16 total views
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವು ನಾಲತವಾಡ ಪಟ್ಟಣದ ಸರಕಾರಿ ಹೇಣ್ಣುಮಕ್ಕಳ ಮಾದರಿಯ ಪ್ರಾಥವಿಕ ಶಾಲೆಯಲ್ಲಿ ನಡೆಸಲಾಯಿತು. ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪುರ ಶಿಶು ಅಭಿವೃದ್ಧಿ ಯೋಜನೆ ಮುದ್ದೇಬಿಹಾಳ ಇವರಿಂದ ಹಾಗೂ ಮಕ್ಕಳಿಂದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು. ಎಸ್ ಎಸ್ ಕವಡಿಮಟ್ಟಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಉದ್ಘಾಟಕರಾಗಿ ಬಂದಂತಹ ಎಸ್ ಎಸ್ ಬಾಗಲಕೋಟ್ ನಲತವಾಡ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳು .ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ.ಇಬ್ಬರ ಮಕ್ಕಳ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಎಸ್ ಎಸ್ ಕೋಡಿಮಟ್ಟಿ ಇವರಿಗೆ ಉದ್ಘಾಟಕರಾಗಿ ಆಗಮಿಸಿದಂತಹ ಎಸ್ ಎಸ್ ಬಾಗಲಕೋಟ.( ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು)ಇವರಿಗೆ. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ವಿ ವಿ ಎಸ್ ಮೇಟಿ ಮಹಿಳಾ ಮೇಲ್ವಿಚಾರಕರು ಇವರಿಗೆ ಗುರುರಿಂದ ಗುರುಮಾತೆಯರ ಬಳಗಕ್ಕೆ ಶಾಲಾ ಮಕ್ಕಳಿಂದ ಪುಷ್ಪ ಕೊಡುವ ಮುಖಾಂತರ ಎಲ್ಲರನ್ನೂ ಗೌರವಿಸಲಾಯಿತು. ಬೇಟಿ ಬಚಾವೋ ಬೇಟಿ ಪಡೋ ಕಾರ್ಯಕ್ರಮವನ್ನು ಏರ್ಪಡು ಮಾಡಿದಂತ ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡ ಪುಷ್ಪ ಕೊಡುವ ಮೂಲಕ ಅವರನ್ನು ಕೂಡ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿ ವಿ ಎಸ್ ಮೇಟಿ .ಮಹಿಳಾ ಮೇಲ್ವಿಚಾರಕರು. ಬಸವರಾಜ್ ಮಾದರ್ ಸಿ ಆರ್ ಪಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಎಸ್ ಎಸ್ ಕೌಡಿಮಟ್ಟಿ ಹಲವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಹಲವಾರು ಅಂಗನವಾಡಿಯ ಕಾರ್ಯಕರ್ತೆಯರು ಶಾಲೆಯ ಮಕ್ಕಳು ಶಿಕ್ಷಕರು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಪರಶು ಚಲವಾದಿ