177 total views
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022-23 ನೇ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ’ ವರ್ಷ ಎಂದು ಘೋಷಿಸಿದ್ದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.ಪ್ರಯುಕ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ “ಕಲಿಕಾ ಹಬ್ಬ’’ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬೀಡಿ, ತಾಲೂಕು ಖಾನಾಪೂರ ಇಲ್ಲಿ ದಿನಾಂಕ 17.1.2023 ರಿಂದ ದಿನಾಂಕ 18-01-2023 ರ ವರೆಗೆ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀಮತಿ ರಾಜೇಶ್ವರಿ ಕುಡಚಿ ಮೇಡಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಕಲಿಕಾ ಪ್ರಗತಿಯ ನಿಟ್ಟಿನಲ್ಲಿ ಕಲಿಕಾ ಹಬ್ಬವು ಅತ್ಯಂತ ಸಹಾಯಕಾರಿಯಾಗಿದೆ, ಕಲಿಕಾ ಹಬ್ಬದ ಮೂಲಕ ಮಗು ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಸಾಧ್ಯವಾಗುತ್ತದೆ,ಇಂತಹ ಸಡಗರದ ಕಲಿಕಾ ಹಬ್ಬ ಆಚರಣೆ ಅರ್ಥಪೂರ್ಣವಾಗಿದ್ದು,ಮುಂಬರುವ ಪ್ರತಿ ಶನಿವಾರದಂದು ಪ್ರತಿ ಶಾಲೆಯಲ್ಲಿ ಈ ಕಲಿಕಾ ಹಬ್ಬವನ್ನು ಸಂಭ್ರಮದ ಶನಿವಾರ ಎಂದು ಆಚರಿಸಲು ತಿಳಿಸಿದರು.ಕಲಿಕಾ ಹಬ್ಬದ ನಿಮಿತ್ಯ ಊರಿನ ಬೀದಿಗಳಲ್ಲಿ ಕಲಿಕಾ ಹಬ್ಬದ ಮಹತ್ವವನ್ನು ಸಾರುವ ರೂಪಕಗಳೊಂದಿಗೆ ಅರ್ಥಪೂರ್ಣ ಪ್ರಭಾತಪೇರಿಯನ್ನು ಹಮ್ಮಿಕೊಳ್ಳಲಾಗಿತ್ತು. ಸತತ ಎರಡು ದಿನಗಳ ಕಾಲ ಕಲಿಕಾ ಹಬ್ಬದ ಚಟುವಟಿಕೆಗಳಾದ ಆಡು-ಹಾಡು,ಕಾಗದ-ಕತ್ತರಿ,ಊರು ತಿಳಿಯೋಣ,ಮಾಡು-ಹಾಡು ಎಂಬ ಗುಂಪುಗಳಲ್ಲಿ ಕೌಶಲ್ಯಾಧಾರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಬೀಡಿ ಕ್ಲಸ್ಟರ್ ದ ವಿವಿಧ ಶಾಲೆಗಳಿಂದ 120 ಕ್ಕೂ ಹೆಚ್ಚು ಮಕ್ಕಳು ಈ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಗ್ರಾಮ ಪಂಚಾಯಿತಿ ಬೀಡಿ,ಶಾಲಾ ಎಸ್ ಡಿ ಎಮ್ ಸಿ ಮತ್ತು ಸಹಶಿಕ್ಷಕರು ದೇಣಿಗೆಯಾಗಿ ನೀಡಿದರು.ಕಾರ್ಯಕ್ರಮದ ಪೆಂಡಾಲ್ ವ್ಯವಸ್ಥೆಯನ್ನು ಶ್ರೀ ಅಬೂತಲೆ ಬೈಲಹೊಂಗಲ ಇವರು ಮಾಡಿಕೊಟ್ಟರು.ಹೀಗೆ ಗ್ರಾಮಸ್ಥರು ಹತ್ತು ಹಲವಾರು ಜವಾಬ್ದಾರಿಗಳನ್ನು ಹೊತ್ತುಕೊಂಡು ಕಲಿಕಾ ಹಬ್ಬ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿಸಲು ಸಹಕರಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಜವಳಿ ಮತ್ತು ಸರ್ವಸದಸ್ಯರು,ಬೀಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಶಾಂತಾ ಕುಂದೇಕರ, ಉಪಾಧ್ಯಕ್ಷರಾದ ಅಬೂತಲಿ ಬೈಲಹೊಂಗಲ,ಸದಸ್ಯರಾದ ಸುನೀಲ ಕದಂ, ಲೋಹಿತ ಕಡೆಮನಿ, ಜಯವಂತ ಕಾಳಿ, ಸಂತೋಷ ಕಾಶೀಲಕರ, ರೇಣುಕಾ ಬಾಳೆಕುಂದ್ರಿ, ದೀಪಾ ಪಾಟೀಲ್, ಅರುಣ ಮಲಬನ್ನವರ, ಫ್ರಾನ್ಸಿಸ್ ಸೇರಾವ, ಬಸೀರಾ ಶೀಗಿಹಳ್ಳಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಎ ಆರ್ ಅಂಬಿಗಿ, ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀ ಮಹೇಶ ಪರೀಟ, ಇಸಿಓ ಲೋಕಾಪುರೆ, ಶಂಕರ್ ಕಮ್ಮಾರ್ , ಎಂ ಎಸ್ ಬಿರ್ಜಿ, ಸಿಆರ್‌ಪಿ ಅಶೋಕ್ ಹೊಂಗಲ, ಪ್ರಧಾನ ಗುರುಗಳಾದ ಪಡೆಣ್ಣವರ, ಶಿಕ್ಷಕರಾದ ಎಸ್ ಜಿ ಜಾಧವ, ರವಿ ಜ್ಯೋತಿ,ವ್ಹಿ ಆರ್ ಫಂಡಿ,ಎಸ್ ಕೆ ದೇಸೂರಕರ. ಶಿವಕುಮಾರ್, ದೇವಡಿ, ದೇವಲ್ಲಿ, ಸುಪ್ರಿಯಾ, ರೇಣುಕಾ ಹಾಗೂ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಪಾರ ಪ್ರಮಾಣದ ಬೀಡಿ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.ಎಲ್ಲರೂ ಮಕ್ಕಳು ನಾವೀನ್ಯಯುತವಾಗಿ ಕಲಿಯುವುದನ್ನು ಕಣ್ತುಂಬಿ ಕೊಂಡರು. ಒಟ್ಟಿನಲ್ಲಿ ಕಲಿಕಾ ಹಬ್ಬವು ಯಶಸ್ವಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು.
ವರದಿ: ಮುತ್ತು ದೇವನಪ್ಪಗೊಳ