200 total views
ಹಳಿಯಾಳ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು, ಶಾಸಕ, ಕಾರ್ಯಕರ್ತರ ಪಕ್ಷಾಂತರಗಳು ಕುತೂಹಲ ಮೂಡಿಸುತ್ತಿವೆ.ಅಂತೆಯೇ ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್’ನ ಮಾಜಿ ಶಾಸಕ ಎಸ್.ಎಲ್.ಘೋಟ್ನೆಕರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಶಿಷ್ಯರಾಗಿದ್ದ ಘೋಟ್ನೆಕರ್ ಇದೀಗ ಗುರು ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಸಮ್ಮುಖದಲ್ಲಿ ಅಧಿಕೃತವಾಗಿ ಘೋಟ್ನೇಕರ್ ಜೆಡಿಎಸ್ ಪಕ್ಷ ಸೇರಿದ್ದು, ಹಳಿಯಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದಾರೆ.