296 total views
ಮೈಸೂರು :- ಮೈಸೂರು ನ ಪೋದರ್ ಇಂಟರ್ನ್ಯಾಷನಲ್ ಶಾಲೆ ವತಿಯಿಂದ ಪೋದರ್ ವಾಲೆಂಟರ್ ಕಾರ್ಯಕ್ರಮ ವನ್ನು ಛಾಯಾದೇವಿ ಅನಾಥಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪೋದರ್ ಇಂಟರ್ನ್ಯಾಷನಲ್ ಶಾಲೆಯು ಅಲ್ಲಿನ ಮಕ್ಕಳಿಗೆ ಪುಸ್ತಕದಲ್ಲಿರುವ ವಿದ್ಯೆಯನ್ನು ಹೇಳಿಕೊಡುವುದರ ಜೊತೆಗೆ ಕೌಶಲ್ಯಗಳನ್ನು ಸಹ ತರಬೇತಿಯನ್ನು ನೀಡಿ ಹೊರಗಿನವರಿಗೆ ನೀಡುತ್ತಾ ಬರುತ್ತಿದ್ದಾರೆ ಅದೇ ರೀತಿಯಲ್ಲಿ ಮಕ್ಕಳ ಮನೆಯಲ್ಲಿರುವ ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದರಲ್ಲಿ ಪರ್ಸ್, ಬ್ಯಾಗ್, ಉಪಯೋಗಿಸುವಂತಹ ಹಲವು ರೀತಿಯ ಉತ್ಪನ್ನಗಳನ್ನು ಮಕ್ಕಳೇ ತಯಾರು ಮಾಡಿ ಅದನ್ನು ಛಾಯಾದೇವಿ ಅನಾಥಾಶ್ರಮದ ಮಕ್ಕಳಿಗೆ ನೀಡುತ್ತಾ ಬರುತ್ತಿದ್ದಾರೆ.
ಛಾಯಾದೇವಿ ಅನಾಥಾಶ್ರಮದ ಶಿಕ್ಷಕಿಯಾದ ಜೇರ್ಲಿನ್ ಅವರು ಮಾತನಾಡುತ್ತಾ ಪೊದೆರ್ ಶಾಲೆಯ ಮುಖ್ಯಪಾದ್ಯಾಯರುಗಳಿಗೆ ಹಲ್ಲಿನ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ತಿಳಿಸುತ್ತೇನೆ ನಮ್ಮ ಮಕ್ಕಳಿಗೆ ಸಾಮಾಜಿಕವಾಗಿ ಅವರಿಗೆ ಅಗತ್ಯವಾದ ವಸ್ತುಗಳನ್ನು ಪೂರೈಸುತ್ತಾ ಬರುತ್ತಿದ್ದೀರಿ ಇದೇ ರೀತಿ ಮುಂದುವರಿಸಿ ಶಾಲೆಯ ಮಕ್ಕಳಿಗೂ ಸಹ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಶಾಲೆಯ ಸಿಬ್ಬಂದಿ ಯಾದ ವಿಜಯ ಮಾತನಾಡಿ ಸಮಾಜದಲ್ಲಿ ಬಡತನವನ್ನು ಹೋಗಲಾಡಿಸಲು ಹಾಗೂ ಅನಾಥರು ಎಂಬ ಭಾವನೆಯನ್ನು ಹೋಗಲಾಡಿಸಲು ಸಹಾಯವನ್ನು ಮಾಡಬೇಕು ಅದೇ ರೀತಿಯಲ್ಲಿ ನಮ್ಮ ಶಾಲೆಯ ಮಕ್ಕಳು ತಾವೇ ಸಂಗ್ರಹಿಸಿ ಜನರಿಂದ ಹಣ, ಧಾನ್ಯಗಳು, ಬಟ್ಟೆಗಳು ಸಂಗ್ರಹಿಸಿ ನೀಡುತ್ತಿರುವುದು ಬಹಳ ಖುಷಿಯಾದ ವಿಚಾರವಾಗಿದೆ ನಮ್ಮ ಮಕ್ಕಳು ಬೇರೆಯವರಿಗೆ ನೀಡಬೇಕೆಂಬ ಭಾವನೆಯನ್ನು ಹೊಂದಿರುವುದು ಬಹಳ ಸಂತೋಷದ ವಿಚಾರ ನಮ್ಮ ಮಕ್ಕಳು ಹತ್ತು ಜನರ ಬಳಿ ಸಂಗ್ರಹಿಸಿ ಇದ್ದಾರೆ ಅದೇ ರೀತಿ ಇನ್ನೂ ಹೆಚ್ಚಿನ ಜನರ ಮೂಲಕ ನೀಡುವಂತಾಗಲಿ ಎಂದು ಹೇಳಿದರು ಜೊತೆಯಲ್ಲಿ ಶಾಲೆಯ ಮಕ್ಕಳು ಸಹ ಹಾಗೂ ಛಾಯಾದೇವಿ ಅನಾಥಾಶ್ರಮದ ಮಕ್ಕಳು ಭಾಗಿಯಾಗಿದ್ದರು.