16 total views
ಮೈಸೂರು, ಯುವತಿ ವಿಚಾರದಲ್ಲಿ ಯುವಕರ ಗುಂಪು ಗಲಾಟೆ ಮಾಡಿಕೊಂಡ ಘಟನೆ ಮೈಸೂರಿನ ವಿಜಯನಗರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗಲಾಟೆಯಲ್ಲಿ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ.ಪ್ರಕರಣಕ್ಕೆ ಸಂಭಂಧಿಸಿದಂತೆ ಚಾಕುವಿನಿಂದ ಇರಿದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.ಘಟನೆಯಲ್ಲಿ ಅಶಿತ್(37)ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳು ಆಶಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಚಾಕುವಿನಿಂದ ಇರಿದ ಆರೋಪಿ ವಿನಾಯಕ ಹಾಗೂ ಇಬ್ಬರು ಸಹಚರರನ್ನ ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಚಿತ್ ಓರ್ವ ಯುವತಿಯನ್ನ ಪ್ರೀತಿಸುತ್ತಿದ್ದ.20 ದಿನಗಳ ಹಿಂದೆ ಆರೋಪಿ ವಿನಾಯಕ ಯುವತಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ.ಈ ಸಂಭಂಧ ಸುಚಿತ್ ಹಾಗೂ ವಿನಾಯಕ ನಡುವೆ ಗಲಾಟೆ ಆಗಿತ್ತು.ಈ ವಿಚಾರವನ್ನ ಸುಚಿತ್ ತನ್ನ ಸ್ನೇಹಿತ ಅಶಿತ್ ಗೆ ತಿಳಿಸಿದ್ದ.ಅಲ್ಲದೆ ಒಂದು ವಾರದ ಹಿಂದೆ ವಿನಾಯಕ್ ಗೆ ಹಲ್ಲೆ ನಡೆಸಿ ವಾರ್ನಿಂಗ್ ಕೊಟ್ಟಿದ್ದ.ಇಷ್ಟಾದ್ರೂ ಸುಮ್ಮನಾಗದ ವಿನಾಯಕ್ ನಿನ್ನೆ ಫೋನ್ ಮೂಲಕ ಸಂಪರ್ಕಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ ತನ್ನ ಮನೆಗೆ ಬರುವಂತೆ ಚಾಲೆಂಜ್ ಮಾಡಿದ್ದ.ವಿಜಯನಗರದಲ್ಲಿರುವ ವಿನಾಯಕ್ ಮನೆಗೆ ಆಶಿತ್ ಹೋಗಿದ್ದಾನೆ.ಈ ವೇಳೆ ಮಾತಿನ ಚಕಮಕಿ ನಡೆದಿದೆ.ಆಶಿತ್ ಗೆ ವಿನಾಯಕ್ ಹಾಗೂ ಇಬ್ಬರು ಸ್ನೇಹಿತರು ಚಾಕುವಿನಿಂದ ಇರಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಜಯನಗರ ಠಾಣೆ ಪೊಲೀಸರು ವಿನಾಯಕ್ ಹಾಗೂ ಇಬ್ಬರು ಸಹಚರರನ್ನ ಬಂಧಿಸಿದ್ದಾರೆ.ಈ ಸಂಭಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…