528 total views
ಸದೃಢ ಸಮಾಜ ನಿರ್ಮಾಣದಲ್ಲಿ ಮಠ -ಮಾನ್ಯಗಳ ಕೊಡುಗೆ ಅಪಾರ ಮಾಲಿಕಯ್ಯ ಗುತ್ತೆದಾರ. ಭಾವೈಕತೆಯ, ಸುಗೂರ ಎನ್ ಗ್ರಾಮದ ಭೋಜಲಿಂಗೇಶ್ವರರ ರಥೋತ್ಸವ ಪ್ರಸಿದ್ಧ ಜಾತ್ರೆಗೆ ಅಪಾರ ಭಕ್ತರು ಸಾಕ್ಷಿ ಚಿತ್ತಾಪೂರ-: ಸೂರ್ಯನು ತನ್ನ ನಿತ್ಯದ ಕಾರ್ಯ ಮುಗಿಸಿ ಅಸ್ತಂಗತನಾಗುವ ತವಕದಲ್ಲಿದ್ದ. ಇತ್ತ ಸಾವಿರಾರು ಭಕ್ತರ ದಂಡು ಭೋಜಲಿಂಗೇಶ್ವರರ ಭವ್ಯ ರಥೋತ್ಸವದ ಉತ್ಸಾಹದಲ್ಲಿದ್ದರು. ಪೀಠಾಧಿಪತಿ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು ಮತ್ತು ಡಾ ಕುಮಾರ ಶ್ರೀ ಭೋಜರಾಜ 7.15ಕ್ಕೆ ರಥವನ್ನೇರಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಠದ ಆವರಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನತೆ ರಥವನವನ್ನೆಳೆದು ಸಂಭ್ರಮಿಸಿದರು. ತೇರಿನ ಮೇಲೆ ಕಾರಿಕ ನಾರ ಉತ್ತುತ್ತಿಗಳನ್ನು. ಬಾಳೆ ಹಣ್ಣು . ಎಸೆದು ಭಕ್ತಿಯನ್ನು ಸಮರ್ಪಿಸಿದರು. ಭಕ್ತರಿಗೆ ಬೇಡಿದ್ದನ್ನು ನೀಡುವ ಭಗವಂತ ಶ್ರೀಭೋಜಲಿಂಗ ಶರಣರು ತಮ್ಮ ಬಯಕೆ ಭಾವನೆಗಳನ್ನ ಈಡೇರಿಸುವಂತೆ ಭಕ್ತಿಯಿಂದ ಶಿರಬಾಗಿ, ಕರ ಜೋಡಿಸಿ ನಮಿಸಿದರು. ಚಿತ್ತಾಪೂರ ತಾಲೂಕಿನ ಸುಕ್ಷೇತ್ರ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರರ ಸಿದ್ಧಸಂಸ್ಥಾನ ಮಠದಲ್ಲಿ
ಶ್ರೀ ಭೋಜಲಿಂಗೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಸಂಜೆ ರಥೋತ್ಸವ ಭಕ್ತಸಾಗರದ ಮಧ್ಯೆ ವೈಭವದಿಂದ ಜರುಗಿತು. ಅಂತೆಯೆ ಜಾತ್ರೆಗೆ ಕರ್ನಾಟಕ,ತೆಲಂಗಾಣ ಗೋವಾ ಆಂಧ್ರ, ಮಹಾರಾಷ್ಟ್ರ ಮುಂಬೈಯಿಗಳಿಂದ ಸಹಸ್ರಾರು ಭಕ್ತರು ಹರಿದು ಬಂದಿದ್ದರು ಸರತಿ ಸಾಲಿನಲ್ಲಿ ನಿಂತು ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಯನ್ನು ಮೆರೆದರು. ಸೋಮವಾರ ಬೆಳಗ್ಗೆ ಶ್ರೀ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ಜರುಗಿತು. ನಂತರ ಪುರಾಣ ಮಂಗಲ ಹಾಗೂ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆಯೊಂದಿಗೆ ಸುಗೂರ ಎನ್ ಗ್ರಾಮದ ಶ್ರೀ ಮಠದಲ್ಲಿ ನಡೆಯಿತು. ಭಕ್ತಿಯ ಬೀಡು:- ಹಲಗೆ, ಬಾಜಾ, ಭಜಂತ್ರಿ, ಡೊಳ್ಳು. ಮುಂತಾದ ಮಂಗಲ ವಾದ್ಯಗಳ ಸದ್ದು, ನೆರೆದ ಭಕ್ತರ ಸಡಗರ, ಪುರವಂತರ ಸೇವೆ ಇವುಗಳಿಂದ ಶ್ರೀ ಭೋಜಲಿಂಗೇಶ್ವರರ ಭಕ್ತಿಯ ಬೀಡಾಗಿತ್ತು. ಸಿಹಿ ತಿಂಡಿ ಸಜ್ಜಕ್ಕ್ ಪಾಯಸ್. ಅನ್ನ -ಸಾರಿನ ದಾಸೋಹ ನಿರಂತರವಾಗಿ ನಡೆದಿತ್ತು. ಫಳಾರ ಕೊಳ್ಳುವವರ ಭರಾಟೆಯೂ ವಿಪರೀತವಾಗಿತ್ತು. ಒಳ್ಳೆಯ ವ್ಯಾಪಾರವಾಗಿದ್ದರಿಂದ ಅಂಗಡಿಯವರು ಖುಷಿ ಖುಷಿಯಾಗಿದ್ದರು. ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದರು. ಧರ್ಮಸಭೆಯ ದಿವ್ಯ ನೇತೃತ್ವ :-ಪೀಠಾಧಿಪತಿ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು. ಭವ್ಯ ರಥೋತ್ಸವ ಮತ್ತು ದರ್ಮಸಭೆ ಪೂಜ್ಯರ ಸಮ್ಮುಖದಲ್ಲಿ ನಡೆಯಿತು. ಪ್ರಾಚೀನ ಕಾಲದಿಂದ ದೇಶದಲ್ಲಿ ಮಠ ಮಾನ್ಯಗಳು ತ್ರೀವಿಧಿ ದಾಸೋಹಗಳ ಮೂಲಕ ನಿರಂತರ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿವೆ,
ಇಂದು ನಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮಠ ಮಾನ್ಯಗಳಿಂದ ಪರಿಹಾರವಾಗುವ ಮೂಲಕ ಪರಿವರ್ತನೆ ಕಾಣಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಶ್ರೀ ಸನ್ಮಾನ್ಯ ಮಾಲಿಕಯ್ಯ ಗುತ್ತೆದಾರ ಅಭಿಪ್ರಾಯ ಪಟ್ಟರು. ಇಲ್ಲಿಗೆ ಸಮೀಪದ ಸುಗೂರ ಎನ್ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ 28 ನೇ ವರ್ಷದ. ಜಾತ್ರಾ ಮಹೋತ್ಸವ ಭವ್ಯ ರಥೋತ್ಸವದ ನಂತರ ನಡೆದ ಧರ್ಮಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ್ದರು. ದೇಶದಲ್ಲಿ ಕರೋನಾ ವೈರಸ್ ದಾಳಿ ನಂತರ ನಮ್ಮೆಲ್ಲರ ಜೀವನ ಶೈಲಿ ಬದಲಾವಣೆಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಧ್ಯಾತ್ಮೀಕ ಕ್ಷೇತ್ರದತ್ತ ಒಲವು ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿದ್ದೇವೆ. ಇದು ಒಳ್ಳೆಯ ಬೆಳವಣಿಗೆ, ಮಠಾಧೀಶರ ಮಾರ್ಗದರ್ಶನದಿಂದ ಅವರು ಸಕರಾತ್ಮಕ ಚಿಂತನೆಗಳನ್ನು ಮೈಗೂಂಡಿಸಿಕೊಂಡು, ಸದೃಢ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಸಲಹೆ ನೀಡಿದರು,. ನಾವು ಮೊದಲು ದುಶ್ಚಟಗಳಿಂದ ಹೊರ ಬರುವ ಜೊತೆಗೆ ಮನಸ್ಸಿನಲ್ಲಿ ಇರುವ ಕಲ್ಮಶಗಳನ್ನು ತೊರೆಯಬೇಕು.