25 total views
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ವತಿಯಿಂದ ಜನವರಿ ೩೧ ರಂದು ಡಾ.ಎಸ್.ಎಮ್.ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಬೀದಿ ವ್ಯಾಪಾರಿಗಳ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ ಹಾಗೂ ವಿವಿಧ ವಾರ್ಡಗಳಿಗೆ ನೂತನ ವಾರ್ಡ ಅಧ್ಯಕ್ಷರ ನೇಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು ೨೫ ವಾರ್ಡಗಳ ಅಧ್ಯಕ್ಷರನ್ನು ಹಾಗೂ ಜಿಲ್ಲಾ ಮಹಿಳಾ ಘಟಕ ಮತ್ತು ತಾಲೂಕ ಮಹಿಳಾ ಘಟಕಗಳ ಅಧ್ಯಕ್ಷರನ್ನು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ರಾಜ್ಯ ಅಧ್ಯಕ್ಷರಾದ ಜಗನ್ನಾಥ ಸೂರ್ಯವಂಶಿ ಅವರ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು. ಜನವರಿ ೩೧ ರಂದು ನಡೆಯುವ ಜಾಗೃತಿ ಸಮಾವೇಶದ ಎಲ್ಲಾ ಎಲ್ಲಾ ಸಿದ್ಧತೆಗಳನ್ನು ಕುರಿತು ಸಮರ್ಪಕವಾಗಿ ಚರ್ಚಿಸಲಾಯಿತು, ವಿವಿಧ ಮಠಾಧಿಶರು ವಿವಿಧ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯತ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ೧೦೦೧ ಬಡ ಬೀದಿ ವ್ಯಾಪಾರಿಗಳಿಗೆ ಸೀರೆಗಳನ್ನು ವಿತರಿಸಲಾಗುವುದು. ಮತ್ತು ೨೦೦ ಜನ ಬೀದಿ ವ್ಯಾಪಾರ ಬಡ ವ್ಯಾಪಾರಸ್ಥರಿಗೆ ಟಿಶರ್ಟಗಳನ್ನು ವಿತರಿಸಲಾಗುವುದು. ಅದೇ ರೀತಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಶೃದ್ದೆ ನಿಷ್ಟೆಯಿಂದ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೀಗಾಗಿ ಸಮಸ್ತ ನಮ್ಮೆಲ್ಲಾ ಬೀದಿ ವ್ಯಾಪಾರಿಗಳು ಚಾಚು ತಪ್ಪದೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧ್ಯಕ್ಷರಾದ ಅಮೃತ ಸಿರನೂರ ಹಾಗೂ ನಗರ ಅಧ್ಯಕ್ಷರಾದ ರವಿ ಒಂಟಿ ಅವರು ಸಭೆಯಲ್ಲಿ ಪ್ರಾಸ್ತವಿಕ ಹೇಳಿದರು.
ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಹಾಸ, ರಾಜ್ಯ ಉಪಾಧ್ಯಕ್ಷರಾದ ಶಾಹಿರ ಪಾಟೀಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸರ್ವಮಂಗಲ ದನ್ನಿ, ತಾಲೂಕ ಅಧ್ಯಕ್ಷರಾದ ಸುಮಾ ಕಾವಲದಾರ, ತಾಲೂಕ ಅಧ್ಯಕ್ಷರಾದ ಸುಶಾಂತ ಪೂಜಾರಿ, ಶಿವಾನಂದ ಚಿಕ್ಕಾಣಿ, ಸವಿತಾ ಜಿಂಗಾಡೆ ಹಾಗೂ ಇನ್ನು ನೂರಾರು ಸದಸ್ಯರು ಇದ್ದರು. ಸಂಘದ ರಾಜ್ಯ ಅಧ್ಯಕ್ಷರಾದ ಜಗನ್ನಾಥ ಸೂರ್ಯವಂಶಿ ಅವರು ಮಾತನಾಡಿ ನಿಮ್ಮೆಲ್ಲರ ಸಹಾಯ ಸಹಕಾರ ಸಂಘಟನೆಯ ಮೇಲೆ ಇರಲಿ ಮತ್ತು ನಿಮಗಾಗಿ ಬಹುದೊಡ್ಡ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು. ಪದಾಧಿಕಾರಿಗಳು ನೇಮಕ: ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಸರ್ವಮಂಗಲ ಧನ್ನಿ, ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲ ಕಾವಲದರ, ತಾಲೂಕ ಅಧ್ಯಕ್ಷ ಸುಶಾಂತ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಸಿದ್ದು ಕಲ್ಲೂರ, ಜೇವರ್ಗಿ ತಾ.ಮಹಿಳಾ ಘಟಕದ ಅಧ್ಯಕ್ಷೆ ಪ್ರಿಯ ಹೊಸಗೌಡ, ಉತ್ತರ ವಲಯ ಉಪಾಧ್ಯಕ್ಷ ವಿಶ್ವರಾಧ್ಯ ಹಿರೇಮಠ, ಉತ್ತರ ವಲಯ ಕಾರ್ಯದರ್ಶಿ ಶರಣು ಕಣ್ಣಿ, ವಾರ್ಡ ೩೧ ರ ಅಧ್ಯಕ್ಷ ಕಿರಣಕುಮಾರ, ವಾರ್ಡ ೨೧ ರ ಅಧ್ಯಕ್ಷ ಅಬ್ದುಲ ವಸಿಂ, ವಾರ್ಡ ೫೪ ರ ಅಧ್ಯಕ್ಷ ಅಂಬರೀಷ ನಾಗನಳ್ಳಿ, ನಗರ ಉಪಾಧ್ಯಕ್ಷ ಪ್ರಶಾಂತ ಬಾಚನಳ್ಳಿ, ಆಳಂದ ತಾಲೂಕ ಅಧ್ಯಕ್ಷ ಮಹಮ್ಮದ ರಫೀಕ್, ೩೬ ವಾರ್ಡ ಉಪಾಧ್ಯಕ್ಷ ಅರುಣಾ ಸಿಂಧೆ, ೨೪ ರ ವಾರ್ಡ ಅಧ್ಯಕ್ಷ ಇಸ್ಮಾಲ್ ಖಾನ, ವಾರ್ಡ ೧ ರ ಅಧ್ಯಕ್ಷ ಉಮೇಶ ಆಡೆ, ವಾರ್ಡ ೧೧ ರ ಅಧ್ಯಕ್ಷ ಅಕ್ಷಯಕುಮಾರ, ವಾರ್ಡ ೯ ರ ಅಧ್ಯಕ್ಷ ಉಲ್ಲಸ ಗಣಮುಖ, ವಾರ್ಡ ೨೬ ರ ಅಧ್ಯಕ್ಷ ಬಿರಲಿಂಗ ಪೂಜಾರಿ, ವಾರ್ಡ ೪೬ ರ ಅಧ್ಯಕ್ಷ ರವಿ ಕಾಂಬಳೆ, ವಾರ್ಡ ೧೫ ರ ಅಧ್ಯಕ್ಷ ಮಹಮ್ಮದ ಖಾಸಿಂ ಅಲಿ, ಮಹಿಳಾ ತಾಲೂಕ ಉಪಾಧ್ಯಕ್ಷೆ ಅಶ್ವಿನಿ, ವಾರ್ಡ ೩೫ ರ ಅಧ್ಯಕ್ಷ ರೋಹಿತ, ವಾರ್ಡ ೩೬ ರ ಅಧ್ಯಕ್ಷ ರೆಸ್ಟ ಮಹಮ್ಮದ ಇವರನ್ನು ನೇಮಕ ಮಾಡಲಾಯಿತು.
ವರದಿಗಾರರು – ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್