8 total views
ಮೈಸೂರು ಸ್ವಚ್ಛ ನಗರಿ ಅಂತ ಎಲ್ಲೆಡೆ ಫೇಮಸ್. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರೆ ಇಲ್ಲ. ಅದಕ್ಕೆ ಈ ಉರನ್ನ ಪಿಂಚಣಿಗರ ಸ್ವರ್ಗ ಅಂತ ಕರೆಯುತ್ತಾರೆ. ಆದ್ರೆ, ಇಲ್ಲಿಗೆ ಆಗಮಿಸುವ ಯುವಕರು ಹಾಗೂ ಇಲ್ಲಿನ ಯುವ ಜನತೆ ಹಾದಿ ತಪ್ಪುತ್ತಿದ್ಯಾ ಅನ್ನೋ ಅನುಮಾನ ಈಗ ಕಾಡತೊಡಗಿದೆ.KRS ಡ್ಯಾಮ್ ಹಿನ್ನೀರಿನಲ್ಲಿ ರಾಶಿ ರಾಶಿ ಮಧ್ಯದ ಬಾಟಲ್ ಹಾಗೂ ಪೇಪರ್ ಪ್ಲೇಟ್ಸ್, ಗ್ಲಾಸಸ್ ಸೇರಿದಂತೆ ದೊಡ್ಡ ಮಟ್ಟದಲ್ಲಿ ತ್ಯಾಜ್ಯ ಪತ್ತೆಯಾಗಿದೆ. ನೈಸರ್ಗಿಕ ಕಾಳಜಿ ಇಲ್ಲದ ಯುವ ಜನಾಂಗ ಪ್ರಕೃತಿಗೆ ಹಾನಿ ಉಂಟು ಮಾಡಿರೋದು ಇದ್ರಿಂದ ಸಾಬೀತಾಗಿದೆ.
ಕೆ.ಆರ್.ಎಸ್ ಡ್ಯಾಮಿನ ಹಿನ್ನೀರ ಪ್ರದೇಶದಲ್ಲಿ ಆನಂದೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಮೈಸೂರಿನ ಯುವ ಬ್ರಿಗೇಡ್ ಸ್ವಯಂಸೇವಕರು ಸೇರಿ ಮಾಡಿರುವ ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಕಸದ ಮಧ್ಯದಲ್ಲಿ ಗಾಜಿನ ಬಾಟಲಿಗಳು, ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಊಟದ ತಟ್ಟೆಗಳು. ರಾಶಿ ರಾಶಿ ಕರಗದ ಕಸದ ರಾಶಿ ಪತ್ತೆಯಾಗಿದೆ.
ರಾಶಿ ರಾಶಿ ಬಿಯರ್ ಬಾಟಲ್..!
ಕೆಆರ್ ಎಸ್ ಹಿನ್ನೀರು ಪ್ರದೇಶ ಪ್ರವಾಸಿಗರು ಹಾಗೂ ಯುವಕರ ಫೇವರೇಟ್ ಸ್ಪಾಟ್ ವೀಕೆಂಡ್ ಬಂತು ಅಂದ್ರೆ ನೂರಾರು ಯುವಕರು ಇಲ್ಲಿಗೆ ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಅನೇಕ ವರ್ಷಗಳಿಂದ ಇದು ಮುಂದುವರೆದಿದ್ದು, ಎಲ್ಲವೂ ಶೇಖರಣೆ ಆಗಿ ಇಲ್ಲಿನ ಇಡೀ ಪ್ರದೇಶವನ್ನು ಸಂಪೂರ್ಣ ಹಾಳಾಗಿರುವುದು ಕಂಡು ಬರುತ್ತದೆ.