14 total views
ಕಾಳಗಿ ಸಂಗೀತವನ್ನಾಲಿಸುವುದರಿಂದ ಮನುಷ್ಯನ ಮನಸ್ಸು ನೆಮ್ಮದಿ ಮತ್ತು ಸಂತೋಷದ ಬದುಕಿನತ್ತ ನಡೆಸುತ್ತದೆ ಎಂದು ಸುಗೂರ(ಕೆ)ಗ್ರಾಮದ ಸಂಸ್ಥಾನ ಹಿರೇಮಠದ ಪೂಜ್ಯರಾದ ಷ.ಬ್ರ.ಡಾ.ಚನ್ನರುದ್ರಮುನಿ ಶಿವಾಚಾರ್ಯರು ತಿಳಿಸಿದರು. ತಾಲೂಕಿನ ಸುಗೂರ(ಕೆ) ಗ್ರಾಮದಲ್ಲಿ ಶ್ರೀ ದೇವರ ದಾಸಿಮಯ್ಯ ಸಂಗೀತ ಪಾಠ ಶಾಲೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕಲಬುರಗಿಯವರ ಸಂಯುಕ್ತಾಶ್ರಯದಲ್ಲಿ ರವಿವಾರ ಶ್ರೀಬನಶಂಕರಿ ದೇವಸ್ಥಾನ ಆವರಣದಲ್ಲಿ ಸಂಜೆ ಏರ್ಪಡಿಸಲಾಗಿರುವ “ಜಾನಪದ ಸಂಗೀತೋತ್ಸವ” ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಶ್ರೀಗಳು ತಮ್ಮ ಆಶಿರ್ವನಗಳ ಮೂಲಕ ಸಾರ್ವಜನಿಕರಿಗೆ ಸಂಗೀತದ ಮಹತ್ವದ ಬಗ್ಗೆ ತಿಳಿಯಪಡಿಸಿದರು. ಗಡಿ-ಬಿಡಿ ಬದುಕಿನಿಂದ ಜೀವನ ಸಾಗಿಸುತ್ತಿರುವ ಇಂದಿನ ಯುವಜನಾಂಗಕ್ಕೆ ಸಂಗೀತ ಕಲೆಯೊಂದು ಮಾರ್ಗದರ್ಶಿಯಾಗಿ ನಿಲ್ಲಲಿದ್ದು, ವ್ಯಕ್ತಿಗೆ ಎಂತಹ ಸಂಕಷ್ಠಗಳೇ ಬಂದಿದ್ದರೂ ಕೂಡ ಸಂಗೀತದತ್ತ ಚಿತ್ತ ಹರಿಸಿದ್ದೇಯಾದರೇ… ಅವರ ಕಷ್ಠ-ಸಂಕಷ್ಠಗಳೆಲ್ಲವೂ ಸಂಗೀತನಾದದಿಂದ ಮಾಯವಾಗಲಿವೆ ಎಂದರು. ನಮ್ಮ ದೇಶದ ಸಾಂಸ್ಕೃತಿ ಪರಂಪರೆಯನ್ನು ಉಳಿಸುವುದಕ್ಕಾಗಿ ಹಾಗೂ ಗ್ರಾಮೀಣ ಪ್ರದೇಶಗಳ ಸೊಗಡುಗಳನ್ನು ಎತ್ತಿಹಿಡಿಯುವ ಹಿತದೃಷ್ಠಿಯಿಂದ ಜಾನಪದ ಸಂಗೀತೋತ್ಸವಗಳಂತಹ ವಿಶೇಷ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಅವರು, ಹಮ್ಮಿಕೊಳ್ಳುತ್ತಿರುವ ಕೆಲಸ ಶ್ಲಾಘನಿಯವಾಗಿದೆ ಎಂದರು. ವಿವಿಧ ಗ್ರಾಮಗಳಿಂದ ಆಗಮಿಸಿರುವ ಕಲಾ ತಂಡಗಳಿಂದ ದಾಸವಾಣಿ, ತತ್ವಪದ, ಜಾನಪದ ಗೀತೆಗಳು, ಸಂಪ್ರದಾಯಿಕ ಹಾಡುಗಳು, ಮೋಹರಂ ಪದಗಳು ಹಾಗೂ ಹಂತಿಪದಗಳು ಸಾರ್ವಜನಿಕರನ್ನು ರಂಜಿಸಿದವು. ಪ್ರಮುಖರಾದ ದೇವಾಂಗಪ್ಪ ಲಾಳಿ, ಉಮಾಕಾಂತ, ಬಸವರಾಜ ತೋಟಿ, ದತ್ತರಾವ ಮುಚ್ಚಟ್ಟಿ, ಜಗನ್ನಾಥ ಹೊನಗುಂಟಿ, ಕಾಶಮ್ಮ ಒಡೆಯರಾಜ, ಅಮೃತರಾವ ಗುಂಡಮಿ, ನಿಜಗುಣಯ್ಯಸ್ವಾಮಿ, ಬುಗ್ಗಮ್ಮ ಯಾದವ, ವಿಠಬಾಯಿ, ಅಮೃತ ಯಾದವ, ಮಲ್ಲಿಕಾರ್ಜುನ ಮುಧೋಳ, ಸುರೇಶ ತೋಟಿ, ವಿನೋದಶಿವಪುತ್ರಯ್ಯ ಮಠಪತಿ, ಪ್ರಭಾಕರ ಮುಚ್ಚಟ್ಟಿ, ಮಲ್ಲಯ್ಯಸ್ವಾಮಿ, ನಾರಾಯಣರಾವ ಮಾಳಾ, ಹಣಮಂತ ತೋಟಿ ಸೇರಿದಂತೆ ಅನೇಕರಿದ್ದರು.
ಶ್ರೀ ದೇವರದಾಸಿಮಯ್ಯ ಸಂಗೀತ ಪಾಠ ಶಾಲೆ ಅಧ್ಯಕ್ಷ ಗಣಪತರಾವ ಸಿಂಗಶೇಟ್ಟಿ ಕಾಳಗಿ ಸ್ವಾಗತಿಸಿದರು. ಸೂರ್ಯಕಾಂತ ಕಟ್ಟಿಮನಿ ನಿರೂಪಿಸಿ ವಂದಿಸಿದರು.