323 total views
ಶಾಸಕ ಹೆಚ್ ಪಿ ಮಂಜುನಾಥ್ ರವರಿಗೆ ಎನ್.ಆರ್ ಹೆಚ್.ಎಂ. ಯೋಜನೆಯಡಿಯಲ್ಲ್ಲ ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹುಣಸೂರಿನ ಗುತ್ತಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ
ಬೆಂಗಳೂರಿನಲ್ಲಿನ ಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಹೊರಗುತ್ತಿಗೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಮಾತನಾಡಿ ಸರ್ಕಾರ ನಾವು ಸಲ್ಲಿಸುತ್ತಿರುವ ಸೇವೆಗೆ ನೀಡುತ್ತಿರುವ ಅಲ್ಪ ಮೊತ್ತದ ವೇತನವನ್ನು ಬಿಟ್ಟು ಇನ್ನಿತರ ಯಾವುದೇ ಸೌಲಭ್ಯವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೇವೆ. ಈ ಅಲ್ಪ ಮೊತ್ತದ ವೇತನದಲ್ಲಿ ಕೌಟುಂಬಿಕ ಜೀವನ ನಡೆಸುವುದು ಕಷ್ಟಕರವಾಗಿದ್ದು ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ರೀತಿ ಪ್ರಯೋಜನವಾಗಿರುವುದಿಲ್ಲ. ಆದ್ದರಿಂದ ನಮ್ಮ ಸಂಘವು 13-02-2023 ರಿಂದ ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿರುತ್ತೇವೆ.ದಯಾಳುಗಳಾದ ತಾವು ನಮ್ಮ ಸೇವೆಗಳನ್ನು ಖಾಯಂ ಮಾಡುವುದರ ಮುಖಾಂತರ ನಮ್ಮ ಪಾಲಿಗೆ ದೈವಸ್ವರೂಪಿಗಳಾಗಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್ ಪಿ ಮಂಜುನಾಥ್ ರವರು ತಮ್ಮ ಬೇಡಿಕೆ ಹಾಗೂ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.