201 total views
ಶರಣರ ನಾಡು ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಾಗಠಾಣ ಮತಕ್ಷೇತ್ರದ ವಿಕಾಸ ಹಾಗೂ ಜನಕಲ್ಯಾಣದ ಧೃಢಸಂಕಲ್ಪದೊಂದಿಗೆ, ಕ್ಷೇತ್ರದಾದ್ಯಂತ ಪ್ರತಿ ಹಳ್ಳಿಗೆ, ಹಾಗೂ ಪ್ರತಿ ಮನೆಗೆ ಭೇಟಿ ನೀಡಿ, ಯುವಜನತೆಯ ಭವಿಷ್ಯ, ಮಹಿಳೆಯರ ಸ್ವಾವಲಂಬಿ ಬದುಕು ಹಾಗೂ ಕ್ಷೇತ್ರದ ಸ್ಥಿತಿಗತಿಗಳನ್ನು ಅತಿ ಹತ್ತಿರದಿಂದ ಗಮನಿಸಿ, 2028 ರ ಹೊತ್ತಿಗೆ ನಾಗಠಾಣ ಮತಕ್ಷೇತ್ರವು ಮಾದರಿ ಕ್ಷೇತ್ರವನ್ನಾಗಿಸುವ ಮಹದುದ್ದೇಶದಿಂದ ” ದೃಢಸಂಕಲ್ಪ ಪಾದಯಾತ್ರೆ ಯಾತ್ರೆ” ಎಂಬ ಮಹಾಪಾದಯಾತ್ರೆಯನ್ನು ಕೈ ಗೊಂಡಿದ್ದೇನೆ. ಇಂದಿನವರೆಗೆ ನನ್ನ ಹೋರಾಟ, ಸಮಾಜ ಸೇವೆ, ಪ್ರತಿ ಹೆಜ್ಜೆಯಲ್ಲೂ ನೀವು ಕೈಜೋಡಿಸಿದ್ದೀರಿ. ಇದೀಗ ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹದ ನಿರೀಕ್ಷೆಯೊಂದಿಗೆ ನಾನು ನಿಮ್ಮ ನಡುವೆ ಬರುತ್ತಿದ್ದೇನೆ. ಇದೇ ಬರುವ ಫೆಬ್ರುವರಿ 7 ರಿಂದ ವಿಶ್ವಗುರು ಬಸವಣ್ಣನವರ ಜನ್ಮಭೂಮಿ ಇಂಗಳೆಶ್ವರ ಮತ್ತು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ಜನ್ಮಭೂಮಿ ನಂದ್ಯಾಳ ಪವಿತ್ರ ಮಣ್ಣಿನಿಂದ ಈ ಪಾದಯಾತ್ರೆ ಪ್ರಾರಂಭವಾಗಿದೆ. ನಿಮ್ಮ ಮತಗಳನ್ನು ನೀಡಿ ಆಶೀರ್ವಾದ ಮಾಡಬೇಕೆಂದು ಎಂದು ವಿನಂತಿಸಿದರು.
ವರದಿ
ನಾರಾಯಣ ಹೊನಮೋರೆ