16 total views
ಸಂತೋಷ ಒಂದು ಸಂಪತ್ತು
ಸಂತೋಷ ಒಂದು ಸಂಪತ್ತು
ಗಳಿಸಿಟ್ಟುಕೊಳ್ಳುವುದು ಸರಳವಲ್ಲ..
ಕಷ್ಟವೂ ಅಲ್ಲವೇನೊ ಯೋಚಿಸಿದೆ ಸ್ವಲ್ಪ ಹೊತ್ತು
ಮನಸೇಕೊ ನಕ್ಕಿತು ಏನಿದರ ಗತ್ತು..
ದಣಿದು ದುಡಿವಾತ ಕಷ್ಟದ ಜೀವನ ಎಂದೆನುತ
ಹಣದ ಬೆನ್ನಟ್ಟಿ ಬಸವಳಿದು ಹೇಳುವನಲ್ಲ
ಅದೃಷ್ಟವಿದ್ದವನಿಗದು ಸಂತೋಷ ಅವಗೇನು ಗೊತ್ತು
ಹಣವಂತ ಅಲಿಯುವುದು ಅರಸಿ ಆನಂದ ತುಸು ಹೊತ್ತು..
ಜಗವೆಂಬ ಜಾಲದಲ್ಲಿ ಮನಸೆಂಬ ಮಾಯೆಯದು
ಇರುವ ಸಂತೋಷವ ಬಿಟ್ಟು ಇಲ್ಲದಕೆ ಹಲುಬುವುದಲ್ಲ
ಅಂತರಾಳದಲಡಗಿರುವ ಆನಂದವ ಬದಿಗಿಟ್ಟು
ಅನ್ಯರ ನಗು ನೋಡಿ ಸಂತೋಷ ಎನುವುದಲ್ಲ ಇದೆಂಥ ಆಪತ್ತು..
ಗೀತಾ ಬೇರಡ.