94 total views
ಶಿಡ್ಲಘಟ್ಟ ನಗರದಲ್ಲಿ 2ನೇ ದಿನದ ಗ್ರಾಮೀಣ ಕ್ರೀಡಾಕೂಟದಲ್ಲಿ ಬಾಲಕರ ಕುಸ್ತಿ ಸ್ಪರ್ಧೆಯು ಪ್ರತಿಯೊಬ್ಬರ ಗಮನ ಸೆಳೆಯುವಂತಿತ್ತು, ಈ ಕುಸ್ತಿ ಪಂದ್ಯಾಟದಲ್ಲಿ ದೊಡ್ಡತೇಕಹಳ್ಳಿ ಗ್ರಾಮದ ತೇಜಸ್ ರವರು ಕುಸ್ತಿ ಸ್ಪರ್ಧೆಯಲ್ಲಿ ಜಯಶೀಲರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ಹಾಗೂ ತಹಶೀಲ್ದಾರ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ದ್ವಿತೀಯ ಸ್ಥಾನ ಹಂಡಿಗನಾಳ ಗ್ರಾಮ ಪಂಚಾಯಿತಿ ಪಡೆದುಕೊಂಡಿರುತ್ತಾರೆ. 2022-23ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ ಸಂಬಂಧ ವಿವಿಧ ಕ್ರೀಡೆಗಳಿಗೆ ಗ್ರಾಮೀಣ ಕ್ರೀಡೆಯ ಎರಡನೇ ದಿನವಾದ ಇಂದು ತಾಲ್ಲೂಕಿನ ನೆಹರು ಕ್ರೀಡಾಂಗಣದಲ್ಲಿ ಖೋ-ಖೋ, ಕುಸ್ತಿ ಮತ್ತು ಯೋಗ ಕ್ರೀಡೆಗಳು ನೆರವೇರಿಸಲಾಯಿತು. ಇವತ್ತು ನಡೆದ ಖೋ-ಖೋ, ಕುಸ್ತಿ ಮತ್ತು ಯೋಗ ಕ್ರೀಡೆಗಳ ಪಂದ್ಯಾವಳಿಯಲ್ಲಿ ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರೀಡಾಪಟುಗಳು ಭಾಗಿಯಾಗಿದ್ದು, ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಪ್ರಥಮ, ಅದೇ ರೀತಿಯಾಗಿ ಬಾಲಕರ ಖೋ-ಖೋ ಪಂದ್ಯಾವಳಿಯಲ್ಲಿ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ನಂತರ ಬಾಲಕರ ಯೋಗ ಸ್ಪರ್ಧೆಯಲ್ಲಿ ಹಂಡಿಗನಾಳ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕರು ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿರವರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.