ಅಂದಾಗ ಮಾತ್ರ ಇಂತಹ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡಿ. ಧರ್ಶನ ಪಡೆದ ಫಲ ಸಿಗುತ್ತದೆ. ಶ್ರೀ ಭೋಜಲಿಂಗೇಶ್ವರರು . ಈ ಭಾಗದಲ್ಲಿ ತಮ್ಮ ಆಧ್ಯಾತ್ಮೀಕ ಶಕ್ತಿಯಿಂದ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ, ಇಷ್ಟಾರ್ಥಗಳನ್ನು ಈಡೇರಿಸಿದ ಪರಿಣಾಮ ಇಂದು ಅವರು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.. ದಿವ್ಯಸಾನಿಧ್ಯ. – ಯರಡೋಣದ ಶ್ರೀಮುರುಘೇಂದ್ರ ಶಿವಯೋಗಿಗಳು ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ. ಯರಡೋಣದ ಶ್ರೀ ಮುರುಘೇಂದ್ರ ಶಿವಯೋಗಿಗಳು. ಪ್ರಸ್ತಕ ದಿನಗಳಲ್ಲಿ ನಾವು ಸಮಾಜದಲ್ಲಿ ಸಾರಸಮ್ಯದಿಂದ ಪರಪೋಪಕಾರಿಯಾಗಿ ಬಾಳುವುದು ಅವಶ್ಯಕವಾಗಿದೆ..ನಾವು ಮಾಡುವ ಪುಣ್ಯದ ಕೆಲಸಗಳು ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತದೆ ಎಂದರು. ಮಾಜಿ ಎಮ್.ಎಲ್.ಸಿ.ಚೆನ್ನಾರೆಡ್ಡಿಗೌಡ ತುನ್ನೂರ ಮಾತನಾಡಿ .ಶ್ರೀಮಠವು ಭಕ್ತರ ಪಾಲಿಗೆ ಕಲ್ಪವೃಕ್ಷ . ಕಾಮದೇನುವಾಗಿದೆ. ಕ್ಷೇತ್ರ ದರ್ಶನದಿಂದ ರೈತಾಪಿ ವರ್ಗದ ಸಂಕಷ್ಟಗಳು ದೂರವಾಗಲಿ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಢಾ ಸುರೇಶ ಮಾಗನೂರು.ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿರೇಶ ಅರಿಕೇರಿ ಅವರಿಗೆ ಸುಗೂರ ಶ್ರೀಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಸಾಹಿತಿ ಎಸ್.ಎಸ್.ಜುಗೇರಿ ಅವರು ರಚಿಸಿದ ಶ್ರೀ ಭೋಜಲಿಂಗೇಶ್ವರ ಭಕ್ತಿಗೀತೆಗಳ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ
ಧರ್ಮಸಭೆಯ ದಿವ್ಯ ನೇತೃತ್ವ :-ಪೀಠಾಧಿಪತಿ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು. ಸಾನಿಧ್ಯ- ಶ್ರೀ ಶಿವಪ್ರಕಾಶ ಶಿವಾಚಾರ್ಯರು ಬಸವನ ಭಾಗೇವಾಡಿ ಶ್ರೀಗಳು ಆಶೀರ್ವಚನ ನೀಡಿದರು. ಜನಪ್ರತಿನಿಧಿಗಳ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದರು. ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರರ ಜಾತ್ರೆಯಲ್ಲಿ ನಟ ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಹಿಡಿದು ಭಕ್ತರು ಅಭಿಮಾನ ವ್ಯಕ್ತಪಡಿಸಿದರು. ಒಟ್ನಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ ಎನ್ ಶ್ರೀ ಭೋಜಲಿಂಗೇಶ್ವರರ ಮಠವೂ, ಬಡವ-ಶ್ರೀಮಂತ, ಜಾತಿ-ಪಂಥವನ್ನು ಮೀರಿ ಎಲ್ಲರನ್ನೂ ಸಮಾನವಾಗಿ ಕಾಣುವಂತದ್ದಾಗಿದೆ. ಹಾಗಾಗಿ ಇದು ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಹೊಂದಿದೆ.
