406 total views
ಸಾರ್ವಜನಿಕ ಗೋಡೆಗಳ ಮೇಲೆ ಬರೆದಿರುವ ಬಿಜೆಪಿಯ ಚಿನ್ನೆ ಹಾಗೂ ಬಿಜೆಪಿಯ ಭರವಸೆಗಳು ಎಂಬ ಬರಹಕ್ಕೆ ಪಾಲಿಕೆ ಸಿಬ್ಬಂದಿ ಬಣ್ಣ ಬಳೆದಿದ್ದಾರೆ.
ಮೈಸೂರು :-ಸಾಂಸ್ಕೃತಿಕ ನಗರಿ ಮೈಸೂರಿನ ಸಾರ್ವಜನಿಕ ಗೋಡೆಗಳ ಮೇಲೆ ಬರೆದಿರುವ ಬಿಜೆಪಿಯ ಚಿನ್ನೆ ಹಾಗೂ ಬಿಜೆಪಿಯ ಭರವಸೆಗಳು ಎಂಬ ಬರಹಕ್ಕೆ ಪಾಲಿಕೆ ಸಿಬ್ಬಂದಿ ಬಣ್ಣ ಬಳೆದಿದ್ದಾರೆ.
ಮೈಸೂರು ಪಾಲಿಕೆಯ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಆದೇಶದನ್ವಯ ಸಿಬ್ಬಂದಿ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಭಾವಚಿತ್ರಗಳಿಗೆ ಬಣ್ಣ ಬಳಿಯಲಾಗಿದೆ.ಇನ್ನ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆ, KR ಆಸ್ಪತ್ರೆ ಕಾಂಪೌಂಡ್ ಸೇರಿ ಹಲವೆಡೆ ಸಾರ್ವಜನಿಕ ಗೋಡೆ ಮೇಲೆ BJP ಸರ್ಕಾರದ ಸಾಧನೆಗಳ ಬಗ್ಗೆ ಚಿತ್ರ, ಬರಹಗಳನ್ನು ಬರೆಯಲಾಗಿದ್ದು, ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭಾವಚಿತ್ರಗಳಿಗೆ ಪಾಲಿಕೆ ಸಿಬ್ಬಂದಿ ಕೆಂಪು ಬಣ್ಣ ಬಳೆದಿದ್ದಾರೆ.