212 total views
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣ ಎಂದಾಕ್ಷಣ ನೆನಪಾಗೋದೇ ಕರದಂಟು. ರಾಜಕೀಯ ವಿಷಯ ಬಂದಾಗ ಗೋಕಾಕ್ ಎಂದಾಕ್ಷಣ ನೆನಪಾಗುವುದೇ ಜಾರಕಿಹೊಳಿ ಬ್ರದರ್ಸ್. ಬ್ರಿಟಿಷ್ ಕಾಲಾವಧಿಯಲ್ಲಿ ಮಹಾರಾಷ್ಟ್ರದ ಪುಣೆ ನಗರದ ಜೊತೆಗೆ ಗೋಕಾಕ್ ನಗರ ಕೂಡ ನಗರಸಭೆಯಾಗಿ ರಚನೆಯಾಯಿತು. ಇಂತಹ ಐತಿಹಾಸಿಕ ನಗರದಲ್ಲಿ ಜಾರಕಿಹೊಳಿ ಸಹೋದರರು ರಾಜಕೀಯವಾಗಿ ಬಲಿಷ್ಠರಾಗಿದ್ದಾರೆ. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಮೂಲಕ ಜಾರಕಿಹೊಳಿ ಸಹೋದರರು ಫುಲ್ ಆಕ್ಟಿವ್ ಆಗಿದ್ದಾರೆ. ಇತ್ತ, ಅರಭಾವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಿ ನಡಿತಿದೆ. ಆದರೆ ಅರಭಾವಿ ಮತಕ್ಷೇತ್ರದಲ್ಲಿ ಭೀಮಪ್ಪ ಗಡಾದ ಜೆಡಿಎಸ್ ಗೆ ರಾಜಿನಾಮೆ ನೀಡಿದ ನಂತರ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಗೊಂದಲದ ನಡುವೆ ಸದ್ದಿಲ್ಲದೆ ಪ್ರಕಾಶ್ ಕಾಳಶೆಟ್ಟಿ ಎಂಬ ಯುವಕನ್ನೊಬ್ಬ ಜೆಡಿಎಸ್ ಸಂಘಟನೆ ಮಾಡುತ್ತಿದ್ದಾನೆ.
ಜೊತೆಗೆ ರಾಜ್ಯ ನಾಯಕರ ಮೂಲಕ ಟಿಕೇಟ್ ಗಾಗಿ ಲಾಬಿ ನಡೆಸುತ್ತಿದ್ದಾನೆ. ಆ ಯುವಕ ಕೇವಲ ಸಾಮಾನ್ಯ ಕಾರ್ಯಕರ್ತನಲ್ಲ ಬದಲಾಗಿ ರಾಜ್ಯ ನಾಯಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಈಗ ತನ್ನ ಕಾಲೇಜು ಸಹಪಾಠಿ ಹಾಸನ್ ಸಂಸದ ಪ್ರಜ್ವಲ್ ರೇವಣ್ಣ ಮೂಲಕ ಜೆಡಿಎಸ್ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಕ್ಷೇತ್ರದ ತುಂಬಾ ಎಲ್ಲಾ ಸಭೆ ಸಮಾರಂಭಗಳಿಗೆ ಹಾಜರಿದ್ದು, ಎಲ್ಲರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದಾರೆ. ಹಾಗೆಯೇ ಪಂಚಮಸಾಲಿ ಸಮುದಾಯದ 2a ಮೀಸಲಾತಿ ಸಲುವಾಗಿ ಸಮಾಜದ ಸ್ವಾಮೀಜಿಯೊಂದಿಗೆ ನಿರಂತರವಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಪಂಚಮಸಾಲಿ ಸಮುದಾಯದ ಮತಗಳನ್ನು ಸೆಳೆಯುವ ತವಕದಲ್ಲಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಿದ್ದಾರೆ. ಪ್ರಕಾಶ್ ಕಾಳಶೆಟ್ಟಿ ಎಂಬ ಈ ಯುವಕ ಎಂ ಎಸ್‌ಸಿ ಪದವೀಧರನಾಗಿದ್ದು, ಮೂಲತಃ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದವರಾಗಿದ್ದು ತನ್ನದೇ ಆದ ಸ್ವಂತ ಸಂಘಟನೆ ಹೊಂದಿದ್ದಾರೆ. ಆದರೆ ಅರಭಾಂವಿ ಕ್ಷೇತ್ರದ ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವಲ್ಲ.
ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮೊದಲು. ಎಂತಹ ಸಂಧಿಗ್ನ ಪರಿಸ್ಥಿತಿಯಲ್ಲಿಯೂ ಬಾಲಚಂದ್ರ ಜಾರಕಿಹೊಳಿಯವರು ಗೆಲ್ಲುತ್ತಾ ಬಂದಿದ್ದಾರೆ ಈಗ ಪಂಚಮಸಾಲಿ ಸಮುದಾಯ ಒಗ್ಗಟ್ಟಾಗುವುದರ ಜೊತೆಗೆ ಸಮಾಜದ ವ್ಯಕ್ತಿ ಒಬ್ಬ ಸ್ಪರ್ಧೆ ಮಾಡುತ್ತಿರುವುದು ಹಾಲಿ ಶಾಸಕರಿಗೆ ತಲೆ ನೋವಾಗಿದೆ ಕ್ಷೇತ್ರದ ಪ್ರತಿಯೊಂದು ಊರಿನಲ್ಲಿಯೂ ಪ್ರಕಾಶ್ ಕಾಳಶೆಟ್ಟಿ ಎಂಬ ಯುವಕನ ಹೆಸರು ಓಡಾಡುತ್ತಿದೆ. ಪ್ರತಿ ಗ್ರಾಮದಲ್ಲಿಯೂ ಸ್ವಂತ ಸಂಘಟನೆ ಮಾಡಿ ಚುನಾವಣಾ ಕಣಕ್ಕೆ ತಯಾರಿ ನಡೆಸುತ್ತಿದ್ದಾರೆ ಆದರೆ ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಅನೇಕ ಘಟಾನುಘಟಿಗಳು ಈ ಹಿಂದೆ ಸೋಲಿನ ರುಚಿ ಅನುಭವಿಸಿರುವುದು ಗೊತ್ತೇ ಇದೆ ಅರಭಾವಿ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಗಳು ಇಲ್ಲದಿರುವುದರಿಂದ ಇವರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಸಿಗುವ ಲಕ್ಷಣಗಳು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಯುವಕನಿಗೆ ಮಣೆ ಹಾಕ್ತಾರಾ ಎಂಬುದು ಯಕ್ಷಪ್ರಶ್ನೆಯಾಗಿದೆ.