8 total views
2022 23ನೇ ಸಾಲಿನ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ಮತ್ತು ಜಿಲ್ಲಾ ಹಂತದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ದಿನಾಂಕ 25 11 2022 ರಂದು ಶುಕ್ರವಾರ ಅಂಜುಮನ್ ಪ್ರೌಢಶಾಲೆ ನವನಗರ, ಬಾಗಲಕೋಟೆ. ಕಾರ್ಯಕ್ರಮದ ಉದ್ಘಾಟಕರು ಶ್ರೀ ಎಸ್ ಎಸ್ ಬಿರಾದರ್ ಮಾನ್ಯ ಉಪನಿರ್ದೇಶಕರು ಸಾ ಶಿ ಇಲಾಖೆ ಬಾಗಲಕೋಟೆ ಉಪಸ್ಥಿತಿ ಶ್ರೀ ಎಸ್ ವೈ ಮಡಮ್ಗೇರಿ ವಿಷಯ ಪರಿವೀಕ್ಷಕರು ಇಲ್ಲಿ ನಡೆದಂತ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ದಲ್ಲಿ ನಮ್ಮ ಶಾಲೆ ಸೋಮೈಯಾ ವಿನಯ್ ಮಂದಿರ ಪ್ರೌಢಶಾಲೆ ಸಮೀರವಾಡಿ ತಾಲೂಕು ಮುಧೋಳ ಭಾಗವಹಿಸಿ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲೆಯ ವಿದ್ಯಾರ್ಥಿಗಳು ಕುಮಾರ. ಮೃತುಂಜಯ ಪೂಜಾರಿ, ಗಂಗಪ್ಪ ಉಳ್ಳಾಗಡ್ಡಿ ಮತ್ತು ಮಾರ್ಗದರ್ಶನ ಮಾಡಿದ ವೃತ್ತಿ ಶಿಕ್ಷಕ ಶ್ರೀ ಐ ಬಿ ಹಿರೇ ಸೋಮಣ್ಣವರ್ ಗುರುಗಳಿಗೆ ನಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಬಿ ಆರ್ ಭಕ್ಷಿ, ಕಾರ್ಯದರ್ಶಿ ಡಾಕ್ಟರ್ ವ್ಹಿ ಪಿ ಕಣವಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಮುಖ್ಯಗುರುಗಳು ಶ್ರೀ ವ್ಹಿ.ಎಚ್. ಬಜಂತ್ರಿ ಹಾಗೂ ಶಾಲಾ ಸಿಬ್ಬಂದಿ ವರ್ಗ ಅಭಿನಂದನೆಯೊಂದಿಗೆ ರಾಜ್ಯಮಟ್ಟಕ್ಕೆ ಶುಭ ಹಾರೈಸಿದ್ದಾರೆ.