18 total views
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಟ್ಟಿ ಸಂಗಾವಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ಕಾರ್ಯಕ್ರಮ.
ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎರಡು ದಿನದ ತರಬೇತಿ ಕಾರ್ಯಕ್ರಮದಲ್ಲಿ ಜೇನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಜೇವರ್ಗಿಯ ಕಾರ್ಯಕಾರಿ ಸಮಿತಿಯ ಸಲಹೆಗಾರರಾದ ಸಿದ್ದಲಿಂಗ ಎನ್ನ್ ಮಾಹೂರ ಹಾಗೂ ವಿರೇಶ ರೇವಲ್ ಮಕ್ಕಳಿಗೆ ತುಂಬಾ ಸರಳವಾಗಿ ಪ್ರಾಯೋಗಿಕವಾಗಿ ಕಲಿಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ವಿಜಯಲಕ್ಷ್ಮಿ ದೇಸಾಯಿ ಹಾಗೂ ಶ್ರೀಮತಿ ಜ್ಯೋತಿ ವಿಕೆ ಹಾಗೂ ಸೋಮನಾಥ್ ಸಹಶಿಕ್ಷಕರು ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶ್ರೀಮತಿ ವಂದನ ಸಹ ಶಿಕ್ಷಕರು ಹಾಗೂ ಶ್ರೀಮತಿ ಅನಿತಾ ಹಾಗೂ ಸರಸ್ವತಿ ಮೇಡಂ ಶ್ರೀನಿವಾಸ್ (ಎಲ್ ಎನ್ ಎಫ್ ) ಶ್ರೀಮಂತ ತಳವಾರ್ ಈ ಕಾರ್ಯಕ್ರಮವು ಸಿಡಿಪಿಓ ಜೇವರ್ಗಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು ಎಂದು ಜೇವರ್ಗಿ ತಾಲೂಕ ಜನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಜಟ್ಟಪ್ಪ ಎಸ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