350 total views
ಸಿರುಗುಪ್ಪ ತಾಲೂಕಿನ ಟಿ ರಾಂಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳಿಗೆ ಸರಸ್ವತಿ ಪೂಜೆ ಮತ್ತು ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು.
ಶಾಲೆಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ತೆಂಗಿನ ಕಾಯಿ ಕರ್ಪೂರ ಬೆಳೆಗೆ, ಪುಷ್ಪಾಂಜಲಿ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಅಯ್ಯನಗೌಡ ನಮ್ಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವರ ಭವಿಷ್ಯ ಮುಜ್ಜಲವಾಗಿ ಒಂದು ಉತ್ತಮ ಸ್ಥಾನದಲ್ಲಿ ಬೆಳೆಯಲಿ ಜೊತೆಗೆ ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗಡೆ ಉಳಿಯದೆ ಎಲ್ಲರೂ ಶಿಕ್ಷಣ ಪಡೆಯಿರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಶಾಲೆಯ ಎಸ್‌ಟಿಎಂ ಅಧ್ಯಕ್ಷರು ಹಾಗೂ ಊರಿನ ಹಿರಿಯರು ಭಾಗಿಯಾಗಿದ್ದರು.
ವರದಿ. ಶೇಖರ್ ನಾಯಕ