8 total views
ಹೊಸನಗರ : ನವಂಬರ್ 27 ರಂದು ಶಿವಮೊಗ್ಗ ಜಿಲ್ಲಾ ಅಮೆಚ್ಚುರ್ ಅಸೋಸಿಯೇಷನ್16ವರ್ಷದ ವಯೋಮಿತಿಯ ಬಾಲಕಿಯ ರ ಜಿಲ್ಲಾ ಕಬ್ಬಡಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಮಲೆನಾಡು ಪ್ರೌಢಶಾಲಾ ಇಲ್ಲಿನ ನಾಲ್ಕು ವಿದ್ಯಾರ್ಥಿನೀಯರು ಶಿವಮೊಗ್ಗ ಜಿಲ್ಲಾ ಬಾಲಕಿಯರ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿರುತ್ತಾರೆ
ರಂಜಿತಾ ಭೂಮಿಕಾ ಸಿಂಚನ ಮತ್ತು ಮಾನಸ ಎಮ್ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶಾಲೆ ಪರವಾಗಿ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದೆ.
ಡಿಸೆಂಬರ್ 9.10 ಮತ್ತು 11ರಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ ಅವರು ರಾಜ್ಯ ತಂಡವನ್ನು ಆಯ್ಕೆ ಮಾಡಲಿದ್ದಾರೆ
ಡಿಸೆಂಬರ್ 27ರಿಂದ ಡಿಸೆಂಬರ್ 30ರವರೆಗೆ ಸಬ್ ಜೂನಿಯರ್ ನ್ಯಾಷನಲ್ ಬಾಲಕ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟ ಜಾರ್ಖಂಡ್ನಲ್ಲಿ ನಡೆಯಲಿದ್ದು ಶಿವಮೊಗ್ಗ ಜಿಲ್ಲಾ ತಂಡ ರಾಜ್ಯ ತಂಡದಲ್ಲಿ ವಿಜಯಶಾಲಿಗಳಾದರೆ ಮಲೆನಾಡಿನ ಪ್ರತಿಭೆಗಳು ರಾಷ್ಟ್ರೀಯ ಸಬ್ ಜೂನಿಯರ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ
ವರದಿ :MH ರಾಘವೇಂದ್ರ ಸಂಪೋಡಿ