13 total views
ಕಾಳಗಿ :ತಾಲೂಕಿನ ಕೋರವಾರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಆಯೋಜಿಸಿದ .ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ 192ನೇ ಜನ್ಮದಿನದ ಆಚರಣೆಗೆ ಜ್ಯೋತಿ ಬೇಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಮಾಜಿ ಜಿಲ್ಲಾಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಬಸವರಾಜ ಬೆಣ್ಣೂರ ರವರು ಉದ್ಘಾಟಸಿದರು. ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿ ಪೂಜೆ ಸಲ್ಲಿಸಿದರು. ಸಾವಿತ್ರಬಾಯಿ ಪುಲೆ ರವರು ಮತ್ತು ಅಂಬೇಡ್ಕರ್ ರವರು ಹೆಣ್ಣುಮಕ್ಕಳಿಗಾಗಿ ಅಂದು ದುಡಿದ ಋಣದಲ್ಲಿ ಇಂದಿನ ಹೆಣ್ಣು ಮಕ್ಕಳಲ್ಲಿ ಅಭಿವೃದ್ಧಿ ಕಾಣುತ್ತಿದೇವೆ ಸಾವಿತ್ರಿ ಬಾಯಿ ಪುಲೆ ರವರ ಜೀವನವನ್ನೆ ಇಂದಿನ ಹೆಣ್ಣು ಮಕ್ಕಳು ಆದರ್ಶವನ್ನಾಗಿಸಿಕೊಂಡು ಜೀವನ ನಡೆಸಿದರೆ ನಮ್ಮ ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತಷ್ಟು ಇಮ್ಮಡಿಯಾಗುತ್ತದೆ ಹಾಗೂ ಅವರ ಜೀವನವೇ ಇಂದಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಪರಮೇಶ್ವರ ಕಟ್ಟಿಮನಿ ರವರು ತಿಳಿಸಿದರು ಈ ಸಂದರ್ಭದಲ್ಲಿ . ಜೈಕರವೇ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಸಚಿನ ಪರತಾಬಾದ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಮಾಳಗಿ, ಜೈಕರೆ ತಾಲೂಕ ಅಧ್ಯಕ್ಷ ಪರಮೇಶ್ವರ, ಮಲ್ಲಿನಾಥ ಪಾಟೀಲ್, ಅಶೋಕ ಮಿಸ್ಕಿನ್, ಬಸಚರಾಜ ಜಮಾದಾರ ರೇವಣಸಿದ್ದ ಪೂಜಾರಿ ಸೇರಿದಂತೆ ಹಲವರು ಇದ್ದರು