482 total views
ಶಿಡ್ಲಘಟ್ಟದಲ್ಲಿ ಫೆಬ್ರವರಿ 26ರಂದು ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಸಂಭ್ರಮ….
ಆರ್ ಚಂದ್ರು ಚಿತ್ರದ ಆಡಿಯೋ ರಿಲೀಸ್ ಇವೆಂಟಿಗೆ ಶಿಡ್ಲಘಟ್ಟದಲ್ಲಿ ವೇದಿಕೆ ಸಜ್ಜು !
ಶಿಡ್ಲಘಟ್ಟ: 26ರಂದು ‘ಕಬ್ಜ’ ಚಿತ್ರ ಧ್ವನಿಸುರುಳಿ ಕಾರ್ಯಕ್ರಮ ನಮ್ಮ ಶಿಡ್ಲಘಟ್ಟದ ನೆಹರು ಕ್ರೀಡಾಂಗಣದಲ್ಲಿ ಆ ಯೋಜನೆ ಮಾಡಲಾಗಿದೆ.ಕಬ್ಜ ಚಿತ್ರವೂ ಅದ್ದೂರಿಯಾಗಿ ಮೂಡಿ ಬಂದಿದೆ ಅಭಿಮಾನಿಗಳು ಪ್ರೋತ್ಸಾಹಿಸಿ ನಮಗೆ ಸಹಕರಿಸಬೇಕು ಕಬ್ಜ ಚಿತ್ರವು ಕಬ್ಜ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸದ್ದು ಮಾಡುತ್ತಿದೆ ಈ ಚಿತ್ರವು ಏಕಕಾಲದಲ್ಲಿ ಏಳು ಭಾಷೆಗಳಲ್ಲೂ ಡಬ್ಬಿಂಗ್ ಸಹ ನಡೆಯುತ್ತಿದೆ. ಅಲ್ಲದೇ ಕಬ್ಜ ಮಲ್ಟಿ ಸ್ಟಾರರ್ ಚಿತ್ರವಾಗಿದ್ದು, ಉಪೇಂದ್ರ ಜೊತೆ ನಟ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ ಪ್ರೇಕ್ಷಕರು ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದಾರೆ. ಶಿಡ್ಲಘಟ್ಟದ ನಗರದ ನೆಹರು ಕ್ರೀಡಾಂಗಣದಲ್ಲಿ ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕೇಶ್ವರ ಗ್ರಾಮದ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಭಾರತೀಯ ಸಿನಿರಂಗದಲ್ಲಿ ಟೈಟಲ್ನಿಂದಲೇ ಹವಾ ಸೃಷ್ಟಿಯಾಗಿದೆ ಈ ಚಿತ್ರದಲ್ಲಿ ಈ ಚಿತ್ರದ ಉಪೇಂದ್ರ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ನಮ್ಮ ಊರಿನಲ್ಲಿ ಆಡಿಯೋ ರಿಲೀಸ್ ಇವೆಂಟ್ ಮಾಡುತ್ತಿರುವುದು ನನ್ನ ಪುಣ್ಯ ಕಳೆದ ಬಾರಿ ಲಕ್ಷ್ಮಣ್ ಆಡಿಯೋ ರಿಲೀಸ್ ಆದೆ ನೆಹರು ಕ್ರೀಡಾಂಗಣದಲ್ಲಿ ನಡೆದಿತ್ತು ಅಭಿಮಾನಿಗಳು ಬಂದು ಆಶೀರ್ವದಿಸಿದ್ದಾರೆ. ಅದೇ ರೀತಿ ಕಬ್ಜಾ ಚಿತ್ರಕ್ಕೂ ಆಡಿಯೋ ರಿಲೀಸ್ ಇವೆಂಟ್ ನಮ್ಮ ಶಿಡ್ಲಘಟ್ಟದಲ್ಲಿ ಆಯೋಜನೆ ಮಾಡುತ್ತಿದ್ದೇವೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವದಿಸಿ ಎಂದರು.ಫೆಬ್ರವರಿ 26ರಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ.ಅದಲ್ಲದೆ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಆಗಮಿಸುತ್ತಿದ್ದಾರೆ ಅಂದು ವೇದಿಕೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ಸದ್ಯದಲ್ಲೇ ಮಾಹಿತಿ ಸಿಗಲಿದೆ ಎಂದರು.ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿ ಎಂಬುದು ‘ಕಬ್ಜ’ ತಂಡದ ಆಶಯ ಎಂದರು. ಇತ್ತೀಚೆಗೆ ನಡೆದ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮ ಯಶಸ್ವಿ ಆಗಿದೆ. ಅದೇ ರೀತಿ ಫೆಬ್ರವರಿ 26ರಂದು ‘ಕಬ್ಜ’ ತಂಡ ಅದ್ದೂರಿಯಾಗಿ ಆಡಿಯೋ ಇವೆಂಟ್ ಮಾಡಲಿದೆ. ಅದೇ ರೀತಿ ನಮ್ಮ ಶಿಡ್ಲಘಟ್ಟದಲ್ಲೂ ಯಶಸ್ಸು ನೀಡುತ್ತೀರಿ ಎಂದು ನಂಬಿದ್ದೇನೆ ಉಪೇಂದ್ರ ಮತ್ತು ಸುದೀಪ್ ಅವರಿಗೆ ಪರಭಾಷೆಯಲ್ಲೂ ಅಪಾರ ಅಭಿಮಾನಿಗಳಿದ್ದಾರೆ.ಎಲ್ಲ ಕಡೆಗಳಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಗಿಡಪ್ನಳ್ಳಿ ಜಿ ಬಿ ನಾರಾಯಣಸ್ವಾಮಿ, ವಿಜಯಕುಮಾರ್ ಹಾಗೂ ಆರ್ ಚಂದ್ರು ಅವರ ಸಹೋದರ ರಾಜಶೇಖರ್ ಭಾಗವಹಿಸಿದರು.