282 total views
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ದೇವರಾಜ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶಿವರಾಜ್ ಎಂಬುವವರು ಹಣದ ಬೇಡಿಕೆ ಇಟ್ಟು ಸಿಕ್ಕ ಹಾಕಿ ಕೊಂಡಿದ್ದಾರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಾಸಿಕ ಬಾಡಿಗೆ ಆಧಾರದ ಮೇಲೆ ನರೇಂದ್ರ ಎಂಬುವವರು, ಬಾಡಿಗೆ ಕಾರವನ್ನು ಓಡಿಸುತ್ತಿದ್ದು ಮಾಸಿಕ ನಂತರ ಕಾರಿನ ಬಾಡಿಗೆ ಯ ಬಿಲ್ಲು ಕೊಡುವ ಸಲುವಾಗಿ ಅವಾಗ ಆವಾಗ ಸಮಸ್ಯೆ ಇದ್ದೆ ಇತ್ತು, ಇದರ ಬಾಡಿಗೆ ಬಿಲ್ಲು ಒಟ್ಟು 34,800 ಆಗಿದ್ದು ನರೇಂದ್ರ ಎನ್ನುವವರು ಇದರ ಬಾಡಿಗೆ ಬಿಲ್ಲನ್ನು ಕೆಳಿದಾಗ ಬಿಸಿಎಂ ಇಲಾಖೆಯ ಅಧಿಕಾರಿಗಳಾದ ಶಿವರಾಜ್ ಎಂಬುವವರ ಮಾಸಿಕ ಕಾರ ಬಾಡಿಗೆ ಬಿಲ್ಲನ್ನು ಕೊಡಲು ಹಣದ ಬೇಡಿಕೆಯನ್ನು ಇಟ್ಟಿದ್ದು ಎನ್ನಲಾಗಿದೆ, ಇ ಅಧಿಕಾರಿಯ ಲಂಚ ಅವತಾರಕ್ಕೆ ಬೇಸತ್ತು ನರೇಂದ್ರ ಎನ್ನುವವರು, ಸರಕಾರದಿಂದ ಇವರಿಗೆ ಪಗಾರ ನ್ನೂ ಕೊಡುತ್ತಿದ್ದು, ಆದರೂ ಸಹ ನಮ್ಮಂತವರ ಬಡ ದುಡಿಮೆಯವರ ಬಾಡಿಗೆ ಹಣ ಕೊಡಲು ಬೇಡಿಕೆ ಇಟ್ಟು ಈ ತರಹ ಮಾಡುವುದು ಸರಿ ಅಲ್ಲವೆಂದು, ಇವರ ಕಾಟವನ್ನು ತಾಳಲಾರದೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು, ಈ ದೂರಿನನ್ವಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಡಿ ವೈ ಎಸ್ ಪಿ ಜಿ, ಮಂಜುನಾಥ್ ಮತ್ತು ಹರೀಶ್ ಅವರ ಮಾರ್ಗದರ್ಶನದಲ್ಲಿ ದಾಳಿಯನ್ನು ನಡೆಸಿ ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ,