148 total views
ಬಣ್ಣಗಳ ಹಬ್ಬ ಹೋಳಿ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ. ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ, ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಹಬ್ಬ. ಹುಣ್ಣಿಮೆ ದಿನ ಈ ಕಾಮನ ಹಬ್ಬ ಅಥವಾ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.