12 total views
ಹುಣಸೂರು ನಗರದ 22. ಮತ್ತು 23ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಅಲ್ಲಿನ ಯುವಕ ಮಿತ್ರರು ಮಾನ್ಯ ವಿಶ್ವನಾಥ್ ಸಾಹೇಬರ ಸುಪುತ್ರರಾದ ಅಮಿತ್ ವಿ ದೇವರಹಟ್ಟಿ ಅವರನ್ನು ಅಲ್ಲಿನ ಯುವಕರು ಮುಖಂಡರು ಎಲ್ಲರೂ ಸೇರಿ ತುಂಬು ಹೃದಯದಿಂದ ಬರಮಾಡಿಕೊಂಡು ಸನ್ಮಾನಿಸಿದರು ಈ ಸಂದರ್ಭದಲ್ಲಿ ಅಮಿತ್ ಅಣ್ಣ ಅವರು ಮಾತನಾಡಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಬೇಕು ಇದಕ್ಕೆ ಹುಣಸೂರಿನಲ್ಲಿ ಮಂಜುನಾಥ್ ಅವರು ಮತ್ತೆ ಶಾಸಕರಾಗಬೇಕು ಎಂದು ತಿಳಿಸಿದರು ಯಾವುದೇ ಅಸೆ ಆಮಿಷಕ್ಕೆ ಒಳಗಾಗದೆ ಮಂಜಣ್ಣ ಅವರನ್ನು ಬೆಂಬಲಿಸಿ ಅವರನ್ನು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವಂತೆ ಅವರ ಕೈ ಬಲಪಡಿಸಿ ಮತ್ತೆ ಶಾಸಕರಾಗಿ ಹುಣಸೂರಿನಿಂದ ಆಯ್ಕೆ ಮಾಡಿ ಎಂದು ಮುಖಂಡರಲ್ಲಿ ಮಹಿಳೆಯರಲ್ಲಿ ಯುವಕರಲ್ಲಿ ಮನವಿ ಮಾಡಿದರು ಈ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ್ ರವರು ಮಾಜಿ ನಗರಸಭೆ ಅಧ್ಯಕ್ಷರಾದ ಜಾಕೀರ್ ಲಾಯರ್ ಪುಟ್ಟರಾಜ್ ರವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಿರಿಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು