76 total views
ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕು ಹೋಬಳಿ ಮಟ್ಟವಾದ ಕಡಕೋಳ ಗ್ರಾಮದಲ್ಲಿ 74ನೇ ಗಣರಾಜ್ಯೋತ್ಸವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ಗ್ರಾಮಸ್ಥರಿಗೆ ಹಬ್ಬದ ವಾತಾವರಣವಾಗಿ ಪರಿಣಮಿಸಿತು, ಬೆಳಗಿನ ಜಾವ 7:00 ಗಂಟೆ ಯಿಂದ ಬೀದಿ ಬೀದಿಗಳಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಶಾಲಾ ಕಾಲೇಜು ಸರ್ಕಾರಿ ಕಚೇರಿಗಳು ಸಂಘ ಸಂಸ್ಥೆಗಳಿಗೆ ಜನಸಾಮಾನ್ಯರು ಓಡಾಡುವುದು ಕಂಡುಬಂತು ಇಲ್ಲಿಯ ಧ್ವಜಾರೋಹಣವು ಒಂದು ವಿಶೇಷತೆ ಹಬ್ಬ ವಾಗಿದೆ, ಇಲ್ಲಿಯ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಗುರುಗಳು ತಮ್ಮ ತಮ್ಮ ಶಾಲೆಯ ಧ್ವಜಾರೋಹನ ಮಾಡಿ ದೇಶಭಕ್ತಿ ಜಯ ಘೂಷಣೆ ಕೂಗುತ್ತಾ, ಶಾಲಾ ಮಕ್ಕಳೂಂದಿಗೆ ಪೊಲೀಸ್ ಸ್ಟೇಷನ್ ಹೋಗಿ ಪೋಲಿಸ್ ಠಾಣೆ ಕಚೇರಿಯ ಧ್ವಜಾರೋಹಣಕ್ಕೆ ಭಾಗಿಯಾಗಿ ಧ್ವಜವಂದನೆ ಸಲ್ಲಿಸಿ, ಮತ್ತೆ ಜಯಘೊಷಣೆ ಕೂಗುತ್ತಾ, ಕಡಕೋಳ ಗ್ರಾಮ ಪಂಚಾಯತ ಹತ್ತಿರ ಮುಖ್ಯ ಸರ್ಕಲ್ ನಲ್ಲಿ ಎಲ್ಲಾ ಶಾಲಾ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿ ವರ್ಗದವರು ಶಿಸ್ತು ಬುದ್ಧನಿಂದ ನಿಂತುಕೊಂಡಿದ್ಧು ನೋಡುಗರ ಮನಸ್ಸಿಗೆ ಒಂದು ತರಹ ಹೆಮ್ಮೆಯ ಉಲ್ಲಾಶ ಕಾರ್ಯ ಕ್ರಮವಾಗಿ ಕಾಣುತ್ತದೆ, ಶಾಲಾ ಪುಟಾಣಿ ಮಕ್ಕಳು ವಿವಿಧ ರೀತಿಯ ದೇಶದ ಮಹಾನ್ ನಾಯಕರ ವೇಷ ಧರಿಸಿ ಅವರ ಹಾವಭಾವ ಮಾಡುವುದು ನೋಡುವರ ಕಣ್ಣು ಸೆಳೆಯುವಂತೆ ಕಾಣುತ್ತಿದ್ದರು, ವಿವಿಧ ರೀತಿಯ ನೃತ್ಯ ಹಾಡು ದೇಶಭಕ್ತಿ ಗೀತೆಗಳ ಮೂಲಕ ರಂಜಿಸುತ್ತಾ ಎಲ್ಲಾ ಶಾಲಾ ವಿದ್ಯಾರ್ಥಿಗಳು ಈ ಸ್ಥಳಕ್ಕೆ ಬಂದ ನಂತರ, ಧ್ವಜಾರೋಹನ ಮಾಡುವ ಮುಂಚೆ ಪೊಲೀಸ್ ಅಧಿಕಾರಿಗಳು ಮತ್ತು ಸಹ ಸಿಬ್ಬಂದಿಗಳ ಶಿಸ್ತುಬದ್ಧ ಎದ್ದು ಕಾಣುತ್ತಿತ್ತು, ಕಡಕೋಳ ಗ್ರಾಮದ ಗುರಿ ಹಿರಿಯರು ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಪ್ರಮುಖರು ವೇದಿಕೆಯಲ್ಲಿದ್ದ ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಡಕೋಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಂದ ಧ್ವಜಾರವನವನ್ನು ನೆರವೇರಿಸಿದರು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