14 total views
ಜೆನ್ನ ಶಿಟೋ-ರೀಯೊ ಕರಾಟೆ ಸ್ಕೋಲ್ ಇಂಡಿಯಾ ಕಲ್ಯಾಣ ಕರ್ನಾಟಕ ಕಲ್ಬುರ್ಗಿ ಅಸೋಸಿಯೇಷನ ವತಿಯಿಂದ ಹಾಗೂ ಅಖಿಲ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ದಶರಥ ದುಮ್ಮನಸುರ ಗುರುಗಳ ಆದೇಶದ ಮೇರೆಗೆ
ಸೇಡಂ ತಾಲೂಕಿನಲ್ಲಿ ಕರಾಟೆ ಬೆಲ್ಟ್ ಎಕ್ಸಾಮ್ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಸೇಡಂ ತಾಲೂಕಿನ ಅಧ್ಯಕ್ಷರಾದ್ ಶ್ರೀ ಹನುಮಂತ್ ಭರತ್ನೂರ್ ಅವರು ಹೆಚ್ ಪಿ ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಹಾಗು ಎ.ಬಿ.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷೆಯನ್ನು ತೆಗೆದುಕೊಂಡರು ಈ ಸಂದರ್ಭದಲ್ಲಿ ಬೆಲ್ಟ್ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಷಣ್ಮುಖ ಪತ್ತಾರ್ ಅವರು ಕರಾಟೆ ಪಟುಗಳಿಗೆ ಬೆಲ್ಟ್ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಮಾತನಾಡಿದರು ಕರಾಟೆ ಕೌಶಲ್ಯ ಕಲೆಯು ಪ್ರತಿಯೊಬ್ಬರು ಕಲಿಯುವಂತ ಕಲೆಯಾಗಿದೆ ಬಹು ಮುಖ್ಯವಾಗಿ ಮಹಿಳೆಯರು ಈ ಕಲೆಯನ್ನು ಕಲೆಯಬೇಕು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಕರಾಟೆ ಶಿಕ್ಷಕರಾದ ಸೆನ್ಸೆಯಿ : ಅನಿಲಕುಮಾರ ಡಿ. ಹಳಿಮನಿ, ಬಸವರಾಜ ಕಾಳಗಿಕರ್, ಅನಿಲಕುಮಾರ ಕುದುರೆನ್, ಶಶಿಕುಮಾರ ರಜಪೂತ ಇದ್ದರು. ಎಂದು ಸೇಡಂ ತಾಲೂಕಿನ ಕರಾಟೆ ಪರಿಣಿತರಾದ ಸೆನ್ಸಾಯಿ ಸಾಯಬಣ್ಣ ಹಳ್ಳೋಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