178 total views
ಮೈಸೂರು :- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಟಿ ನರಸೀಪುರ ತಾಲೂಕು ಇಂದು ಟಿ ನರಸೀಪುರ ವಲಯದ ಬೆನಕನಹಳ್ಳಿ ಕಾರ್ಯ ಕ್ಷೇತ್ರದ, ವೀರಪ್ಪ ಒಡೆಯರ ಹುಂಡಿ ಗ್ರಾಮದಲ್ಲಿ 2023/ 24 ನೇ ಸಾಲಿನ ವಾರ್ಷಿಕ ಪ್ರಗತಿ ನಿಧಿ ಗುರುತಿಸುವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಮಾನ್ಯ ಯೋಜನಾಧಿಕಾರಿಯವರಾದ ಶ್ರೀಯುತ ಹನುಮಂತಪ್ಪ ರವರು, ಪ್ರಗತಿ ಬಂದು ಹಾಗೂ ಸ್ವಸಹಾಯ ಸಂಘದ ಪಾಲುದಾರ ಬಂಧುಗಳು ತಮ್ಮ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿ ಕಾಣಬೇಕಾದರೆ , ವಾರ್ಷಿಕ ಪ್ರಗತಿ ನಿಧಿ ಗುರುತಿಸುವ ಕಾರ್ಯಕ್ರಮ, ತಮ್ಮ ಜೀವನದ ಆರ್ಥಿಕ ಪ್ರಗತಿಯ ದಿಕ್ಸೂಚಿ ಇದ್ದಂತೆ ಹಾಗೂ ಕೈಗನ್ನಡಿ ಇದ್ದಂತೆ ಎಂದು ಮಾಹಿತಿ ಮಾರ್ಗದರ್ಶನ ನೀಡಿದರು.
ಕೃಷಿ ಮೇಲ್ವಿಚಾರಕರಾದ ಕುಮಾರ್ ಅವರು ಮಾತನಾಡುತ್ತಾ, ಪ್ರಗತಿ ಬಂದು ಹಾಗೂ ಸ್ವಸಹಾಯ ಸಂಘದ ಸದಸ್ಯರು ತಮ್ಮ ವಾರ್ಷಿಕ ಗುರಿ ತಲುಪಬೇಕಾದರೆ ವಾರ್ಷಿಕ ಪ್ರಗತಿ ನಿಧಿ ಗುರುತಿಸುವ ಕಾರ್ಯಕ್ರಮ ಅತಿ ಮುಖ್ಯವಾದದ್ದು, ಇದರ ಸದುಪಯೋಗವನ್ನು ಪಾಲುದಾರಬಂಧುಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸವಿತಾ ರವರು, ಗ್ರಾಮದ ಮುಖಂಡರಾದ ಶ್ರೀಯುತ ನಾಗರಾಜ್ ಮೂರ್ತಿ ಅವರು, ಸೇವಾ ಪ್ರತಿನಿಧಿಯಾದ ಪ್ರಕಾಶ್ ರವರು ಸಂಘದ ಸದಸ್ಯರು ಭಾಗವಹಿಸಿದ್ದರು.