20 total views
ವಿಠಲ್ ಹೇರೂರರ ಪುತ್ಥಳಿ ಲೋಕಾರ್ಪಣೆಗೆ ಸಿಎಂ ಆಗಮನ, ಸಮಾಜದ ಸರ್ವರೂ ಪಾಲ್ಗೊಳ್ಳುವಂತೆ ಉಮೇಶ ಕೆ. ಮುದ್ನಾಳ ಮನವಿ
ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರೂ ಆದ, ಕೋಲಿ ಸಮಾಜದ ಹೋರಾಟಗಾರ ವಿಠಲ್ ಹೇರೂರರ ಪಂಚಲೋಹ ಪುತ್ಥಳಿ ಉದ್ಘಾಟನೆಯು ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದಲ್ಲಿ ಜ. 24 ರಂದು ಬೆಳಗ್ಗೆ 11.30ಕ್ಕೆ ಜರುಗಲಿದೆ. ಹೇರೂರು ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ನಿರ್ಮಿಸಲಾದ ಪಂಚಲೋಹ ಪುತ್ಥಳಿಯನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ಸಂಸದರು, ಸಮಾಜದ ರಾಷ್ಟ್ರದ, ಹಾಗೂ ರಾಜ್ಯ ಮುಖಂಡರು ಆಗಮಿಸುತ್ತಿದ್ದಾರೆ. ಅಂಬಿಗರ ಚೌಡಯ್ಯನ ಗುರುಪೀಠ ಆಗಲು ಹಾಗೂ ಸರ್ಕಾರದಿಂದ ಜಯಂತ್ಯೋತ್ಸವ ಮತ್ತು ಚೌಡಯ್ಯ ಅಭಿವೃದ್ಧಿ ನಿಗಮಗಳು ಆಗಲು ಕಾರಣೀಕರ್ತರು ಇದೆಲ್ಲದಕ್ಕೂ ಮಿಗಿಲಾಗಿ ಕೋಲಿ ಸಮಾಜವನ್ನು ಸಂಘಟಿಸಿದ ಕೀರ್ತಿ ಹೊಂದಿರುವ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ವಿಶೇಷವಾಗಿದೆ. ಇದೀಗ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಬೇಕೆಂಬ ಅವರ ಕನಸು ಶೀಘ್ರ ನನಸಾಗಲು ರಾಜ್ಯದ ಮುಖ್ಯಮಂತ್ರಿಗಳು ದೆಹಲಿಗೆ ನಿಯೋಗ ಕೊಂಡೊಯ್ದು ಬೇಡಿಕೆ ಈಡೇರಿಸಬೇಕಿದೆ. ಇಂತಹ ದೀಮಂತ ನಾಯಕನ ಪುತ್ಥಳಿ ಅನಾವರಣ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕಲ್ಯಾಣ ಕರ್ನಾಟಕದ ಸಮಾಜದ ಎಲ್ಲ ಬಾಂಧವರು, ನಿಜಶರಣ ಅಂಬಿಗರ ಚೌಡಯ್ಯ ಪದಾಧಿಕಾರಿಗಳು, ವಿಠಲ್ ಹೇರೂರು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮನವಿ ಮಾಡಿಕೊಂಡಿದ್ದಾರೆ. ವರದಿಗಾರರು -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್