421 total views
ಬಿಜೆಪಿ ಪಕ್ಷಕ್ಕೆ ಒಬ್ಬ ಸಮರ್ಥ ನಾಯಕರನ್ನು ಪರಿಚಯಿಸುವಂತಹ ಕೆಲಸವಾಗಿದೆ ಎಂದು ನಿಟ್ಟುಸಿರು ಬಿಟ್ಟ ಕಾರ್ಯಕರ್ತರು. ನಗರದ ಮಯೂರ ವೃತ್ತದಲ್ಲಿ ನೂತನ ಕಛೇರಿ ಉದ್ಘಾಟನೆ ಸಮಾರಂಭ ಹಮ್ಮಿಕೊಂಡಿದ್ದರು. ಮಾಜಿ ಶಾಸಕ ಎಂ ರಾಜಣ್ಣ ಮಾತನಾಡಿ ರಾಜ್ಯ ನಾಯಕರು ಈ ಕ್ಷೇತ್ರಕ್ಕೆ ಯಾರನ್ನಾದರೂ ಸಹ ಟಿಕೇಟ್ ನೀಡಿದರೂ ಅವರ ಪರವಾಗಿ ನಾವು ಕಲಸ ಮಾಡಲು ಸಿದ್ದರಿದ್ದೇವೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ಪಕ್ಷವಾಗಿ ಹೊರ ಹೊಮ್ಮಿದೆ ಯುವ ಜನತೆ ಬಿಜೆಪಿ ಪಕ್ಷ ಹಾಗೂ ನಮ್ಮ ಕೇಂದ್ರ ಪ್ರಧಾನ ಮಂತ್ರಿ ಮೋದಿಜಿಯವರ ಕಾರ್ಯವೈಖರಿ ಮೆಚ್ಚಿ ಇಂದು ಲಕ್ಷಾಂತರ ಕಾರ್ಯಕರ್ತರು ನಮ್ಮ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ, ಚಿಕ್ಕಬಳ್ಳಾಪುರ ಸಚಿವ ಡಾ.ಸುದಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು, ಸಂಸದ ಮುನಿಸ್ವಾಮಿಯವರಂತಹ ದಿಟ್ಟ ನಾಯಕರುಗಳು ನಮ್ಮ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವ ಕಾಲ ಇನ್ನು ದೂರ ಇಲ್ಲ ಈ ಬಾರಿಯೂ ಸಹ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರೆಂಟಿ ಅದಕ್ಕಾಗಿ ಪ್ರತಿ ಕ್ಷೇತ್ರಕ್ಕೆ ಸಮರ್ಥ ನಾಯಕ ಬೇಕೇ ಬೇಕು ಎಂದರು. ಬಿಜೆಪಿ ಪಕ್ಷದ ಸಿದ್ದಾಂತಕ್ಕೆ ನಾವು ಸಂಪೂರ್ಣ ಬದ್ದರಾಗಿ ಸೀವೆ ಸಲ್ಲಿಸುತ್ತಿದ್ದೇವೆ ಈ ಕ್ಷೇತ್ರದಲ್ಲಿ ಸಮರ್ಥ ನಾಯಕ ಎಂದು ಯಾರನ್ನು ಗುರುತಿಸಿದರು ಸರಿ ನಮ್ಮ ಸಂಪೂರ್ಣ ಬೆಂಬಲ ಅವರಿಗೆ ಎಂದರು. ರಾಜ್ಯ ವಿಭಾಗದ ಸಂಘಟನಾ ಕಾರ್ಯದರ್ಶಿ ಕಾಂತರಾಜು, ಆನಂದ ಗೌಡ, ಗ್ರಾಮಾಂತರ ಅದ್ಯಕ್ಷ ಸುರೇಂದ್ರ ಗೌಡ, ಕ್ಷೇತ್ರದ ಅನೇಕ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.