452 total views
,, ಚನ್ನಗಿರಿಯಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ.,
,,ಮಾಡಾಳ್ ವಿರೂಪಾಕ್ಷಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ನೀಡಿ.,
,,ವಡ್ನಾಡ್ ರಾಜಣ್ಣನ ಗೆಲ್ಲಿಸಿ.. ಸಿದ್ದರಾಮಯ್ಯನ ವಾಗ್ದಾಳಿ..
ಚನ್ನಗಿರಿ ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡುತ್ತಾ ಮಾಡಾಳ್ ವಿರೂಪಾಕ್ಷಪ್ಪನವರಂತ ಭ್ರಷ್ಟ ರಾಜಕಾರಣಿಗೆ ಬುದ್ಧಿ ಕಲಿಸಬೇಕಾದರೆ ವಡ್ನಾಳ್ ರಾಜಣ್ಣ ಅವರಂತಹ ಸಜ್ಜನ ರಾಜಕಾರಣಿಗಳ ಆಯ್ಕೆ ಮಾಡಬೇಕು. ಬಿಜೆಪಿ ಸರ್ಕಾರದ ನಾಯಕರು ಮಾನ ಮರ್ಯಾದೆ ಲಜ್ಜೆ ಬಿಟ್ಟು ಮತದಾರರ ಮುಂದೆ ಹೋಗುತ್ತಿದ್ದರು. ರಾಜ್ಯದ ಬಿಜೆಪಿ ಸರ್ಕಾರವು ಆಲಿಬಾಬ ಚಾಲೀಸ್ ಚೋರ್ ಎನ್ನುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ 40% ರಷ್ಟು ಕಮಿಷನ್ ಎಂದು ಹೇಳಿದಾಗ ಮುಖ್ಯಮಂತ್ರಿಗಳು ದಾಖಲೆ ಕೊಡಿ ಎಂದು ಕೇಳಿದ್ರು. ಆದರೆ ಈಗ ಸ್ಪಷ್ಟ ದಾಖಲೆ ದೊರೆತಿದೆ. ಸುಳ್ಳೇ ಬಿಜೆಪಿಯ ಮನೆದೇವರು ರಾಜ್ಯದ ಮತದಾರರಿಗೆ ಗೃಹ ಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವಿದ್ಯುತ್ ಗೃಹಲಕ್ಷ್ಮಿ ಯೋಜನಯಡಿ ಮನೆ ಯಜಮಾನ ಖಾತೆಗೆ 2000 ರೂ. ಮತ್ತು ಪಡಿತರದಾರರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಡಿಕೆ ಶಿವಕುಮಾರ್ ಮತ್ತು ನಾನು ಸಹಿ ಮಾಡಿದ ಗ್ಯಾರಂಟಿ ಕಾರ್ಡನ್ನು ನೀಡುತ್ತಿದ್ದೇವೆ. ನಾನು ಜನದ್ರೋಹ ಮಾಡಿಲ್ಲ ಮುಂದೆ ಮಾಡುವುದು ಇಲ್ಲ ಅಂತಹ ಕ್ಷಣಗಳು ಬಂದರೆ ಒಂದು ಕ್ಷಣವು ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ವಾಗ್ದಾನ ಮಾಡಿದರು.
ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಈ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಕರ್ಮಕಾಂಡವನ್ನು ಬಯಲಿಗೆಳೆದ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಮಾಡಾಳ್ ಪ್ರಶಾಂತ್ ಸಿಕ್ಕಿಬಿದ್ದರೂ. ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿದ್ದರೂ ಅರೆಸ್ಟ್ ಮಾಡದ ಪೊಲೀಸರು. ಹೈಕೋರ್ಟಿನಿಂದ ನಿರೀಕ್ಷಣಾ ನಿರೀಕ್ಷಣಾ ಜಾಮೀನು ಸಿಕ್ಕ ಕೂಡಲೇ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿಕೊಂಡ. ನಾಚಿಕೆ ಇಲ್ಲದೆ ಬಿಜೆಪಿ ಸರ್ಕಾರ ಇಂತಹ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಇಂಥ ಭ್ರಷ್ಟರನ್ನು ಆಯ್ಕೆ ಮಾಡುತ್ತೀರಾ.?
ಇಂಥ ಭ್ರಷ್ಟರು ನಮಗೆ ಬೇಕಾ.? ಎಂಬುದಾಗಿ ನೋಡಿದರು. ನಂತರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಡ್ನಾಳ್ ರಾಜಣ್ಣ ಮಾತನಾಡುತ್ತಾ ಕಳೆದ ಐದು ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರ ಮಂಜೂರಾತಿ ನೀಡಿದ್ದ 450 ಕೋಟಿ ರೂ ವೆಚ್ಚದ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಇನ್ನೂ ಇನ್ನೂ ಪೂರ್ಣವಾಗಿಲ್ಲ ಇಡೀ ವಿಧಾನಸಭಾ ಕ್ಷೇತ್ರಗಳಿಗೆ ಪೈಪ್ ಲೈನ್ ನಾವು ಮಾಡಿ ಮಾಡಿದ್ದರೆ ಬಿಜೆಪಿಯವರು ನಳಗಳನ್ನು ಮಾತ್ರವೇ ಹಾಕಿ ಎಲ್ಲಾದನ್ನು ನಾವೇ ಮಾಡಿದ್ದೇವೆ ಎನ್ನುತ್ತಾರೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 8 ಆಕಾಂಕ್ಷಿಗಳು ಇದ್ದಾರೆ ಎಂದರೆ ಕಾಂಗ್ರೆಸ್ ಪಕ್ಷ ಎಷ್ಟು ಬಲಿಷ್ಠವಾಗಿದೆ ಎಂದು ಅರ್ಥವಾಗುತ್ತದೆ. ಎಂದು ಮಾಜಿ ಶಾಸಕ ವಡ್ನಾಳ್ ರಾಜಣ್ಣ ನುಡಿದರು.
ಈ ಸಭೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ ಮಂಜಪ್ಪ ಮಾಧ್ಯಮ ವಕ್ತಾರ ಬಸಣ್ಣ ಕಿಸಾನ್ ಸಂಘದ ಅಧ್ಯಕ್ಷ ಸಚಿನ್ ಮಿಗ್ ದಾವಣಗೆರೆ ಜಿಲ್ಲಾ ಚುನಾವಣಾ ಉಸ್ತುವಾರಿ ಸಲೀಂ ಅಹಮದ್ ಟಿಕೆಟ್ ಆಕಾಂಕ್ಷಿಗಳಾದ ಲಿಂಗರಾಜು .ಎಚ್ ಎನ್ ನಿರಂಜನ ಪುನೀತ್. ಕುಮಾರ್ ಹೊದಿಗೆರೆ ರಮೇಶ್ .ಶಿವಗಂಗಾ ಬಸವರಾಜ್ ವಡ್ನಾಳ್ ಜಗದೀಶ್ ವಡ್ನಾಳ್ಅಶೋಕ್ ತೇಜಸ್ವಿ ಪಟೇಲ್. ಚನ್ನಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಚ್ ಶ್ರೀನಿವಾಸ್ ಸಿ ನಾಗರಾಜ್ ಹಾಗೂ ವಿಷ್ಣು ವೈಷ್ಣವ್ ಹಾಗೂ ಇತರರು.
ವರದಿ,, ಎಸ್ ಆರ್ ತಿಮ್ಮಯ್ಯ.