146 total views
ಜೆಡಿಎಸ್ ಪಂಚರತ್ನ ಸಮಾವೇಶ ಮುದ್ದೇಬಿಹಾಳ ಪಟ್ಟಣದ V.B.C. ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡ ಜೆಡಿಎಸ್ ಪಂಚರತ್ನ ಸಮಾವೇಶ ಜರುಗಿತು. ಬನಶಂಕರಿ ದೇವಸ್ಥಾನ ಮುಂಭಾಗದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ಅವರನ್ನು ಸ್ವಾಗತಿಸಲಾಯಿತು. ಪಂಚ ರತ್ನ ಸಮಾವೇಶವು ಬನಶಂಕರಿ ದೇವಸ್ಥಾನದಿಂದ ಮೆರೆ ಮೆರವಣಿಗೆ ಮೂಲಕ ಪ್ರಾರಂಭಗೊಂಡು ಶ್ರೀ ಬಸವೇಶ್ವರ ವೃತ್ತದ ಕಡೆಯಿಂದ ಸಿದ್ಧೇಶ್ವರ ವೇದಿಕೆಯ ಮುಂಬಾಗದ ಕಡೆ ಜರುಗಿತು. ರೈತ ಗೀತೆ ಯೊಂದಿಗೆ ಪ್ರಾರಂಭಗೊಂಡ ಸಮಾವೇಶವು ವೇದಿಕೆ ಮೇಲೆ ಇರುವಂತಹ ಗಣ್ಯಮಾನ್ಯರ ಹಾಗೂ ಕುಮಾರಣ್ಣನವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪಂಚರತ್ನ ಯೋಜನೆಯ ಕುರಿತು ಮಾತನಾಡಿದರು. ಪಂಚರತ್ನ ಸಮಾವೇಶದಲ್ಲಿ ಮುದ್ದೇಬಿಹಾಳ ಪಟ್ಟಣದ ಜೆಡಿಎಸ್ ಅಭ್ಯರ್ಥಿಯಾದ ಸಿ ಎಸ್ ಸೋಲಾಪುರ್. ಶ್ರೀಮತಿ ಮಂಗಳಾದೇವಿ ಬಿರಾದಾರ್ ಹಲವರು ಮಾತನಾಡಿದರು. ಹಲವಾರು ಯುವಕರು ಕುಮಾರಣ್ಣನವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡಿಗೊಂಡರು
ಪಂಚರತ್ನ ಕಾರ್ಯಕ್ರಮದಲ್ಲಿ ಹಳ್ಳಿ ಪಟ್ಟಣಗಳಿಂದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು.
ವರದಿ.ಪರಶು ಚಲವಾದಿ