ಸ್ವಾಗತ ಭಾಷಣ – ಶ್ರೀ ಭೀಮರೆಡ್ಡಿಗೌಡ ಕುರಾಳ ಸುಗೂರ ಎನ್. ಶಂಕರಗೌಡ ನಾಯ್ಕಲ್ ನಿರೊಪಣೆಮಾಡಿ ವಂದಿಸಿದರ.. ರಾಜಕೀಯ ನಾಯಕರು ಗಣ್ಯ ಮಾನ್ಯರ.ಮತ್ತು ಊರಿನ ಪ್ರಮುಖರ ಉಪಸ್ಥಿತಿಯಲ್ಲಿ ಅಫಜಲಪೂರ ತಾಲೂಕಿನ ಮಾಜಿ ಶಾಸಕ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ, ಚೆನ್ನಾರೆಡ್ಡಿಗೌಡ ತುನ್ನೂರ, ಮತ್ತು ಜೆ.ಡಿ.ಎಸ್ ಯುವ ಮುಖಂಡ ಶರಣಗೌಡ ಕಂದಕೂರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ :- ಶರಣಕುಮಾರ ಧೋಖಾ ಅದ್ಯಕ್ಷತೆ ವಹಿಸಿದ್ದರು, bಧರ್ಮಸಭೆಯ ನಂತರ ಸಾಂಸ್ಕೃತಿಕ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು ಕನ್ನಡದ ಕೋಗಿಲೆಅರ್ಜುನ್ ಇಟಗಿ. ಎದೆ ತುಂಬಿ ಹಾಡುವೆನು:-ಪ್ರಭಾ ಕುಂಬಾರ. ಸರಿ.ಗಮ.ಪ ಗಾಯಕಿ ಪೂಜಾ ವಿಭೊತಿಮಠ.
ಸರಿ.ಗಮ.ಪ ವಿನಯ ದಂಡಗಿ. ಹಾಗೂ ಮಜಾ ಟಾಕೀಸ್ ಮಿಮಿಕ್ರಿಯ ಹಾಸ್ಯ ಕಲಾವಿದ :-ಮಹಾತೇಶ ಹಡಪದ ಕುನ್ನಳ. ಹಾಗೂ *ದೂರ ದರ್ಶನದ ಹಾಸ್ಯಕಲಾವಿದ ದೇವರಾಜ ಯಲಿ ಅವರು ಶ್ರೀಮಠದ ಸಂದ್ಬಕ್ತರಿಗೆ ನಕ್ಕು ನಗಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪತ್ರಿಕೆಯ ಸೇವೆ-ಈರಣ್ಣ ಬಲಕಲ್ ಎಲ್.ಐ.ಸಿ ಯ ಏಜೆಂಟರು ಯಾದಗಿರ. ಮತ್ತು ಪಟಾಕಿ ಮದ್ದಿನ ಸೇವೆ:- ಲಾಲಸೇಠ ಚವ್ಹಾಣ ಸುಗೂರ ಎನ್. ಭವ್ಯ ರಥೋತ್ಸವಕ್ಕೆ ಹೂವಿನ ಹಾರಗಳ ಸೇವೆ:-ಪ್ರಭು ಹೂಗಾರ ಯಾದಗಿರ. ಭವ್ಯ ತೇರಿನ ರಥೋತ್ಸವ್ ಬಣ್ಣದ ಸೇವೆ ವೆಂಕಟೇಶ ಚಿಂತನಹಳ್ಳಿ ಯಾದಗಿರ. ಗರ್ಭಗುಡಿಯ ಮತ್ತು ಭವ್ಯ ವೇದಿಕೆಯ ಅಲಂಕೃತ- ಮಲ್ಲಿಕಾರ್ಜುನ ಚಿತ್ರದುರ್ಗ ಈ ಸಂಧರ್ಭದಲ್ಲಿ ಅನೇಕ ಊರಿನ ಪ್ರಮುಖರು. ರಾಮಲಿಂಗಯ್ಯ ಸ್ವಾಮಿ ಸುಗೂರ ಎನ್. ಮಹೇಶ ಪಾಟೀಲ್ ಸುಗೂರ ಎನ್, ಭೀಮರೆಡ್ಡಿಗೌಡ ಸುಗೂರ ಎನ್. ವಿಶ್ವನಾಥ ರೆಡ್ಡಿಗೌಡ ಸುಗೂರ ಎನ್ , ಸೋಮಣ್ಣಗೌಡ ತುಮಕೂರು, ಶರಣಗೌಡ ವಕೀಲರು ಸುಗೂರ ಎನ್. ಮಹಿಪಾಲರೆಡ್ಡಿಗೌಡ ಕರಣಗಿ ಸುಗೂರ ಎನ್. ಸಂಗಾರೆಡ್ಡಿಗೌಡ ಮಾಲಿ ಪಾಟೀಲ್. ಈರಣ್ಣ ಬಲಕಲ್ ಯಾದಗಿರ, ಶರಣಪ್ಪ ಜುಗೇರಿ ಯಾದಗಿರ , ಬಸವರಾಜ ಹವಲ್ದಾರ್ ಯಾದಗಿರ, ಶಂಕ್ರಪ್ಪ ಶಿಕ್ಷಕರು, ಸಿದ್ದುಗೌಡ ಬೆನಕನಹಳ್ಳಿ, ಶರಣಗೌಡ ತುಮಕೂರು. ರೆಡ್ಡಿಗೌಡ ಕರಣಗಿ, *ಬಸ್ಸುಗೌಡ ಮಾಲಿ ಪಾಟೀಲ್ ಸುಗೂರ ಎನ್. ಬಸ್ಸುಗೌಡ ಮಾರಡಗಿ, ಸಂಜೀವರೆಡ್ಡಿ ಪೋ.ಪಾಟೀಲ್. ಬಸವರಾಜ ಹಡಪದ ಸುಗೂರ ಎನ್. ಮಲ್ಲಿನಾಥ ಚಿನ್ನಾಪೋಟೊ ಸ್ಟೋಡಿಯೊ. ಪ್ರಭು ಹೂಗಾರ, ಬಸವರಾಜಪ್ಪ ಶಿಕ್ಷಕರು ಯಾದಗಿರ, ಮಹಾದೇವ ರೆಡ್ಡಿಗೌಡ ತುಮಕೂರ
ಸಾಯಿಬಣ್ಣ ಹೂಗಾರ.ರಾಜೇದ್ರ ನಾಯ್ಕೊಂಡಿ ಸುಗೂರ ಎನ್., ಭಾಬು ಪಾಟೀಲ್ ಸುಗೂರ ಎನ್. ಶರಣಪ್ಪ ಕುಂಬಾರ. ಸುಖ್ಖುದೇವ ಚವ್ಹಾಣ. ಸಿದ್ದುಗೌಡ ಕುರಾಳ ಮಲ್ಲಣ್ಣ ಹೊಳಮಡಗಿ. ಶಂಕ್ರೇಪ್ಪ ಬೇನಿಗಿಡ್ ಗ್ರಾ.ಪಂ, ಸದಸ್ಯ. nಸಾಬ್ಬಣ್ಣ ಬೇನಿಗಿಡ. ಅಯ್ಯಪ್ಪ ಬೇನಿಗಿಡ್. ಚಾಂಧಪಾಶಾ ಬಂಟ್ನಳ್ಳಿ ಗ್ರಾ.ಪಂ,ಸದಸ್ಯ ಶ್ರೀಮಂತ ಭಾವಿ. ರಾಜು ಗ್ರಾ.ಪಂ, ಸದಸ್ಯ. ಕಾಸೀಂ ಬಾಪೂಜಿ.ಯಮನಪ್ಪ ತಳವಾರ. ಈರಪ್ಪ ಗೋಗಿ. ಸಿದ್ದು ಚಿಗರಳ್ಳಿ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ. ಎನ್,ಸೋಮು ಮಂಡ್ನಾಳ,.ಶರಣು ಬಡಿಗೇರ್, ರಾಜು ಚಿಗರಳ್ಳಿ.ಬಸ್ಸು ಕವಲ್ದಾರ, ಅನಿಲ ಚವ್ಹಾಣ. ರಾಜು ಮಲ್ಕಪ್ಪನಹಳ್ಳಿ ಲೈನ್ ಮೈನ್., ಸೇರಿದಂತೆ ಪೋಲಿಸ್ ಇಲಾಖೆಯವರು. ಮತ್ತು ಅನೇಕ ಶ್ರೀ ಭೋಜಲಿಂಗೇಶ್ವರರ ಮಠದ ಸಂಧ್ಬಕ್ತರು ಉಪಸ್ಥಿತರಿದ್ದರು..
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.