30 total views
ಶಿಡ್ಲಘಟ್ಟ:-ಮಹಿಳೆಯರು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗಗಳಾಗಿ ತನ್ನ ಕಾಲಿನ ಮೇಲೆ ನಿಂತುಕೊಂಡು ಸ್ವಾಭಿಲಂಭಗಳಾಗಿ ದುಡಿಯಬೇಕೆಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು. ನಗರದ ನಗರಸಭೆ ಸಮುದಾಯ ಭವನದಲ್ಲಿ ನಡೆದ ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ತರಬೇತಿ ಪಡೆದ ಸಿದ್ಧಾರ್ಥ ನಗರದ 30 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ಬರುವ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳದೆ ತಮ್ಮ ಜೀವನೋಪಾಯ ಗಳನ್ನು ಕಟ್ಟಿಕೊಂಡು ತಾವುಗಳೆಲ್ಲ ಒಂದು ಸಂಘವನ್ನು ಕಟ್ಟಿಕೊಂಡು ಬೇರೆಯವರಿಗೆ ಮಾದರಿಯಾಗಿ ಬಾಳಬೇಕೆಂದು ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕ ಜೈ ಕುಮಾರ್, ಸಹಾಯಕ ಜಿಲ್ಲಾ ಸಂಯೋಜಕರು ಹಾಗೂ ತರಬೇತಿದಾರ ವಿನೋದ್ ಕುಮಾರ್, ಜೆಡಿಎಸ್ ಮುಖಂಡ ಎಸ್ಎಂ ರಮೇಶ್, ಸುಭಾಷ್ ಚಂದ್ರ ಹಾಗೂ ಎಲ್ಲಾ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ:- ವೆಂಕಟೇಶ್. ಸಿ