12 total views
ಮೈಸೂರು:-ನಾನು ಎಂದೆಂದಿಗೂ ಡಾ.ರಾಜ್‌ಕುಮಾರ್ ಅವರ ಕುಟುಂಬಕ್ಕೆ ಜೊತೆಯಾಗಿ ನಿಲ್ಲುತ್ತೇನೆ. ಶಕ್ತಿಧಾಮಕ್ಕೆ ಸಂಬಂಧಿಸಿದಂತೆ ಅವರು ಯಾವ ಸಹಾಯ ಕೇಳಿದರೂ ಮಾಡಲು ನಾನು ಸಿದ್ಧ ಎಂದು ತಮಿಳು ನಟ ವಿಶಾಲ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಕ್ತಿಧಾಮದ ಮಕ್ಕಳಿಗೆ ಉಪಯೋಗವಾಗಲೆಂದು ಸಹಾಯ ಮಾಡಲು ಒಪ್ಪಿಕೊಂಡಿದ್ದೆ.ಈಗಲೂ ಮಕ್ಕಳಿಗೆ ಶಿಕ್ಷಣ ನೀಡಲು, ಪುನೀತ್ ರಾಜ್‌ಕು ಮಾರ್ ಅವರ ಆಶಯಗಳನ್ನು ನೆರವೇರಿಸಲು ನಾನು ಬದ್ಧನಾಗಿದ್ದೇನೆ. ರಾಜ್‌ಕುಮಾರ್ ಅವರ ಕುಟುಂಬದವರು ಯಾವ ಸಮಯದಲ್ಲಿ ಯಾವ ಸಹಕಾರ ಕೇಳಿದರೂ ನೀಡಲು ನಾನು ಸಿದ್ಧ ಎಂದರು.
ಇತ್ತೀಚೆಗಷ್ಟೇ ನಟ ಪ್ರಕಾಶ್ ರಾಜ್ ಅವರು ಅಪ್ಪು ಅವರ ಹೆಸರಿನಲ್ಲಿ ಆಂಬ್ಯುಲೆನ್ಸ್ ದಾನ ನೀಡಿದ್ದರ ಸಂಬಂಧ ಮಾತನಾಡಿದ ಅವರು, ಪುನೀತ್ ಅವರ ಹೆಸರಿನಲ್ಲಿ ಪ್ರಕಾಶ್ ರಾಜ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಅವರು ನನಗೂ ಕರೆ ಮಾಡಿದ್ದರು. ಆಂಬ್ಯುಲೆನ್ಸ್ ಸೇವೆಗೆ ನನ್ನ ಕೈಲಾದ ಸಹಾಯವನ್ನು ನಾನು ಮಾಡುತ್ತೇನೆ ಎಂದು ಅವರಿಗೆ ತಿಳಿಸಿದ್ದೇನೆ. ನಟರಾಗಿ ನಾವು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರಬೇಕು. ಅದು ನಮ್ಮ ಆದ್ಯ ಕರ್ತವ್ಯ ಎಂದರು.