402 total views
ಹುಣಸೂರು, ಜಮೀನಿನಲ್ಲಿ ಉಳುಮೆ ಮಾಡುವ ವಿಚಾರದ ಹಿನ್ನಲೆ 6 ಮಂದಿ ಗುಂಪು ಮಹಿಳೆ ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.ಹಲ್ಲೆ ನಡೆಸಿದ ಪರಿಣಾಮ ಕಟ್ಟೆಮಳಲವಾಡಿಯ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಿಂಗಮ್ಮ ಹಾಗೂ ವೆಂಕಟೇಶ್ ಎಂಬುವರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟೆಮಳಲವಾಡಿ ನಿವಾಸಿಗಳಾದ ಸ್ವಾಮಿ,ಶಿಲ್ಪ,ರವಿ,ವೆಂಕಟೇಶ,ನಾರಾಯಣ ಹಾಗೂ ಚಂದ್ರ ಎಂಬುವರ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮಾದಾಪುರ ವ್ಯಾಪ್ತಿಯ ಸರ್ವೆ ನಂ.64 ಜಮೀನು ಸಿಂಗಮ್ಮ ಪತಿಗೆ ಸೇರಿದ್ದು.ಶುಂಠಿ ಬೆಳೆ ಬೆಳೆಯಲು ಗುತ್ತಿಗೆ ನೀಡಿದ್ದಾರೆ.ಗುತ್ತಿಗೆದಾರರಿಗೆ ಉಳುಮೆ ಮಾಡಲು ಸ್ವಾಮಿ,ಶಿಲ್ಪ,ರವಿ ಹಾಗೂ ಇತರರು ಕಿರಿಕ್ ತೆಗೆದು ಗಲಾಟೆ ಮಾಡಿದ್ದಾರೆ.ಇದನ್ನ ಪ್ರಶ್ನಿಸಿದ ಸಿಂಗಮ್ಮಳಿಗೆ ಸ್ವಾಮಿ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ.ಸಿಂಗಮ್ಮ ನೆರವಿಗೆ ಬಂದ ಸಂಭಂಧಿಕ ವೆಂಕಟೇಶ್ ಮೇಲೂ ಹಲ್ಲೆ ನಡೆಸಿದ್ದಾರೆ.
ಈ ಸಂಭಂಧ ಸ್ವಾಮಿ,ಶಿಲ್ಪ,ರವಿ,ವೆಂಕಟೇಶ್,ನಾರಾಯಣ,ಚಂದ್ರ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ…