161 total views
ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆಯ್ ೫೦ ವರ್ಷ ಗೋಲ್ಡನ್ ಜಿಬ್ಲಿ ಮತ್ತು ಅಜಯಕುಮಾರ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಚಾಂಪಿಯನಷಿಪ್ ಹಮ್ಮಿಕೊಳ್ಳಲಾಗಿತು. ಇದರಲ್ಲಿ ಅನೇಕ ಕರಾಟೆ ಪಟುಗಳು ಭಾಗವಹಿಸಿದ್ದರು. ಮೊದಲಿಗೆ ಇಂಡಿಯನ್ ಕರಾಟೆ ಸಂಸ್ಥಾಪಕರಾದ ಬಿಎಂ ನರಸಿಂಹನ್ ಅವರು ನಿಧನವಾಗಿರುವುದರಿಂದ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಆಗಮಿಸಿದ ಅಥಿತಿಗಳಿಂದ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಅದೇ ರೀತಿ ಅನೇಕ ವಿದ್ಯಾರ್ಥಿಗಳಿಗೆ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ಮೆದಲ್ ಸರ್ಟಿಫಿಕೇಟ್ ಅತಿಥಿಗಳು ವಿತರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಗುಲ್ಬರ್ಗ ನ್ಯಾಯಾಧೀಶರ ಸಂಘದ ಅಧ್ಯಕ್ಷರಾದ ರಾಜಕುಮಾರ್ ಕಡಗಂಚಿ ಹಾಗೂ ಬದುಕು ಫೌಂಡೇಶನ್ ಅಧ್ಯಕ್ಷ ಶಿವಕುಮಾರ್ ದೊಡ್ಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಯುವ ಶಕ್ತಿ ಸಂಘಟನೆ ರಾಜ್ಯ ಅಧ್ಯಕ್ಷ ಅವ್ವಣಗೌಡ ಎನ್ ಪಾಟೀಲ್, ಇಂಡಿಯನ್ ಕರಾಟೆ ಮಾಸ್ಟರ್ ಶ್ರೀನಿವಾಸ್, ಬಾಸ್ಕೆಟ್ ಬಾಲ್ ಕೋಚ್ ಪ್ರವೀಣ್ ಪುಣೆ, ಡಿಸ್ಟಿಕ್ ಚೀಫ ಕೋಚ್ ರಾಜವರ್ಧನ್ ಜಿ ಚೌವ್ಹಾಣ ಸೇರಿದಂತೆ ಸ್ಪರ್ಧಾರ್ಥಿಗಳು, ಪೋಷಕರು ಇನ್ನಿತರರು ಹಾಜರಿದ್ದರು.
ವರದಿ :ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್