605 total views
ಅಮೃತ ವಿಶ್ವವಿದ್ಯಾಪೀಠಂನದೃಶ್ಯ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಿನಿರಮಾ-೨೦೨೩’ ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ
ಮೈಸೂರು :-ಅಮೃತ ವಿಶ್ವವಿದ್ಯಾಪೀಠಂನದೃಶ್ಯ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಿನಿರಮಾ-೨೦೨೩’ ರಾಷ್ಟ್ರೀಯ ಕಿರು ಚಿತ್ರೋತ್ಸವದ ಸಮಾರೋಪ ಸಮಾರಂಭ ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್‌ನಲ್ಲಿ ನಡೆಯಿತು. ಕಿರುಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರು ಚಿತ್ರಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಕನ್ನಡದಖ್ಯಾತ ನಟ ಹಾಗೂ ನಿರ್ಮಾಪಕಡಾಲಿ ಧನಂಜಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಸಿನಿಮಾ ಕ್ಷೇತ್ರವೆಂಬುದು ವಿಪುಲ ಆಯ್ಕೆಗಳಿರುವ ಕ್ಷೇತ್ರ. ನಮ್ಮ ಪ್ರತಿಭೆಗೆ, ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತ ಹೋಗುತ್ತವೆ. ಚಿತ್ರರಂಗದಲ್ಲಿ ಆಸಕ್ತಿಯಿರುವ ಯಾರೇ ಆದರೂ ವಿವಿಧ ಅವಕಾಶಗಳು ಸಿಕ್ಕಂತೆ ಅವುಗಳನ್ನು ಸದುಪಯೋಗಪಡಿಸಬೇಕು. ಇಂಥದ್ದೇ ಪಾತ್ರ ಬೇಕು ಎಂದು ಕಾಲ ಕಳೆದರೆ ಸಿಗಬಹುದಾದ ಸುವರ್ಣಾವಕಾಶಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದಾದ ಯಾವುದೇ ಸಂದರ್ಭ ಬಂದರೂ ಅದನ್ನು ಸದ್ವಿನಿಯೋಗೊಳಿಸಬೇಕಾದ್ದು ತುಂಬಾ ಮುಖ್ಯ ಎಂದರು. ಇದಕ್ಕೆ ತಮ್ಮ ವೃತ್ತಿ ಜೀವನದ ನಿದರ್ಶನಗಳನ್ನು ನೀಡಿದ ಧನಂಜಯ್, ತಾವು ಈಗಿರುವ ಹಂತವನ್ನು ತಲುಪಲು ತಾವು ನಿರ್ವಹಿಸಿದ ಎಲ್ಲ ಪಾತ್ರಗಳೂ ದೊಡ್ಡ ಅಡಿಪಾಯವನ್ನು ಸೃಷ್ಟಿಸಿವೆ ಎಂದು ತಿಳಿಸಿದರು.ಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿರುವ ಯುವಜನತೆಗೆ ತಮ್ಮದೇ ಅನುಭವಗಳ ಮೂಲಕ ಸಲಹೆಗಳನ್ನು ನೀಡಿದಡಾಲಿ ಧನಂಜಯ್, ಇಂದಿನ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅಭಿವೃದ್ಧಿ ಒಂದು ದೊಡ್ಡ ವರದಾನ. ಇಂದು ಎಲ್ಲ ಆಯ್ಕೆಗಳು, ಸೌಲಭ್ಯಗಳು, ಸಾಧ್ಯತೆಗಳು ಮೊಬೈಲ್ ಪೋನ್‌ಗಳಲ್ಲಿದ್ದು, ಇಡೀ ಸಿನಿಮಾವನ್ನು ಮೊಬೈಲ್‌ನಲ್ಲಿಯೇ ಚಿತ್ರೀಕರಿಸಬಹುದಾಗಿದೆ. ಮೊಬೈಲ್ ಫೋನ್‌ಗಳು ಅತ್ಯಂತ ವಿಸ್ತಾರವಾದ ಹರವನ್ನು ಪರಿಚಯಿಸಿದ್ದು ದೊಡ್ಡದೊಡ್ಡ ಸಿನಿಮಾಗಳ ನಿರ್ಮಾಣಕ್ಕೆಇದು ಭದ್ರ ಬುನಾದಿಯಾಗಬಲ್ಲದು ಎಂದು ಹೇಳಿದರು.
ಈ ಬಾರಿಯ ಸಿನಿರಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್‌ಗಳು ಭಾಗವಹಿಸಿದ್ದವು. ೫೦ಕ್ಕೂ ಹೆಚ್ಚು ಸಿನಿಮಾಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಏಳು ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.ಮೈಸೂರಿನ ಪ್ರಸಿದ್ದ ಮಲ್ಟಿಪ್ಲೆಕ್ಸ್ ಡಿಆರ್‌ಸಿ ಸಿನೆಮಾಸ್ ಮಾಲೀಕರಾದ ಶ್ರೀಮತಿ ವೈಶಾಲಿ ಹನುಮಂತ್ ಹಾಗೂ ಶ್ರೀ ಹನುಮಂತ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಿರುಚಿತ್ರೋತ್ಸವದ ತೀರ್ಪುಗಾರರಾಗಿ ಭಾಗವಹಿಸಿದ್ದ ನಟ ಹಾಗೂ ಲೆನ್ಸ್ ಬೇಸ್ಡ್ ಛಾಯಾಚಿತ್ರಗ್ರಾಹಕ ಶ್ರೀ ಪವನ್‌ಕೆ.ಜೆ ಅವರನ್ನು ಹಾಗೂ ಈ ಫೆಸ್ಟ್‌ನ ಪ್ರಾಯೋಜಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಂಬೈನ ಫಿಲ್ಮ್‌ಕಂಪ್ಯಾನಿಯನ್‌ನ ಸಿನಿಮಾ ಪತ್ರಕರ್ತ ಹಾಗೂ ವಿಮರ್ಶಕ ಸುಚಿನ್ ಮೆಹ್ರೋತ್ರಾ ಅವರು ಫಿಲ್ಮ ಕ್ರಿಟಿಸಿಸಂ ಕುರಿತಾಗಿ ಗೋಷ್ಠಿಯನ್ನು ನಡೆಸಿಕೊಟ್ಟರು.
ಅಮೃತ ಮೈಸೂರು ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಕ್ಯಾಂಪಸ್‌ನ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.