20 total views
ಚೆನ್ನಾಗಿರಿ ತಾಲೂಕಿನ ದೇಗುರದಲ್ಲಿ ಗ್ರಾಮದ ವಾಸಿಯಾದ ಉಮಾಪತಿ ಎಂಬುವರ ಹತ್ತಿರ ಜಮೀನಿನ ಖಾತೆ ಮಾಡಿಸಿ ಕೊಡುವುದಾಗಿ ನಂಬಿಸಿ ಕಂದಾಯ ಅಧಿಕಾರಿಯದಂತಹ ಚೆಲುವರಾಜು ಎಂಬುವರು 20ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡಿದ್ದು ಖಾತೆಯನ್ನು ಮಾಡಲಾಗದೆ ಹಣವನ್ನು ವಾಪಸ್ ಕೊಡೋದೇ ಸತಾಯಿಸುತ್ತಿದ್ದಾರೆ. ಖಾತೆ ಮಾಡಿಸಿ ಕೊಡುತ್ತಾರೆ ಎಂದು ನಂಬಿ ಉಮಾಪತಿಯವರು ಬಡ್ಡಿಯಂತೆ ಹಣವನ್ನು ತಂದು ಚೆಲುವರಾಜು ಅವರ ಕೈಕೊಟ್ಟಿದ್ದಾರೆ. ಹಣವನ್ನು ಕೇಳಿದ್ದಕ್ಕೆ ಇವತ್ತು ನಾಳೆ ಅಂತ ಸಬೂಬ್ ಹೇಳುತ್ತಿದ್ದಾರೆ. ಇಂಥ ಹಗಲು ದರೋಡೆಕೋರರನ್ನು ಮೇಲಾಧಿಕಾರಿ ವರ್ಗದವರು ಮೂಕ ಪ್ರೇಕ್ಷಕರಂತಿದ್ದಾರೆ. ತಾಲೂಕ್ ಆಫೀಸ್ನಲ್ಲಿ ಇನ್ನೂ ಎಂತೆಂಥ ದರೋಡೆಕೋರರಿದ್ದಾರೆ. ತಾಲೂಕು ದಂಡಾಧಿಕಾರಿಯವರು ಇಂಥ ಅಧಿಕಾರಿಗಳನ್ನು ಅಮಾನತು ಮಾಡಿ ಬಡ ಉಮಾಪತಿ ಅಂತಹ ಜನಸಾಮಾನ್ಯರಿಗೆ ನ್ಯಾಯ ಒದಗಿಸಿ ಭ್ರಷ್ಟ ಆಡಳಿತವನ್ನು ತೊಲಗಿಸಿ ನ್ಯಾಯ ಸಮ್ಮತ ಆಡಳಿತವನ್ನು ನೀಡಬೇಕು ಶ್ರೀ ಸಾಮಾನ್ಯರ ಧ್ವನಿ.