124 total views
ಕಾಳಗಿ :ತಾಲೂಕಿನ ಬೆಡಸೂರ ಎಂ. ತಾಂಡದಲ್ಲಿ ಮಂಗಳವಾರ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಹೋರಾಟಗಾರ ದಿ. ಗೋಪಾಲದೇವ ಜಾಧವ ಅವರ 39ನೇ ಪುಣ್ಯಸ್ಮರಣೆ ನಿಮಿತ್ಯವಾಗಿ ಹಮ್ಮಿಕೊಂಡಿರುವ ಧರ್ಮ ಸಭೆ ಮತ್ತು ಜಾನಪದ ಸಂಗೀತ ಹಾಗೂ ಸಾಂಸ್ಕೃತಿಕ ಸಮಾರಂಭದ ಜ್ಯೋತಿ ಬೆಳಗಿ ಸದ್ಭಕ್ತರನ್ನುದ್ದೇಶಿಸಿ ಶ್ರೀಗಳು ಆಶಿರ್ವಚನ ನೀಡುತ್ತಿದ್ದರು.
ಭಾರತ ದೇಶವೆಂದರೆ ನಮ್ಮ ತಾಯಿ ಇದ್ದಂತೆ ಆ ಮಹಾ ತಾಯಿಯನ್ನು ಸುಭದ್ರವಾಗಿಟ್ಟುಕೊಂಡು ಸಂರಕ್ಷಣೆ ಮಾಡಿಕೊಂಡು ಹೊಗುವುದು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ದೇಶ ಸ್ವಾತಂತ್ರ್ಯ ಗೊಳಿಸುದಕ್ಕಾಗಿ ನಮ್ಮ ಹಿಂದಿನ ವೀರರು ಎಷ್ಠು ಹೋರಾಡಿದ್ದಾರೆಂದರೆ ಹೆಳಲು ಸಾಧ್ಯವಿಲ್ಲ. ದಿ.ಗೋಪಾಲದೇವ ಜಾಧವ ಅವರಂತಹ ಸಾವಿರಾರು ಜನ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ನಮಗೆ ಸ್ವಾತಂತ್ರ ತಂದುಕೊಟ್ಟಿದ್ದಾರೆ.
ಸ್ವಾತಂತ್ರ ಹೋರಾಟಗಾರನ ಕರುಳಿನ ಕುಡಿಗಳಾದ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಹಾಗೂ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಇಬ್ಬರೂ ಕೂಡ ತಮ್ಮ ನಯ-ವಿನಯಗಳ ಮೂಲಕ ಸಾರ್ವಜನಿಕರ ಹೃದಯಗಳನ್ನು ಗೆದ್ದು, ಉನ್ನತಸ್ಥಾನದಲ್ಲಿಳಿದುಕೊಂಡು ಜನಸಾಮಾನ್ಯರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸ್ವಾತಂತ್ರ್ಯ ವೀರ ದಿ.ಗೋಪಾಲದೇವ ಜಾಧವ ಅವರ ಕೀರ್ತಿ ಬೆಳಕಿನತ್ತ ತಂದಿದ್ದಾರೆ ಎಂದ ಶ್ರೀಗಳು ಇದು ದೇಶಕ್ಕೆ ಸಲ್ಲಿಸುತ್ತಿರುವ ಗೌರವ ಎಂದು ಬಣ್ಣಿಸಿದರು.
