58 total views
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನ್ಯಾಷನಲ್ ಎಜುಕೇಶನ್ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ, ಬುದ್ಧಿ ಚತುರತೆಯ ವಸ್ತು ಪ್ರದರ್ಶನವನ್ನು ಇಡಲಾಗಿದ್ದು, ಈ ವಸ್ತು ಪ್ರದರ್ಶನದ ಕೊಠಡಿಯನ್ನು ಪುರಸಭೆ ಅಧ್ಯಕ್ಷರಾದ ಶ್ರೀ ರಘುನಾಥ್ ರೇಣುಕೆ, ಉದ್ಘಾಟನೆ ಮಾಡಿದರು, ಪುರಸಭೆ ಮುಖ್ಯಾಧಿಕಾರಿಗಳಾದ ರವಿ ಬಾಗಲಕೋಟ, ಸಿ ಡಿ ಹಲ್ಯಾಳ ಹೈಸ್ಕೂಲ್ ಮುಖ್ಯೂಪಾಧ್ಯಾಯರಾದ ಎ ಬಿ ಸತ್ತರಗಿ, ಫ್ರಶ್ ಕ್ಲಬ್ ಅಧ್ಯಕ್ಷರಾದ ಈರಣ್ಣ ಗೌಡ ಪಾಟೀಲ್ ಪತ್ರಕರ್ತ ಧ್ವನಿ ಸಂಘಟನೆಯ ತಾಲೂಕಾ ಅಧ್ಯಕ್ಷರಾದ ಎಂ ಕೆ ಯಾದವಾಡ, ಶಿಕ್ಷಣ ಸಂಯೋಜಕರಾದ ಎಂ ಆರ್ ಜೋಷಿ, ಅತಿಥಿಗಳಾದ ರಾಘವೇಂದ್ರ ದೊಡ್ಡಮನಿ, ರಾಮಚಂದ್ರ ಕುಕ್ಕಡಿ, ಶೋಹಿಲ್ ಭೈರಕದಾರ, ರವರ ಜೊತೆಯಾಗಿ ಕ್ಯಾಂಬರೆಜ ಇಂಗ್ಲಿಷ್ ಸ್ಕೂಲಿನ ಮಕ್ಕಳ ಬುದ್ಧಿವಂತಿಕೆ ಇಂದ ಮಾಡಿದ ವಿದ್ಯುತ್ ಉತ್ಪಾದನೆ ಸೋಲಾರ ವಿದ್ಯುತ್ ಅದರ ಬಳಕೆ ಮನುಷ್ಯನ ಶಾರೀರಿಕ ಅಂಗಾಂಗ ಹೃದಯ ಭಾಗ ಮತ್ತು ಸಂಗೀತ ಚಿತ್ರಕಲೆ ಇನ್ನು ಅನೇಕ ತರಹದ ವಿದ್ಯಾರ್ಥಿಗಳ ಜಾನ್ಮೆ ಯಿಂದ ತಯಾರಿಸಿದ ವಸ್ತು ಪ್ರದರ್ಶನವನ್ನು ವೀಕ್ಷಣೆ ಮಾಡಿ ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ವ್ಯಕ್ತಪಡಿಸಿದರು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಾಂತೇಶ ರೊಕ್ಕದಕಟ್ಟಿ ಅವರು ಮಾತನಾಡಿ, ವಿಜ್ಞಾನ ಗಣಿತ ಚಿತ್ರಕಲೆ ಸಂಗೀತ ಸಮಾಜ ವಿಜ್ಞಾನ ಕನ್ನಡ ಹಿಂದಿ ಇಂಗ್ಲಿಷ್ ಹೀಗೆ ಹಲವಾರು ಭಾಷಾ ವಿಷಯ ಆದರಿಸಿ ತಮ್ಮ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಅನೇಕ ಕ್ರಿಯಾತ್ಮಕ ಕಾರ್ಯಗಳನ್ನು ಮಾಡಿರುತ್ತಾರೆಂದು ಹೇಳಿದರು, ನಂತರ ಬಂದಂತ ಗೌರವಾನಿಥ ಅತಿಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಸನ್ಮಾನಿಸಿದರು, ಸಂಸ್ಥೆಯ ಆಡಳಿತ ಅಧಿಕಾರಿಗಳಾದ ನಂದಿನಿ, ಮತ್ತು ಶಶಿಕಲಾ ರೊಕ್ಕದಕಟ್ಟಿ, ಮತ್ತು ಮುಖ್ಯೋಪಾ ದನಿಯರಾದ ಸುಜಾತ ಸುಳ್ಳದ, ಹಾಗು ಶಾಬ್ರಿನ್ ಬೆಣ್ಣೆ, ಯಾಸಿನ್ ಸುರಕೋಡ, ಉಪಸ್ಥಿತರಿದ್ದರು,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