10 total views
ಶಿಡ್ಲಘಟ್ಟ : ಮನುಷ್ಯ ಜೀವನದಲ್ಲಿ ಎಷ್ಟೇ ಕಷ್ಟಗಳು ಉಂಟಾದರು ಸರಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತೇವೆ,ನಾವು ಆರೋಗ್ಯದಿಂದ ಇದ್ದರೆ ಏನನ್ನು ಬೇಕಾದರೂ ಸಹ ಸಾದಿಸಬಹುದು ಆದ್ದರಿಂದ ಈ ನಾಡಿನ ಪರಮಾತ್ಮನೆಂದು ಕರೆಯಲ್ಪಡುವ ಡಾ.ಪುನೀತ್ ರಾಜ್ ಕುಮಾರ್ ರವರ ನೆನಪಿಗಾಗಿ ಹಾಗೂ ಬಡವರಿಗೆ ಅನುಕೂಲವಾಗಲೆಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಸ್ಪೂರ್ತಿದಾಯಕ ರಕ್ತದಾನಿಗಳ ಸಂಸ್ಥೆ ರಾಜ್ಯಾಧ್ಯಕ್ಷ ಶಶಿಕುಮಾರ್.ಎ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿಯ ಸಾದಲಿ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಎಂ.ವಿ.ಜೆ ವೈದ್ಯಕೀಯ ಕಾಲೇಜು ಮತ್ತು ಸ್ಪೂರ್ತಿದಾಯಕ ರಕ್ತದಾನಿಗಳ ಸಂಸ್ಥೆ (ರಿ) ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡರು,ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಹೊಸಕೋಟೆಯ ಎಂ.ವಿ.ಜೆ ವೈದ್ಯಕೀಯ ಕಾಲೇಜಿಗೆ ಬರಲು ವಾಹನದ ವ್ಯವಸ್ಥೆ ಮಾಡಲಾಗಿದ್ದು ತಜ್ಞ ವೈದ್ಯರಿಂದ ತಪಾಸಣೆ ಚಿಕಿತ್ಸೆ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಮುನಿರಾಜು, ಜೀವಿಕ ಸಂಸ್ಥೆಯ ಅದ್ಯಕ್ಷ ನರಸಿಂಹಪ್ಪ,ಎಂ.ವಿ.ಜೆ ಡಾ. ಪಾತಿಮ,ಪೋತಲಪ್ಪ ಯುವ ಮುಖಂಡರು ಕೋಟಗಲ್, ವೆಂಕಟೇಶ್ ನಿಲುವರಾತಹಳ್ಳಿ,ಚಂದ್ರಶೇಖರ್ ಎನ್ ವಿ ಯಲುವರಾತಹಳ್ಳಿ,ನಾಗರಾಜ್ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಎನ್,ಜಿಲ್ಲಾ ಅದ್ಯಕ್ಷರು ಮುನಿರಾಜು,ಸುಬ್ರಮಣಿ ರಾಜ್ಯ ಉಪಾಧ್ಯಕ್ಷರು,ಜಿಲ್ಲಾ ಖಜಾಂಚಿ ಚಂದ್ರಶೇಖರ್ ಯುವ ಮುಖಂಡರು, ಮುರಳಿ,ನಾರಾಯಣಸ್ವಾಮಿ,ಮಂಜುನಾಥ್ ಜೆ.ಕೆ,ರಾಜ್ಯ ಖಜಾಂಚಿ ಚಂದ್ರಪ್ಪ ಸಾದಲಿ ಹೋಬಳಿಯ ಗ್ರಾಮಸ್ಥರು ಹಾಗೂ ಮುಖಂಡರುಗಳು ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಸ್ಪೂರ್ತಿದಾಯಕ ರಕ್ತದಾನಿಗಳ ಸಂಸ್ಥೆ ಸಿಬ್ಬಂದಿ ವರ್ಗ ಹಾಜರಿದ್ದರು..