ಸಂಸದ ಡಾ.ಉಮೇಶ ಜಾಧವ ಮಾತನಾಡಿ ರಾಜಕೀಯ ಜೀವನದಲ್ಲಿ ನಾನೇನು ಗಳಿಸಿ ಉಳಿಸ ಬೇಕು. ನನ್ನ ಮನೆ ಮಠಗಳು ತುಂಬಿಕೊಂಡು ವೈಭವದ ಬದುಕು ನಡೆಸಬೇಕೆಂದಲ್ಲ. ದಿ. ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ನನ್ನ ಕೈಲಾದ ಮಟ್ಟಿಗೆ ನಮ್ಮ ಭಾಗದ ಜನತೆ ಸೇವಕನಾಗಿ ಅಭಿವೃದ್ಧಿಗೋಳಿಸುವುದೊಂದೇ ಚಿಂತೆ ನನ್ನದಾಗಿದೆ. ಇದಕ್ಕೆ ನಮ್ಮ ಭಾಗದ ಜನತೆ ಸಂಪೂರ್ಣ ಬೆಂಬಲ ನೀಡಿದೆ ಎಂದರು. ತಾವು ಕೊಟ್ಟ ಶಕ್ತಿಯಿಂದ ದಿಲ್ಲಿಯಲ್ಲಿಕುಳಿತುಕೊಳ್ಳಲು ಸಾಧ್ಯವಾಗಿದೆ. ನಾನು ಅಧೀಕಾರಕ್ಕೆ ಬಂದಾಗಿನಿಂದ ಹಗಲು-ರಾತ್ರಿ ಎನ್ನದೆ ನನ್ನ ಮಗ ಅವಿನಾಶ ಒಳಗೊಂಡು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದೇವೆ. ಎಂದು ತಮ್ಮ ಅಭಿವೃದ್ಧಿಯ ಪಟ್ಟಿಗಳನ್ನು ಸಾರ್ವಜನಿಕರ ಮುಂದಿಟ್ಟರು.
ಶಾಸಕ ಡಾ.ಅವಿನಾಶ ಜಾಧವ ಹುಲಸೂರು ಶ್ರೀಗಳು ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಹಾಗೂ ಅನೇಕ ಜನ ಗಣ್ಯಮಾನ್ಯರು ಮಾತನಾಡಿದ ಸಂಸದ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಕೊಂಡಾಡಿ ಮೆಚ್ಚುಗೆವ್ಯಕ್ತಪಡಿಸಿದರು.
ಶಾಸಕ ಡಾ.ಅವಿನಾಶ ಜಾಧವ ಹೆಳಿಕೆ:
“ಸ್ವಾತಂತ್ರ್ಯ ಹೋರಾಟಗಾರ ನಮ್ಮ ತಾತಾಜೀ ದಿ.ಗೋಪಾಲದೇವ ಜಾಧವ ಅವರ ಮೊಮ್ಮಗನಾಗಿ ಜನಸೇವೆ ಮಾಡುತ್ತಿರುವುದು ಮತ್ತು ನಮ್ಮ ತಾತನಂತೆ ಸದಾ ಜನರ ಒಳಿತಿಗಾಗಿ ದುಡಿಯಲು ತೃಪ್ತಿ ತಂದಿದೆ”
ಚೊಂಚೋಳಿ ಮತಕ್ಷೇತ್ರದ ಜನತೆಯ ಮನೆ ಮಗನಾಗಿರುವ ನನಗೆ ಜನತೆ ನನಗೆ ಇನ್ನೂ ಹೆಚ್ಚು ಶಕ್ತಿ ನೀಡುತ್ತಿರುವುದು. ಕ್ಷೇತ್ರದ ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದೆ.
ಸಂತರ ಸಮಾಗಮ:
ಚಿಂಚೋಳಿ ಮತಕ್ಷೇತ್ರದ ಎಲ್ಲಾ ಧರ್ಮಗುರುಗಳನ್ನು ಒಂದೇ ವೇದಿಕೆಯಲ್ಲಿ ಕುರಿಸಿ, ಸಮಾರಂಭಕ್ಕೆ ಸಾಕ್ಷಿಯಾಗಿರುವ ಸಾವಿರಾರು ಜನ ಸದ್ಭಕ್ತರಿಗೆ ದಿವ್ಯ ದರ್ಶನಾರ್ಶಿವಾದವನ್ನು ಮಾಡಿಸಲಾಯಿತು.
