234 total views
ಮೈಸೂರು :-ಮೈಸೂರಿನಲ್ಲಿ ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು 44 ವರ್ಷದ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಂಜನಗೂಡು ತಾಲೂಕು ಚಿಕ್ಕ ಕವಲಂದೆ ಗ್ರಾಮದಲ್ಲಿ ನಡೆದಿದೆ.ಚೆನ್ನೈ ಮೂಲದ ಫೈವ್ ಸ್ಟಾರ್ ಬ್ಯುಸಿನೆಸ್ ಫೈನಾನ್ಸ್ ಲಿಮಿಟೆಡ್ ವಿರುದ್ಧ ಆರೋಪಿಸಲಾಗಿದೆ..ಈ ಫೈನಾನ್ಸ್ನಲ್ಲಿಮಹೇಶ್ ಪತ್ನಿ ಗಿರಿಜಮ್ಮ ಹೆಸರಿನಲ್ಲಿ 3 ಲಕ್ಷ ಸಾಲ ಪಡೆದಿದ್ದರು. ಸಾಲ ಕಟ್ಟುವಂತೆ ಪದೇ ಪದೇ ವಾರ್ನ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.. ಫೈನಾನ್ಸ್ ಅವರ ಕಿರುಕುಳಕ್ಕೆ ಮನನೊಂದು ಮಹೇಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.. ಘಟನೆ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಧಿಕೃತ ಫೈನಾನ್ಸ್ಗಳ ಮೇಲೆ ಕ್ರಮಕೈಗೊಳ್ಳವಂತೆ ರೈತ ಸಂಘ ಆಗ್ರಹಿಸಿದೆ.