಂಬಲಕ್ಕೆ ನಾನು ಸದಾ ಸಿದ್ದನಿರುತ್ತೇನೆ ಎಂದರು.
ಯುವಕರ ಕ್ರೀಡಾಮನೋಭಾವವನ್ನು ಅರಿತು ತಾಲ್ಲೂಕಿನಾದ್ಯಂತ 300ಕ್ಕೂ ಹೆಚ್ಚು ಕ್ರೀಡಾಪಟುಗಳ ತಂಡಕ್ಕೆ ವಾಲಿಬಾಲ್ ಕಿಟ್ ಗಳನ್ನು ವಿತರಿಸಿದರು.ಇನ್ನೂ ಶಿಡ್ಲಘಟ್ಟ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳು,ಶಾಲೆಗಳ ಅಭಿವೃದ್ಧಿಯಾಗಿಲ್ಲಾ. ಕೈಗಾರಿಕೆಗಳ ಸ್ಥಾಪನೆ ಇಲ್ಲಾ ಸಂಪೂರ್ಣವಾಗಿ ತಾಲೂಕು ಹಿಂದೆ ಉಳಿದಿದೆ.ಸೋತ್ರು ಸಂತೋಷ ಗೆದ್ರೂ ಸಂತೋಷ ಅಭಿವೃದ್ಧಿ ನಿಲ್ಲಿಸಲ್ಲ. ನಾನು ಇದೇ ಗ್ರಾಮದಲ್ಲಿ ಹುಟ್ಟಿ ಬೆಳದವನು.ಏಕಾಂಗಿಯಾಗಿ ಸತತ ಒಂಬತ್ತು ವರ್ಷಗಳಿಂದ ಹೋರಾಟ ಮಾಡಿದ್ದೇನೆ.ತಾಲ್ಲೂಕಿನಲ್ಲಿ ದೊಡ್ಡದೊಡ್ಡ ಕೈಗಾರಿಕೆಗಳಿಲ್ಲ, ಆದರೆ ಇಡೀ ದೇಶಕ್ಕೆ ರೇಷ್ಮೆಯನ್ನು ಉತ್ವಾದಿಸುವುದು ನಮ್ಮ ತಾಲ್ಲೂಕಾಗಿದೆ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣೀಯಾಗಿ ತಮ್ಮ ಸಮಾಜಸೇವೆಯ ಮೂಲಕ ಗುರ್ತಿಸಿಕೊಂಡಿರುವ ಆಂಜಿನಪ್ಪ (ಪುಟ್ಟು) ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಸುಮಾರು ವರ್ಷಗಳ ಕಾಲ ಸಮಾಜಸೇವೆ ಮಾಡಿಕೊಂಡು ಸಾಕಷ್ಟು ಸೇವೆ ಮಾಡಿಕೊಂಡು ಬಂದಿದ್ದೇವೆ. ಆದರೆ ಕೆಲವರು ಕ್ಷೇತ್ರದಲ್ಲಿ ವ್ಯಾಪಾರ ಮಾಡಲು ಬಂದಿದ್ದಾರೆ ಎಂದು ಮತ್ತೀರ್ವರಾದ ಕೈ ಅಭ್ಯರ್ಥಿ ರಾಜೀವ್ ಗೌಡ ಹಾಗೂ ಬ್ಯಾಲಹಳ್ಳಿ ಗೌವಿಂದಗೌಡ ವಿರುದ್ದ ಪರೋಕ್ಷವಾಗಿ ಟಾಂಗ್ ನೀಡಿದರು. ರಾಜಕೀಯವಾಗಿ ಕ್ಷೇತ್ರವನ್ನು ಅಭಿವೃದ್ದಿ ಮಾಡಲು ಉತ್ತಮರಿಗೆ ಅಧಿಕಾರ ನೀಡಬೇಕು. ಅಂತವರಿಗೆ ಮತವನ್ನು ನೀಡಬೇಕೆಂದು ತಿಳಿಸಿದರು. ನಾನು ಶಾಸಕ ಆಗಬೇಕೆಂದು ಸಾಮಾಜಿಕ ಸೇವೆ ಮಾಡಿರುವೇ ಆದರೆ ಯಾವುದೇ ದುರುದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು, ಕೆಟ್ಟ ದಿನಗಳು ಬರಬಹುದು, ಎಲ್ಲದಕ್ಕೂ ತಯಾರಿರಬೇಕು. ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಅವರ ಇಚ್ಛಾಶಕ್ತಿ ಯಿಂದ ಕೆರೆಗಳಲ್ಲಿ ನೀರು ತುಂಬಿಕೊಂಡಿವೆ.
ಈ ಕಾರ್ಯಕ್ರಮದಲ್ಲಿ ಬೆಳ್ಳೂಟಿ ಸಂತೋಷ್,ಗೌಡನಹಳ್ಳಿ ಮಂಜುನಾಥ್,ಕಾಳನಾಯಕನಹಳ್ಳಿ ರಮೇಶ್,ಹಿತ್ತಲಹಳ್ಳಿ ರಮೇಶ್, ಅಶ್ವಥ್ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಮತದಾರರು ಹಾಜರಿದ್ದರು.