ಒಂದೇ ವೇದಿಕೆಯಲ್ಲಿ ಹಲವಾರು ಶರಣ-ಸಂತರು ಸಂಗಮ ವಾಗಿರುವ ಸದರಿ ಭಾವೈಕ್ಯತೆಯ ಸಂಕೇತವಾಗಿ ಸಮಾರಂಭಕ್ಕೆ ಮೇರಗು ಬಂದಂತಾಯಿತು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ಪೂಜ್ಯ ಭಾವನೆಯಿಂದ ಕಾಣುವುದು ಭಾರತೀಯರ ಆಧ್ಯ ಕರ್ತವ್ಯ: ಹಾರಕೂಡ ಶ್ರೀ
ಕಾಳಗಿ 9 ತಿಂಗಳ ಕಾಲ ತನ್ನ ಉದರದಲ್ಲಿ ನಮ್ಮನ್ನು ಹೊತ್ತು-ಹೆತ್ತಂತಹ ಮಹಾ ಮತೆಗೆ ಎಷ್ಟು ಗೌರವದಿಂದ ಕಾಣುತ್ತೇವೋ ಅಷ್ಠೆ ಪೂಜ್ಯ ಭಾವನೆಯನ್ನು ಸ್ವಾತಂತ್ರ್ಯ ಸೇನಾನಿಗಳಿಗೂ ನೀಡಬೇಕು. ಅದು ಭಾರತೀಯರಾದ ನಮ್ಮ ಜವಾಬ್ದಾರಿಯಾಗಿದೆ ಎಂದು ಹಾರಕೂಡದ ಚನ್ನವೀರ ಶಿವಾಚಾರ್ಯರು ತಮ್ಮ ಆಶಿರ್ವಚನದ ಮೂಲಕ ತಿಳಿಸಿದರು
ಸಂಗೀತದ ರಸದೌತಣದಲ್ಲಿ ಮಿಂದೆದ್ದ ಸಾರ್ವಜನಿಕರು:ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡಿರುವ ಸಂಗೀತದ ವಿಶೇಷ ಕಾರ್ಯಕ್ರಮ ನೆರೆದಿರುವ ಸಾವಿರಾರು ಜನರನ್ನು ಮಂತ್ರಮುಗ್ದರನ್ನಾಗಿಸಿ ಸಂಗೀತದ ರಸದೌತಣದಲ್ಲಿ ಮಿಂದೇಳುವಂತೆ ಮಾಡಿತು. ಸಮಾರಂಭಕ್ಕೆ ಆಗಮಿಸಿರುವ ವಿವಿಧ ಕಲಾತಂಡದವರು ಒಂದು ಕಡೆ ಲಂಬಾಣಿ ನೃತ್ಯ ನಡೆಸಿದರು, ಮತ್ತೊಂದು ಕಡೆ ಜಾನಪದ ಗೀತೆಗಳು, ಭಕ್ತಿಗೀತೆಗಳು, ದೇಶಭಕ್ತಿಗೀತೆಗಳು ಹಾಡಿ ಮನೋರಂಜನೆ ನೀಡಿದರು.ಕುಟ್ಟಿದ ಹುಗ್ಗಿ ಪಾಯಸ ಸವಿದ ಸದ್ಭಕ್ತರು:
ಸಮಾರಂಭಕ್ಕೆ ಆಗಮಿಸಿರುವ ಸಾವಿರಾರು ಜನ ಸದ್ಭಕ್ತು ಸಾಲಾಗಿ ನಿಂತು ವಿಶೇಷವಾಗಿ ಕುಟ್ಟಿದ ಗೋದಿಯ ಹುಗ್ಗಿ, ಹಾಲು, ತುಪ್ಪ, ಅನ್ನ, ಸಾಂಬಾರ ಸವಿಯುತ್ತಿರುವುದು ಕಂಡು ಬಂತು.
