28 total views
ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿ, ಮಾಡಾಳು ಗ್ರಾಮದಲ್ಲಿ ದಿನಾಂಕ -07-01-2023ರರ ಶನಿವಾರ ಸು,11:00ಗಂಟೆಯ ಸಮಯದಂದು ಕನಸಿನ ಭಾರತ & TV23 ಪತ್ರಕರ್ತರಾದ ಮಾಡಾಳ್ ರವಿಯ ಮೇಲೆ ಮಾಡಾಳು ಗ್ರಾಮದ ಮೂವರಿಂದ ಗೂOಡಾವರ್ತನೆ, ಮಾರಣಾOತಿಕ ಹಲ್ಲೆಯಿಂದಾಗಿ ಎಡಗಾಲು ಮುರಿದಿದೆ. ಮಾಡಾಳು ಗ್ರಾಮದಲ್ಲಿರುವ ನಿರಂಜನ ಪೀಠ, ವಿರಕ್ತಮಠದ ಪೀಠಾಧ್ಯಕ್ಷರಾದ ಶ್ರೀ, ಮ ನಿ ಪ್ರ ಸ್ವ ಶ್ರೀ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿಯವರು ಶ್ರೀ ಲಿಂ, ಚಂದ್ರಶೇಖರ ಮಹಾ ಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದ ನಿಮಿತ್ತವಾಗಿ ಶ್ರೀ ರುದ್ರಮುನಿಸ್ವಾಮೀಜಿಯವರ ನಿರ್ದೇಶನದಂತೆ 3 ಜನರು,ಸರ್ವೇ ನಂಬರ್ 05 ರ ಸರ್ಕಾರಿ ಕಟ್ಟೆಯನ್ನು ತಹಶೀಲ್ದಾರ್ ರವರ ಆದೇಶದ ಮೇರೆಗೆ ತೆಗೆದಿದ್ದ ಟ್ರಂಚ್ ನ್ನು ಮುಚ್ಚಿಸುತ್ತಿದ್ದದ್ದನ್ನು ಕಂಡ ಕನಸಿನ ಭಾರತ ವರದಿಗಾರರಾದ ಮಾಡಾಳ್ ರವಿಯು ಟ್ರಂಚ್ ಮುಚ್ಚುತ್ತಿರುವುದನ್ನು jcb ಆಪರೇಟರ್ ಮಂಜುರವರನ್ನು ಪ್ರಶ್ನೆ ಮಾಡಿದ್ದಕ್ಕೆ, jcb ಒಳಗಡೆ ಕುಳಿತಿದ್ದ ಮಾಡಾಳಿನವರಾದ ಶಿವಶಂಕರ್, ಕಡೂರ್ ಡಿಪೋದ ksrtc ಡ್ರೈವರ್, ಮಲ್ಲಿಕಾರ್ಜುನ್ (ಹಳ್ಳಿಸಿದ್ದನ), & ಯೋಗೀಶ್ (ಯಾಗಿ ) ಈ ಮೂವರುಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ,ಕೊಲೆಯತ್ನ
ಮಾರಣಾOತಿಕ ಹಲ್ಲೆ ನಡೆಸಿದ್ದಾರೆ,
ಇದರಿಂದಾಗಿ ಪತ್ರಕರ್ತರಾದ ಮಾಡಾಳ್ ರವಿಯ ಎಡಗಾಲಿನ ಮೂಳೆ ಮುರಿದಿದ್ದು ತಕ್ಷಣ ಅರಸೀಕೆರೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ MLC ಕೇಸ್ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ,ನಂತರ ದಿನಾಂಕ -08-01-2023 ರಂದು ಬಾಣಾವರ ಪೊಲೀಸ್ ಠಾಣೆಯಲ್ಲಿ ಮಾರಣಾOತಿಕ ಹಲ್ಲೆ ಮಾಡಿದ ಈ 3 ಜನರ ಮೇಲೆ ದೂರನ್ನು ನೀಡಲಾಗಿದೆ.ಮತ್ತು ಈ ಸರ್ಕಾರಿ ಕಟ್ಟೆಯನ್ನು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ, ವಿಚಾರಣೆ ನಡೆದು,ಈ ಕಟ್ಟೆಯನ್ನು ಸಂರಕ್ಷಿಸಲು ಲೋಕಾಯುಕ್ತ ನ್ಯಾಯಾಲಯವು ಆದೇಶ ಮಾಡಿ,1 ಪ್ರತಿಯನ್ನು ಮಾನ್ಯ, ಜಿಲ್ಲಾಧಿಕಾರಿಗಳಿಗೆ & ಗ್ರಾಮ ಪಂಚಾಯಿತಿ ಪಿ ಡಿ ಒ ರವರಿಗೆ ಕಳುಹಿಸಿದ್ದರೂ ಕೂಡ ಈ ಇಬ್ಬರೂ ಅಧಿಕಾರಿಗಳು ಲೋಕಾಯುಕ್ತ ನ್ಯಾಯಾಲಯದ ಆದೇಶವನ್ನು ಪಾಲಿಸದೆ ಕರ್ತವ್ಯ ಲೋಪ ಎಸಗಿದ್ದಾರೆ, ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ನ್ಯಾಯಾಲಯವು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, & ಮಾರಣಾOತಿಕ ಹಲ್ಲೆಗೊಳಗಾದ ಪತ್ರಕರ್ತರಾದ ಮಾಡಾಳ್ ರವಿಗೆ ಪರಿಹಾರವನ್ನು ಕೊಡಿಸಬೇಕು & ಸರ್ಕಾರಿ ಕಟ್ಟೆಯಲ್ಲಿ ಕಾರ್ಯಕ್ರಮ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ, ಟ್ರಂಚ್ ಮುಚ್ಚುವುದಕ್ಕೆ ನಿರ್ದೇಶನ ನೀಡಿದ ಕಾರ್ಯಕ್ರಮ ಆಯೋಜಕರ ಮೇಲೆ,ಮಾರಣಾ0ತಿಕ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.ಏಕೆಂದರೆ, ಇಂದು ಪತ್ರಕರ್ತರನ್ನೇ ಬಿಡದವರು ಮುಂದಿನ ದಿನಗಳಲ್ಲಿ ಸಾಮಾನ್ಯರನ್ನು, ಮಧ್ಯಮವರ್ಗದವರನ್ನು ಬಿಡುತ್ತಾರೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಬೆಂಬಿಡದೆ ಕಾಡುತ್ತಿದೆ.ಈ ದುರ್ಗಟನೆ ನಡೆದ ನಂತರದಲ್ಲಿ ಶ್ರೀ ಮಠದ ಕಾರ್ಯಕ್ರಮ ಈ ಕಟ್ಟೆಯ ಜಾಗದಲ್ಲಿ ಮುಗಿದ ಮೇಲೆ ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ಮಾಡಾಳು ಗ್ರಾಮ ಪಂಚಾಯಿತಿಯ ಪಿ ಡಿ ಒ ರವರು ಬೋರ್ಡ್ ನ್ನು ಬರೆಸಿ ಹಾಕಿದ್ದಾರೆ. ಮೊದಲೇ ಈ ಕೆಲಸ ಮಾಡಿದ್ದಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ,, ಆದ್ದರಿಂದ ಈ ಘಟನೆಗೆ ಇವರು ಕೂಡ ಕಾರಣರಿದ್ದಾರೆ, ಇವರ ಮೇಲೂ ಕಾನೂನು ಕ್ರಮ ಆಗಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು,
ವರದಿ :ಮಾಡಾಳ್ ರವಿ..