212 total views
ಮೈಸೂರು :- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಟಿ ನರಸೀಪುರ ತಾಲೂಕು, ತಿರುಮಕೂಡಲು ವಲಯದ ಬನ್ನಳ್ಳಿ ಹುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ದುಶ್ಚಟ ಮುಕ್ತ,ಸ್ವಸ್ಥ ಸಂಕಲ್ಪ ಕಾರ್ಯಕ್ರಮವನ್ನು, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಯುತ ಪ್ರಭುಸ್ವಾಮಿ ರವರು ಯೋಜನಾಧಿಕಾರಿಯವರಾದ ಶ್ರೀಯುತ ಹನುಮಂತಪ್ಪರವರು ಶಾಲಾ ಶಿಕ್ಷಕರಾದ ಮಹೇಂದ್ರ ಕುಮಾರ್, ಸೆಸುರಾಜ್, ಹೇಮೇಶ್ ಕುಮಾರ್, ಶಿಕ್ಷಕಿಯರಾದ, ಸುಮಾ ,ಶಿಲ್ಪ ಮಂಜುಶ್ರೀ,ಕೃಷಿ ಮೇಲ್ವಿಚಾರಕರದ ಕುಮಾರ್ ಟಿಆರ್ ಮೇಲ್ವಿಚಾರಕರಾದ ಮಹೇಶ್ ಸೇವಾ ಪ್ರತಿನಿಧಿಗಳಾದ, ಷಾಯಿದ, ಕವಿತಾ, ಸಾಮಾನ್ಯ ಸೇವಾ ಕೇಂದ್ರದ ಸಂಗೀತ ,ಶಾಲಾ ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಯೋಜನಾಧಿಕಾರಿಯವರಾದ ಶ್ರೀಯುತ ಹನುಮಂತಪ್ಪ ರವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪರಮಪೂಜ್ಯರ ಮಾರ್ಗದರ್ಶನದಲ್ಲಿ, ಕೇವಲ ಸಾಲ ಸೌಲಭ್ಯಕ್ಕೆ ಸೀಮಿತವಾಗದೆ, ಸಮಾಜದ ದಿನ ದುರ್ಬಲರ ಶೈಕ್ಷಣಿಕ ಸಾಮಾಜಿಕ, ಆರ್ಥಿಕ, ಪ್ರಗತಿಯಲ್ಲಿ ತನ್ನನ್ನು ತಾನು ತೊಡಿಸಿಕೊಂಡು, ಗ್ರಾಮ ಅಭಿವೃದ್ಧಿ ಯೋಜನೆ ಯ ಮೂಲಕ ಶಾಶ್ವತ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತಿದೆ, ಶಾಲಾ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ, ಮಾತೃಶ್ರೀ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮ ಹಾಗೂ ನಮ್ಮೂರು ನಮ್ಮ ಕೆರೆ, ವಿಶೇಷ ಚೇತನರಿಗೆ ಸಲಕರಣೆಗಳನ್ನು ಒದಗಿಸುವ ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು, ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದರು.
ಪ್ರಭುಸ್ವಾಮಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ತಮ್ಮ ಪಾಲು ಬಹು ಮುಖ್ಯವಾಗಿದೆ ಹಾಗೂ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ತಂದೆ ತಾಯಿ ಗಳೇ,ಪ್ರತ್ಯಕ್ಷ ದೈವರು ಮನೆಯಲ್ಲಿ ತಾಯಿ ಸಂತೋಷವಾಗಿದ್ದರೆ ದೇವಾಲಯದಲ್ಲಿ ತಾಯಿ ಸಂತೋಷವಾಗಿರುತ್ತಾಳೆ. ಗುರು ಹಿರಿಯರು ತಿಳಿಸಿದಂತೆ,
ವಿದ್ಯೆ ಕಲಿತ ವ್ಯಕ್ತಿ ಭ್ರಷ್ಟನಾದರೂ ಆಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ, ಭ್ರಷ್ಟ ನಾಗಲಾರ, ಮನುಷ್ಯ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಸ್ಥಿರತೆಯಿಂದ ಸಮಾಜದ ಆರೋಗ್ಯವೂ ಕೂಡ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.