ಸ್ವಾತಂತ್ರ್ಯ ಹೋರಾಟಗಾರನ ಪುಸ್ಥಳಿಗೆ ಹೂ.ಗಳ ಸುರಿಮಳೆ:
ದಿ.ಗೋಪಾಲದೇವ ಜಾಧವ ಅವರ ಪುಣ್ಯಸ್ಮರಣೆಗೆ ಆಗಮಿಸಿರುವ ಅಭಿಮಾನಿಗಳು, ಹಿತೈಸಿಗಳು, ದೇಶಭಕ್ತರು ಬೆಡಸೂರ ಎಂ.ತಾಂಡಕ್ಕೆ ಆಗಮಿಸಿ ಅಲ್ಲಿ ನಿರ್ಮಿಸಲಾಗಿರುವ ದಿ.ಗೋಪಾಲದೇವ ಜಾಧವ ಅವರ ಪುಸ್ಥಳಿಗೆ ಭಕ್ತಿಯಿಂದ ನಮಿಸಿ ಹೂ…ಮಾಲೆಗಳನ್ನು ಸಮರ್ಪಿಸಿದರು.
ಸಾಧಕರಿಗೆ ಸನ್ಮಾನ:
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಮಾಜ ಚಿಂತಕರು, ಧಾರ್ಮಿಕ ಚಿಂತಕರು, ಕೃಷಿಕ್ಷೇತ್ರ, ನೀರಾವರಿ, ಸಮಾಜಸೇವೆ, ಶಿಕ್ಷಣ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ಪದವಿ ಕಾಲೇಜುಗಳಿಗೆ ಉಚಿತ ಕಂಪ್ಯೂಟರ್ ವಿತರಣೆ:
ನಮ್ಮ ಕ್ಷೇತ್ರದ ಸರ್ಕಾರಿ ಪದವಿ ಕಾಲೇಜುಗಳಿಗೆ ಒಟ್ಟು 225 ಕಂಪ್ಯೂಟರ್ ಗಳನ್ನು ಉಚಿತವಾಗಿ ನೀಡಲಾಯಿತು.
ಆಟಗಾರರಿಗೆ ಸ್ಫೂರ್ತಿ: ಪುಣ್ಯಸ್ಮರಣೋತ್ಸವ ನಿಮಿತ್ಯ ಚಿಂಚೋಳಿ ಕ್ಷೇತ್ರದ ಯುವಕರಿಗಾಗಿ ಕ್ರೀಕೇಟ್ ಟೋರ್ನಾಮೆಂಟ್ ಏರ್ಪಡಿಸಿ 250 ತಂಡಳಿಗೆ ಆಟ ಆಡಿಸುವ ಕಾರ್ಯ ನಡೆಯುತ್ತಿದ್ದು, ಪ್ರಥಮ ದ್ವಿತಿಯ, ತೃತೀಯ ಸೇರಿ ಸೂಕ್ತ ಬಹುಮಾನ ನೀಡಿತ್ತಿರುವುದು ನವ ಯುವಕರಿಗೆ, ಆಟಗಾರರಿಗೆ ಸ್ಫೂರ್ತಿ ನೀಡಿದಂತಾಯಿತು.
ಸೂಕ್ತ ಬಂದೋಬಸ್ತ್:
ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನಸಾಮಾನ್ಯರನ್ನು ಯಾವುದೇ ಪ್ರಕಾರದ ತೊಂದರೆಯಾಗದಂತೆ ಕಾಳಗಿ ಸಿಪಿಐ ವಿನಾಯಕ್ ಹಾಗೂ ಪಿಎಸ್‌ಐ ಹುಲಿಗೆಪ್ಪ ಗೌಡಗೊಂಡ ನೇತೃತ್ವದ ಪೋಲಿಸ್ ಬಿಗಿ-ಬಂದೋಬಸ್ತ್ ಮಾಡಲಾಗಿತ್ತು.
