18 total views
ಜೇವರ್ಗಿ ತಾಲೂಕಿನ ದತ್ತ ನಗರದ ಬಡಾವಣೆಯ ಜ್ಞಾನಜೋತಿ ಶಿಕ್ಷಣ ಸಂಸ್ಥೆಯ(ರಿ )ಯ ಮಕ್ಕಳಿಗೆ ಕರಾಟೆ ತರಬೇತಿ ಕಾರ್ಯಕ್ರಮ ದಿನಾಂಕ18-1-2023ರಂದು ಹಮ್ಮಿಕೊಳ್ಳಲಾಗಿತ್ತು ಇಲ್ಲಿನ ಮಕ್ಕಳಿಗೆ ತರಬೇತಿ ನೀಡಲು ಕರಾಟೆ ಬೋಧಕರಾದ ವೀರೇಶ್ ರೆವೆಲ್ ಹಾಗೂ ಜೇವರಗಿ ತಾಲೂಕ ಜೇನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಸಾಮಾಜಿಕ ಜಾಲತಾಣ ಅಧ್ಯಕ್ಷರು ಶಾಂತಪ್ಪ ಎಂ ದೇವರಮನಿ ಜ್ಞಾನಜೋತಿ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಪ್ರತಿಕೂಲ ಸನ್ನಿವೇಶದಲ್ಲಿ ಅಪಾಯಕಾರಕ ಸನ್ನಿವೇಶದಲ್ಲಿ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡುವುದರ ಮುಖಾಂತರ ಮಕ್ಕಳಿಂದಲೂ ಪ್ರಾಯೋಗಿಕವಾಗಿ ತರಬೇತಿ ನೀಡಿದರು ಈ ಸಂದರ್ಭದಲ್ಲಿ ತರಬೇತಿ ನೀಡಲು ಆಗಮಿಸಿದ ಕರಾಟೆ ಶಿಕ್ಷಕರಿಗೆ ಚಂದ್ರಶೇಖರ್ ಪಾಟೀಲ್ ಸರ್ ಸಂಸ್ಥೆಯ ಕಾರ್ಯದರ್ಶಿಗಳು ಶಾಲು ಹೊದಿಸಿ ಸನ್ಮಾನಿಸಿದರು ಎಂದು ಜೇವರ್ಗಿ ತಾಲೂಕಿನ ಜನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯ ಸಲಹೆಗಾರರಾದ ಸಿದ್ದಲಿಂಗ ಎನ್ನ ಮಾಹೂರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂಥ ವಿನೂತನ ವಿಭಿನ್ನ ಕಾರ್ಯಕ್ರಮಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ ಎಂದು ಜೇವರ್ಗಿ ತಾಲೂಕಿನ ಜನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರು ಅಮರನಾಥ್ ಮಧುರಕರ ಅಭಿಪ್ರಾಯ ಪಟ್ಟಿದ್ದಾರೆ. ಹಾಗೂ ಈ ಕಾರ್ಯಕ್ರಮದ ಕುರಿತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪಾಟೀಲ್ ಸರ ಅವರು ಮಾತನಾಡಿದರು ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ಲೈಂಗಿಕ ಶೋಷಣೆಗಳು ಹೆಚ್ಚಾಗಿ ನಡಿಯುತ್ತಿದ್ದು ಪ್ರತಿಕೂಲ ಸನ್ನಿವೇಶದಲ್ಲಿ ಅಪಾಯಕಾರಕ ಸನ್ನಿವೇಶದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಯುವುದು ಸೂಕ್ತವಾಗಿದೆ ಎಂದು ಈ ಸಂದರ್ಭದಲ್ಲಿ ಮಕ್ಕಳಿಗೆ ಈ ಕಿವಿಮಾತು ಹೇಳಿದರು ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಜನ್ನ್ ಶಿಟೋರಿಯೊ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಜಟ್ಟಪ್ಪ ಎಸ್ ಪೂಜಾರಿ ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಹಾಗೂ ಈ ಕರಾಟೆ ತರಬೇತಿ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಆಗಮಿಸಿ ಈ ಕಾರ್ಯಕ್ರಮದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಸೂಕ್ತವಾಗಿ ತರಬೇತಿ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು ಈ ಕಾರ್ಯಕ್ರಮದಲ್ಲಿ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯ ಗುರುಗಳಾದ ಶ್ರೀಮತಿ ಗೌರಮ್ಮ ಅವರು ಭಾಗವಹಿಸಿದ್ದರು ಹಾಗೂ ಸಹ ಶಿಕ್ಷಕರಾದ ದೊಡ್ಡಪ್ಪ ಕೊಣ್ಣಿನ್ನ್ ಹಾಗೂ ಸಾಹೇಬ್ ಗೌಡ ಮುರಡಿ. ಶ್ರೀಮತಿ ಭುವನೇಶ್ವರಿ ಶ್ರೀಮತಿ ಲಕ್ಷ್ಮಿ ಶ್ರೀಮತಿ ಸಿದ್ದಮ್ಮ ಹಾಗೂ ರಾಜಶ್ರೀ ದೀಪಾ ಪಾಟೀಲ್ ನುರುಜಾ ಬೇಗಂ ಹಾಗೂ ಸಮೀರ್ ಪಟೇಲ್ ಕಾಚೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು