10 total views
ಸಹಜ ವ್ಯಕ್ತಿತ್ವವೇ ಮೇಲು
ಸಹಜ ವ್ಯಕ್ತಿತ್ವವೇ ಮೇಲು
ಪ್ರತಿಷ್ಠೆ ಎಂದೂ ಗೆಲ್ಲಲ್ಲ..
ನಾಕ ಇದೇ ನರಕ ಇದೇ
ಅತಿರೇಕ ಎಂದೂ ಉಳಿಯೊಲ್ಲ..
ಕತ್ತಲೆಯ ಕರಿ ನೆರಳು
ನಾವು ಭೂಮಿಗೆ ಬಂದಾಗ..
ಬೆಳಕಿನ ಬಹುತೇಕ ನಿದ್ದೆಯೇ ನಮಗೆಲ್ಲ
ಅಡಿಗಡಿಗೂ ಕಲಿತು ಗೆದ್ದೊರೆ ನಾವೆಲ್ಲ..
ನಾ ಮೇಲೆ ನೀ ಮೇಲೆ
ಹುಸಿಯಲ್ಲವೆ ಬದುಕಿದು..
ಎಲ್ಲರಿಗದೇ ಭೂಮಿ ಅದೇ ಬಾನು
ಜಾತ್ರೆ ಮುಗಿದ ಮೇಲೆ ಎತ್ತಂಗಡಿ ನಾನು ನೀನು..
ಗೀತಾ ಬೇರಡ