14 total views
ಮೈಸೂರು:-ಮೈಸೂರು ನಗರದ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್. ಎಫ್.ಸಿ ಅನುದಾನದಲ್ಲಿ ವಾರ್ಡ ನಂ-2ರ ಮಂಚೇಗೌಡನ ಕೊಪ್ಪಲು ವಾಣಿವಿಲಾಸ ಉದ್ಯಾನವನ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದ ಪಕ್ಕದ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ 80 ಲಕ್ಷ ವೆಚ್ಚದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರೇಮ ಶಂಕರೇಗೌಡ ರವರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯನ್ನು ಶಾಸಕ ನಾಗೇಂದ್ರ ಅವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಮಹೇಶ್, ಭಾ.ಜ.ಪ. ಪ್ರಧಾನ ಕಾರ್ಯದರ್ಶಿ ಪುನೀತ್ , ರಮೇಶ್, ಮಾಜಿ ನಗರ ಪಾಲಿಕೆ ಸದಸ್ಯ , ಚಲುವೇಗೌಡ, ಸಿಂ.ಎಂ. ಕೃಷ್ಣ, ವೆಂಕಟೇಶ್, ಕೃಷ್ಣಪ್ಪ , ಸುವರ್ಣ, ಪುಷ್ಪ ವೆಂಕಟೇಶ್, ತನುಜಾ , ಮಹೇಶ್, ಸುಜಾತ, ಕುಮಾರ್, ಕೋಮಲ, ಮಂಜುಳ, ಅಭಿವೃದ್ಧಿ ಅಧಿಕಾರಿ ಮನುಗೌಡ, ಇಂಜಿನಿಯರುಗಳು ಹಾಜರಿದ್ದರು.