ಸಮಾರಂಭಕ್ಕೆ ಸಾಕ್ಷಿಯಾದ ಶ್ರೀಗಳು:
ಶಿವಾಚಾರ್ಯ ರತ್ನ ಹಾರಕೂಡ ಚನ್ನವೀರ ಶ್ರೀಗಳು, ಪರವತಲಿಂಗ ಪರಮೇಶ್ವರ ಮಹಾರಾಜರು, ಹವಾ ಮಲ್ಲಿನಾಥ ಸ್ವಾಮಿಜೀ, ಚಿಂಚೋಳಿ ಬಡಿ ದರ್ಗಾ ಮುತ್ಯಾ, ಮತಾ ಲತಾದೇವಿ, ಮುರಹರಿ ಮಹಾರಾಜ, ರಾಜು ಮಹಾರಾಜ, ಬಸವಲಿಂಗ ಅವಧೂತರು, ಹಜರತ್ ಸೈಯದ್ ಶಾ ಮುಸ್ತಾಫಾ ಖಾದ್ರಿ ಮಳಖೇಡ, ಹುಲಸೂರು ಶ್ರೀಗಳು, ರಟಕಲ್‌ನ ಶ್ರೀಗಳು, ಹೊಸ್ಸಳ್ಳಿ ಶ್ರೀಗಳು, ಸುಗೂರ(ಕೆ)ಶ್ರೀಗಳು, ಚಿಮ್ಮಾ ಇದ್ಲಾಯಿ ಶ್ರೀಗಳು, ಚಂದನಕೇರಾ ಶ್ರೀಗಳು ಸೇರಿದಂತೆ ಇದ್ದರು.
ಸಮಾರಂಭದಲ್ಲಿ ಭಾಗಿಯಾದ ಗಣ್ಯ ಮಾನ್ಯರು:
ಬೆಡಸೂರ ಗ್ರಾಪಂ. ಅಧ್ಯಕ್ಷ ಸಂಜುಕುಮಾರ ತೆಳಮನಿ, ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಕೋಲಿ ಸಮಾಜ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ಶಿವರಾಜ ಪಾಟೀಲ ಗೊಣಗಿ, ವಿಜಯಕುಮಾರ ಚೆಂಗಟಾ, ಕಾಳಗಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಂ, ಮಲ್ಲಿನಾಥ ಪಾಟೀಲ ಕಾಳಗಿ, ರೇವಣಸಿದ್ದಪ್ಪ ಮಾಸ್ಟರ್, ಸುಧಾಕರ ಪಾಟೀಲ ರಾಜಾಪೂರ, ಬಸವರಾಜ ಬೆಣ್ಣೂರಕರ್, ಸಂತೋಷ ಪಾಟೀಲ ಮಂಗಲಗಿ, ರಾಜಕುಮಾರ ರಾಜಾಪೂರ, ರೇವಣಸಿದ್ದ ಬಡಾ, ಶಂಕರ ಚೋಕಾ, ಮಾರುತಿ ಜಮಾದಾರ, ಶ್ರೀಮಂತ ಕಟ್ಟಿಮನಿ, ರಾಜು ಜಾಧವ, ನರಸಮ್ಮ ಅವುಂಟಿ, ಕೆ.ಎಂ.ಬಾರಿ, ಶಿವರಾಯ ಕೋಯಿ, ರಾಮು ರಾಠೋಡ, ರತ್ನಮ್ಮ ಡೊಣ್ಣೂರ, ರಮೇಶ ಕಿಟ್ಟದ, ಶ್ರೀನಿವಾಸ ಗುರುಮಠಕಲ್, ಅಲ್ಲಮಪ್ರಭು ಹುಲಿ ಪಾಟೀಲ, ಸುಂದರ ಡಿ.ಸಾಗರ, ಗಣಪತರಾವ, ಗಂಗಾಧರ ಮೈಲಾರ, ಸಂತೋಷ ಚೌವ್ಹಾಣ, ಸಿ.ಎ.ಉಮೇಶ ಚೌವ್ಹಾಣ, ಚಂದ್ರಕಾಂತ ಜಾಧವ, ಸಂತೋಷ ಜಾಧವ ಹಾಗೂ ವಿವಿಧ ತಾಂಡಗಳಿಂದ ಆಗಮಿಸಿರುವ ನಾಯಕ, ಕಾರಬಾರಿ, ಡಾವಾ, ಸರ್ಕಾರಿ ವಿವಿಧ ಇಲಾಖೆಯ ಅಧೀಕಾರಿಗಳು ಸೇರಿದಂತೆ ಅನೇಕರಿದ್ದರು.