82 total views
ಜಾತ್ರೆಗಳಿಂದ ಜನರ ಬೆಸುಗೆ *ನಾಲವಾರ ಸದ್ಗುರು ಶ್ರೀ ಕೋರಿಸಿದ್ದೇಶ್ವರರ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ ಕಲಬುರಗಿ ಜಿಲ್ಲಾ ಚಿತ್ತಾಪೂರ ತಾಲೂಕಿನ ನಾಲವಾರದಲ್ಲಿ ಸದ್ಗುರು ಶ್ರೀ ಕೋರಿಸಿದ್ದೇಶ್ವರರ ತನಾರತಿ. ಹಾಗೂ ಭವ್ಯ ರಥೋತ್ಸವ ಜರುಗಿತು,
| ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅಭಿಮತ |- ನಾಲವಾರದ ಶ್ರೀ ಢಾ ಸಿದ್ದ ತೋಟೇಂದ್ರ ಶಿವಾಚಾರ್ಯರು ಆಧುನಿಕ ವಚನಕಾರರಾಗಿದ್ದು. ಅಮೆರಿಕದ ಕವಿ ವಾಲ್ಟ್ ವಿಟ್ಮನ್ ಅವರ ಬರವಣಿಗೆಯ ಎಲ್ಲ ಲಕ್ಷಣಗಳು ಶ್ರೀಗಳ ಸಾಹಿತ್ಯದಲ್ಲಿವೆ. ನನಗೆ ಸಿಕ್ಕ. ಎಲ್ಲ ಪುರಸ್ಕಾರಗಳಿಗಿಂತ ಶ್ರೀಮಠದ ಪ್ರಶಸ್ತಿ ದೊಡ್ಡದು ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು,
ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠದಲ್ಲಿ ಜಾತ್ರೋತ್ಸವ ನಿಮಿತ್ತ ಶನಿವಾರ ರಾತ್ರಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಸಿದ್ಧ ತೋಟೇಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕಾರ ಸ್ವೀಕರಿಸಿ ಮಾತನಾಡಿ , ಇದು ನನ್ನ ಜೀವನದ ಅವಿಸ್ಮರಣೀಯ ದಿನವಿದೆ.ಪ್ರಶಸ್ತಿಯು ಸಾಹಿತ್ಯ ,ಸಮಾಜಿಕ ಜವಬ್ದಾರಿ ಹೆಚ್ಚಿಸಿದೆ. ಉತ್ತರ ಕರ್ನಾಟಕದಲ್ಲಿ ಮಠಗಳು ಇಲ್ಲದಿದ್ದರೆ ಬಡ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದರು. ಲಿಂಗಾಯತ ಎಂಬುವುದು ಎಲ್ಲ ಸಮುದಾಯಗಳ ಒಕ್ಕೂಟ ಎಂದರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಿ ಮಾತನಾಡಿ .ಕಳೆದ ನಾಲ್ಕು ವರ್ಷದಿಂದ ಸುರಪೂರದಿಂದ ನಾಲವಾರದವರೆಗೆ ಪಾದಯಾತ್ರೆ ಮಾಡುತ್ತಿದ್ದು, ಹಿರಿಯರು ಮಾಡಿದ ಪುಣ್ಯದ , ಫಲದಿಂದಾಗಿ ಶ್ರೀಗಳ ಆಶೀರ್ವಾದ ಸಿಕ್ಕಿದೆ.ಗುರುಗಳು ತಂದೆ -ತಾಯಿಗೆ ಗೌರವ ಕೊಟ್ಟಾಗಲೇ ಜೀವನ ಸಾರ್ಥಕವಾಗುತ್ತದೆ ಎಂದರು, ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ಡಾ ಅಜಯಸಿಂಗ್ ಮಾತನಾಡಿ , ನಾಲವಾರದಲ್ಲಿ ನಡೆಯುವ ತನಾರತಿ ಮಹೋತ್ಸವವು ದೇಶದೆಲ್ಲೆಡೆ ಪ್ರಖ್ಯಾತಿ ಪಡೆದಿದೆ.ರೈತರು ಹಾಗೂ ಸದ್ಬಕ್ತರ ಮೇಲೆ ಶ್ರೀಗಳ ಆಶೀರ್ವಾದ ನಿರಂತರವಾಗಿರಲಿ ಎಂದರು . ಶ್ರೀಮಠದ ಪೀಠಾಧಿಪತಿ ಶ್ರೀ ಡ ಸಿಧ್ದ ತೋಟೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಕೋರಿಸಿದ್ದೇಶ್ವರ ಜಾತ್ರೆ ಎಂಬುದು ನೆಪ ಮಾತ್ರ. ನಾಡಿನ ಹಾಗೂ ಪರ ನಾಡಿನ ಭಕ್ತರು ಒಂದೆಡೆ ಸೇರುವುದು ಮುಖ್ಯವಾಗಿದೆ.ಇಲ್ಲಿ ನಡೆಯುವ .ಭಕ್ತರ ಹರಕೆಯ ತನಾರತಿ ಮಹೋತ್ಸವ ದಕ್ಷಿಣ ಭಾರತದ ಮಹಾದೀಪ ಮೇಳ ಎಂಬ ಖ್ಯಾತಿ ಪಡೆದಿದೆ. ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳ ಅಪಾರ ಭಕ್ತರ ಕಷ್ಟಗಳನ್ನು ದೂರ ಮಾಡಿ . ಕಲಿಯುಗದ ಕಾಮಧೇನುವಾಗಿದ್ದಾರೆ ಎಂದರು. ಮುದ್ನೂರಿನ ಶಾಖಾ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಪ್ರಮುಖರಾದ ಅರವಿಂದ ಚವ್ಹಾಣ, ಗುರುರಾಜ ಇಟಗಿ, ಢಾ ಸಿದ್ದ ತೋಟೇಂದ್ರ ಬೆಂಗಳೂರು.ಮಹೇಶ ವೀರಯ್ಯ ಸ್ವಾಮಿ , ಡಾ ಎಸ್ .ಬಿ .ಕಾಮರೆಡ್ಡಿ, ಮಹಾದೇವ ಗಂವ್ಹಾರ, ಸಿಂದ್ದಲಿಂಗಯ್ಯ ಸ್ವಾಮಿ ಕೊಡಗಿಮಠ, ಶರಣುಕುಮಾರ ಜಾಲಹಳ್ಳಿ, ಇತರರಿದ್ದರು. ಸೌಮ್ಯಶ್ರೀ ಭರತ್ ನಾಟ್ಯ ಪ್ರದರ್ಶಿಸಿದಳು, ಢಾ ಸಿದ್ದರಾಜ ಕರೆಡ್ಡಿ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೊಪಣೆಯನ್ನು ಮಾಡಿದರು. ನಾಲವಾರದಲ್ಲಿ ಶ್ರೀ ಕೋರಿಸಿದ್ದೇಶ್ವರ ಜಾತ್ರೋತ್ಸವ ನಿಮಿತ್ಯ ರಾತ್ರಿ ಆಯೋಜಿಸಿದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹಾಗೂ ಡಿ.ಎಸ್ ಮ್ಯಾಕ್ಸ್ ಮುಖ್ಯಸ್ಥ ಎಸ್.ಪಿ ದಯಾನಂದ ಅವರಿಗೆ ರಾಷ್ಟ್ರ ಮಟ್ಟದ ಶ್ರೀ ಸಿದ್ಧ ತೋಟೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಢಾ.ಸಿದ್ದತೋಟೇಂದ್ರ ಶಿವಾಚಾರ್ಯರು, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶಾಸಕರಾದ ರಾಜುಗೌಡ , ಡಾ.ಅಜಯಸಿಂಗ್ , ಪ್ರಮುಖರಾದ ಗುರುರಾಜ ಇಟಗಿ, ಡಾ .ಸಿದ್ದ ತೋಟೇಂದ್ರ ಬೆಂಗಳೂರು, ಸಿದ್ದಲಿಂಗಯ್ಯ ಸ್ವಾಮಿ ಇತರರಿದ್ದರು. *ಸಾಧಕರಿಗೆ ಶ್ರೀಮಠದಿಂದ ಗೌರವ ನಾಲವಾರ ಮಠದಿಂದ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ (ಸಾಹಿತ್ಯ ಕ್ಷೇತ್ರ) ಹಾಗೂ ಡಿ.ಎಸ್ ಮ್ಯಾಕ್ಸ್ ಮುಖ್ಯಸ್ಥ ಎಸ್.ಪಿ ದಯಾನಂದ (ಸಾಮಾಜಿಕ ಸೇವೆ) ಅವರಿಗೆ ಪ್ರತಿಷ್ಠಿತ ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುರಸ್ಕಾರದ ಜೊತೆಗೆ ತಲಾ ೧೧ ಸಾವಿರ ರೊ.ಅರ್ಧ ತೊಲಾ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಲಾಯಿತು,
ನಾಲವಾರ ಶ್ರೀಗಳಿಗೆ ಡಿ.ಎಸ್.ಮ್ಯಾಕ್ಸ ಪ್ರಶಸ್ತಿ.. ಧಾರ್ಮಿಕ ಸಾಮಾಜಿಕ ,ಶೈಕ್ಷಣೀಕ ಸೇವೆ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ ಅಸಂಖ್ಯಾತ ಭಕ್ತರಿಗೆ ಮಾರ್ಗದರ್ಶನವನ್ನು ನೀಡುತ್ತಿರುವ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಢಾ ಸಿದ್ದ ತೋಟೇಂದ್ರ ಶಿವಾಚಾರ್ಯರಿಗೆ ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್ ನಿಂದ ನೀಡುವ ಪ್ರತಿಷ್ಠಿತ ‘ ಡಿಎಸ್ ಮ್ಯಾಕ್ಸ ‘ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಪುರಸ್ಕಾರ ನೀಡಲಾಗುವುದು, ಎಂದು ಸಂಸ್ಥೆ ಸಂಸ್ಥಾಪಕ ಎಸ್.ಪಿ ದಯಾನಂದ ತಿಳಿಸಿದ್ದರು.
ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.