277 total views
ನಮ್ಮನ್ನು ಪ್ರಶ್ನೆ ಮಾಡುವ ನೈತಿಕತೆ ನಿಮಗಿಲ್ಲ :ನಿಮ್ಮದು 40,60% ಸರ್ಕಾರ. ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ಮನೆಗಳ ನಿರ್ಮಾಣ ಡಾ.ಅಜಯ್ ಸಿಂಗ್ ಕಾಮಗಾರಿ ಅಡಿಗಲ್ಲು ಪೂಜೆ.
ಜೇವರ್ಗಿ: ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರವು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಈ ಸರ್ಕಾರವನ್ನು 40, 60% ಸರ್ಕಾರ ಎಂದೆ ಕರೆಯಲಾಗುತ್ತದೆ ಇವರು ನಮ್ಮನ್ನು ಟೀಕಿಸುವ ಯಾವುದೇ ಅಧಿಕಾರವನ್ನು ಹೊಂದಿಲ್ಲ ,ನೈತಿಕತೆ ಇವರಿಗಿಲ್ಲಾ ಎಂದು ಶಾಸಕ ಅಜಯ್ ಸಿಂಗ್ ತಿಳಿಸಿದರು,ಪಟ್ಟಣದ ಖಾಜಾಕಾಲೋನಿ ಕುಳಗೇರಿ ನಿವಾಸಿಗಳಿಗೆ ಮನೆ ನಿರ್ಮಾಣದ ಶಂಕುಸ್ಥಾಪನೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಕೊಳಚೆ ಪ್ರದೇಶದ ಜನರಿಗೆ ಮಂಜುರಾದ 750 ಮನೆಗಳ ಫಲಾನುಭವಿಗಳ ಆಯ್ಕೆ ಹಾಗೂ ಮಾನದಂಡಗಳ ಕುರಿತು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಮೇರು ದ್ವನಿಯಲ್ಲಿ ಅವಾಜ್ ಹಾಕಿದ ಶಾಸಕ ಡಾ.ಅಜಯ್ ಸಿಂಗ್ ನಮ್ಮ ಕೆಲಸ ಕಾರ್ಯಗಳು ಹಾಗೂ ಸಾಧನೆ ಬಗ್ಗೆ ಪ್ರಶ್ನೆ ಮಾಡುವ ಹಾಗೂ ಟೀಕೆ ಮಾಡುವ ಹಕ್ಕು ನಮಗಿಲ್ಲ, ಎಲ್ಲದಕ್ಕೂ ಬರೀ ಟೀಕೆಯನ್ನು ಮಾಡುತ್ತೀರಿ, ನಮ್ಮ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ, ನೀವು ಏನು ಮಾಡಿದ್ದೀರಿ ? ನಿಮ್ಮದು ಹೊಂದಾಣಿಕೆ ರಾಜಕೀಯ ಆಗಿದೆ , ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಾಗಿದ್ದೇನೆ ಬನ್ನಿ ಎಂದು ಸವಾಲ್ ಹಾಕಿದರು .ಅಲ್ಲದೆ ಬಿಜೆಪಿ ನೇತೃತ್ವ ಸರ್ಕಾರ ಸಂಪೂರ್ಣ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷ ಪಾತದಿಂದ ಕೂಡಿದ್ದು ಕೆಲಸ ಮಾಡುವ ಕುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ, ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ ಜನರು ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ ಮಗ ,ಬನ್ನಿ ಬಹಿರಂಗ ಚರ್ಚೆಗೆ ಬನ್ನಿ ಉತ್ತರಿಸುತ್ತೇನೆ , ಜೇವರ್ಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಜನರು ಮತ್ತೊಮ್ಮೆ ಪ್ರಚಂಡ ಬಹುಮತದಿಂದ ನಮ್ಮನ್ನು ಆರಿಸಿ ಕಳಿಸುತ್ತಾರೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ.ನಾನು ಕರ್ನಾಟಕ ರಾಜ್ಯದ ಮಾಜೀ ಮುಖ್ಯಮಂತ್ರಿಗಳಾದ ದಿವಂಗತ ಧರ್ಮಸಿಂಗ್ ಅವರ ಮಗ ನನಗೆ ಯಾರ ಭಯವಿಲ್ಲ ಯಾರ ಹಂಗು ಇಲ್ಲಾ. ನನಗೆ ತಾವೆಲ್ಲರೂ ಆಶೀರ್ವಾದ ಮಾಡಿ ಆಯ್ಕೆ ಮಾಡಿ ಕಳುಹಿಸಿದ್ದೀರಿ, ನಿಮ್ಮ ಸೇವೆಗೆ ನಾನು ಸದಾ ಸಿದ್ಧನಾಗಿರುತ್ತೇನೆ ಎಂದು ಹೇಳಿದರು.
ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ 750 ಮನೆಗಳ ಅಡಿಗಲ್ಲು,ಗುದ್ದಲಿ ಪೂಜೆ ಸಮಾರಂಭದಲ್ಲಿ, ಪುರಸಭೆಯ ಅಧ್ಯಕ್ಷರಾದ ಗಂಗೂಬಾಯಿ ಜಟ್ಟಿಂಗರಾಯ, ಎ,ಇ,ಇ ಶ್ರೀಧರ್ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ ಕೋಟನೂರ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ ಸೀರಿ ,ಅಬ್ದುಲ್ ರೆಹಮಾನ್ ಪಟೇಲ್, ಮೆಹಬೂಬ ಪಟೇಲ ಕೋಬಾಳ ,ಮಲ್ಲಿಕಾರ್ಜುನ ದಿನ್ನಿ, ಶಿವಕುಮಾರ ಕಲ್ಲಾ, ಗುತ್ತೇದಾರರಾದ ಅಬ್ದುಲ್ ವಾಹಿದ್ ಗಿರಣಿ ,ಮಹೇಬೂಬ ಶಾನ್ವಾಲೆ, ರಫೀಕ್ ಜಮಾದಾರ್ ಹಾಗೂ ಗೌಸ್ ಭೂಸಾರಿ, ಕಾಶಿರಾಯಗೌಡ ಯಲಗೋಡ, ಖಾಸಿಂ ಪಟೇಲ್, ಮಲ್ಲಣ್ಣ ಕೊಡಚಿ, ವಿಶ್ವರಾಧ್ಯಗಂವ್ಹಾರ, ಸಲೀಂ ಕಣ್ಣಿ, ಇಬ್ರಾಹಿಂ ಪಟೇಲ, ನಾಗರಾಜ್ ವಿಟಿ, ಬಾಬಾ ಫಕ್ರುದ್ದೀನ ಅಲಿ ಸೇರಿದಂತೆ ಖಾಜಾಕಾಲೋನಿ ಬಡಾವಣೆಯ ಭಾಗವಹಿಸಿದ್ದರು. ವರದಿಗಾರರು – ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್